ಮುಂದುವರೆದ ಮುಷ್ಕರ: ನೂರಾರು ಉದ್ಯೋಗಕ್ಕೆ ಸಂಚಕಾರ?

GM India Labour strike
ಗುಜರಾತ್ ನಲ್ಲಿ ಜಿಎಂ ಇಂಡಿಯಾ ಉದ್ಯೋಗಿಗಳ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದ್ದು, ನೂರಾರು ಜನರ ಉದ್ಯೋಗಕ್ಕೆ ಸಂಚಕಾರವಾಗುವ ನಿರೀಕ್ಷೆಯಿದೆ. ಈ ಮುಷ್ಕರದಿಂದಾಗಿ ಕಂಪನಿಗೆ ಒಟ್ಟಾರೆ 850 ಕಾರ್ ಉತ್ಪಾದನೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಗುಜರಾತ್ ನಲ್ಲಿರುವ ಜನರಲ್ ಮೋಟರ್ಸ್(ಜಿಎಂ) ಇಂಡಿಯಾದ ಬೃಹತ್ ಹಾಲೊಲ್ ಘಟಕದಲ್ಲಿ ಕಾರ್ಮಿಕರು ಮುಷ್ಕರ ನಿರತರಾಗಿದ್ದಾರೆ.

ಏನು ಕಾರಣ?: ಕಂಪನಿಯು ಘಟಕದಲ್ಲಿ ಕೆಲಸ ಮಾಡುತ್ತಿರುವ ಕೆಲವರನ್ನು ಡೀಲರ್ ಷಿಪ್ ಕೇಂದ್ರಗಳಲ್ಲಿ ಕೆಲಸ ಮಾಡಲು ಕಳುಹಿಸಲು ನಿರ್ಧರಿಸಿರುವುದು, ಉದ್ಯೋಗಿಗಳಿಂದ ವೇತನಕ್ಕೆ ಸಂಬಂಧಿಸಿದ ದೀರ್ಘಕಾಲದ ಒಪ್ಪಂದವೊಂದಕ್ಕೆ ಕಳೆದ ಡಿಸೆಂಬರ್ ನಲ್ಲಿ ಸಹಿ ಹಾಕಿಸಿರುವುದು ಸೇರಿದಂತೆ ಹಲವು ವಿಷಯಗಳನ್ನಿಟ್ಟುಕೊಂಡು ಕಾರ್ಮಿಕರು ಮುಷ್ಕರ ಆರಂಭಿಸಿದ್ದರು. ಮಾರ್ಚ್ 16ರಿಂದ ಮುಷ್ಕರ ಆರಂಭವಾಗಿದೆ.

ಸೆಕ್ಸನ್ ಜಾರಿ: ಈ ಘಟಕದಲ್ಲಿ ಒಂದು ರಿಜಿಸ್ಟ್ರೇಷನ್ ಆದ "ಜಿಎಂ ಕಾರ್ಮಿಕ ಸಂಘಟನೆ"ಯಿದೆ. ಈಗ ಮುಷ್ಕರ ಆರಂಭವಾಗಿರುವುದು ಹೊಸ ಸಂಘಟನೆಯಿಂದ ಎಂದು ಕಂಪನಿ ಹೇಳಿದೆ. ಇಂಡಿಯನ್ ನ್ಯಾಷನಲ್ ಟ್ರೇಡ್ ಯುನಿಯನ್ ಕಾಂಗ್ರೆಸ್ ಗೆ ಸಂಬಂಧಿಸಿದ ಕಾರ್ಮಿಕ ಸಂಘಟನೆ ಮುಷ್ಕರದ ನೇತೃತ್ವ ವಹಿಸಿದೆ ಎನ್ನಲಾಗಿದೆ. ಈ ಮುಷ್ಕರವು ಅಸಂವಿಧಾನಿಕವೆಂದು ರಾಜ್ಯ ಸರಕಾರ ಈ ಹಿಂದೆಯೇ ಹೇಳಿದ್ದು, ಇದಕ್ಕಾಗಿ ಘಟಕದ ಆಸುಪಾಸಿನಲ್ಲಿ ಐಪಿಸಿ 144 ಸೆಕ್ಸನ್ ಜಾರಿಗೊಳಿಸಿತ್ತು.

ಪರಿಣಾಮ: ಕಂಪನಿಯು ಸುಮಾರು 250 ಉದ್ಯೋಗಿಗಳಿಗೆ ಮಾರ್ಚ್ 25ಕ್ಕೆ ಮುನ್ನ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಮರಳುವಂತೆ, ಇಲ್ಲವಾದಲ್ಲಿ ಸೇವಾವಧಿ ಕೊನೆಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೂ 200ಕ್ಕಿಂತ ಹೆಚ್ಚಿನ ಉದ್ಯೋಗಿಗಳಿನ್ನೂ ಮುಷ್ಕರ ನಿಲ್ಲಿಸದಿರುವುದರಿಂದ ಕಂಪನಿ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. "ಉದ್ಯೋಗಿಗಳ ವಿರುದ್ಧ ಕ್ರಮಜರುಗಿಸುವ ಕುರಿತು ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸುತ್ತಿದ್ದೇವೆ" ಎಂದು ಜನರಲ್ ಮೋಟರ್ಸ್ ಇಂಡಿಯಾ ಉಪಾಧ್ಯಕ್ಷರು ಹೇಳಿದ್ದಾರೆ.

ಹೂಡಿಕೆ ಸ್ನೇಹಿ ರಾಜ್ಯವೆಂಬ ಗುಜರಾತ್ ಗೆ ಇಂತಹ ಸ್ಟ್ರೈಕ್ ಗಳು ಕಪ್ಪುಚುಕ್ಕೆಯಾಗುವ ಸಾಧ್ಯತೆಯಿದೆ. ಆಸಕ್ತಿದಾಯಕ ವಿಷಯವೆಂದರೆ ಗುಜರಾತ್ ನಲ್ಲಿ ಕೈಗಾರಿಕೇತರ ಮುಷ್ಕರಗಳಿಗಿಂತ ಇಂತಹ ಕಾರ್ಮಿಕರ ಮುಷ್ಕರಗಳು ಹೆಚ್ಚು ನಡೆದಿವೆ ಎಂದು 2010-11ರ ಆರ್ಥಿಕ ಸಮೀಕ್ಷೆ ತಿಳಿಸಿತ್ತು.

ಕಂಪನಿಗಾದ ನಷ್ಟ: ಈಗ ಶೇ. 70ರಷ್ಟು ಉದ್ಯೋಗಿಗಳು ಕೆಲಸಕ್ಕೆ ಮರಳಿದ್ದಾರೆ. ಈ ಮುಷ್ಕರದಿಂದಾಗಿ ಸುಮಾರು 850 ವಾಹನ ಉತ್ಪಾದನೆಗೆ ತೊಡಕಾಗಿದೆ ಎಂದು ಕಂಪನಿ ತಿಳಿಸಿದೆ. ಜಿಎಂ ಇಂಡಿಯಾ ಈಗಾಗಲೇ ಹಾಲೊಲ್ ಘಟಕದ ಸ್ಪಾರ್ಕ್ ಕಾರ್ ಉತ್ಪಾದನೆಯನ್ನು ತಾಲೆಗಾಂವ್ ಘಟಕಕ್ಕೆ ಸಿಫ್ಟ್ ಮಾಡಿದೆ. ಹಾಲೊಲ್ ಘಟಕದಲ್ಲಿ ಸುಮಾರು 900 ಉದ್ಯೋಗಿಗಳಿದ್ದು ಪ್ರತಿದಿನ 190ರಷ್ಟು ಕಾರ್ ಉತ್ಪಾದಿಸಲಾಗುತ್ತಿತ್ತು. ಮುಷ್ಕರದಿಂದಾಗಿ ಪ್ರತಿದಿನ ಸುಮಾರು 100ರಷ್ಟು ಕಾರ್ ಉತ್ಪಾದಿಸಲಾಗುತ್ತಿದೆ.

More from DriveSpark

Article Published On: Wednesday, March 30, 2011, 17:15 [IST]
English summary
The stalemate between striking workers and management of GM India continues for 14th day. If strike continues GM India may cut down number of employees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+