ಆರ್ ಆಂಡ್ ಡಿ ವಿಭಾಗಕ್ಕೆ ಟಾಟಾ ಪೌಂಡ್ ಪೌಂಡ್ ಹೂಡಿಕೆ

ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಮಾಲೀಕ ಟಾಟಾ ಮೋಟರ್ಸ್ ಇತ್ತೀಚೆಗೆ ಯುರೋಪ್ ನಲ್ಲಿ ಪಿಕ್ಸೆಲ್ ಕಾರ್ ಗಳನ್ನು ಔಪಚಾರಿಕವಾಗಿ ಅನಾವರಣ ಮಾಡಿತ್ತು. ಅಲ್ಲಿನ ತಂತ್ರಜ್ಞಾನ ಘಟಕಕ್ಕೆ ಹೆಚ್ಚುವರಿಯಾಗಿ ನೂರು ಎಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲು ಕಂಪನಿ ನಿರ್ಧರಿಸಿದೆ. ಇದರಿಂದ ಅಲ್ಲಿನ ಎಂಜಿನಿಯರ್ ಗಳ ಸಂಖ್ಯೆ 340ಕ್ಕೆ ಮುಟ್ಟಲಿದೆ. ಕಂಪನಿಯು ಕಡಿಮೆ ಇಂಗಾಲ ಹೊರಬಿಡುವ ಎಂಜಿನ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ಕಂಪನಿಯು ವಿಸ್ಟಾ ಎಲೆಕ್ಟ್ರಿಕ್ ಆವೃತ್ತಿ ಮತ್ತು ಪಿಕ್ಸೆಲ್ ಸಿಟಿ ಕಾರ್ ಗಳನ್ನು ಉತ್ಪಾದಿಸಲಿದೆ. ಅದಕ್ಕಾಗಿ ಅಲ್ಲಿ ಪೌಂಡ್ ಪೌಂಡ್ ಹೂಡಿಕೆ ಮಾಡುತ್ತಿದೆ.
ಹಾಗಂತ ಬ್ರಿಟನ್ ನಲ್ಲಿ ಕಂಪನಿಯ ಹೂಡಿಕೆ ಇದು ಮೊದಲಲ್ಲ. 2005ರಿಂದ ಇಲ್ಲಿವರೆಗೆ ಅಲ್ಲಿನ ತಂತ್ರಜ್ಞಾನ ಘಟಕಕ್ಕೆ ಸುಮಾರು 8.5 ಕೋಟಿ ಪೌಂಡ್ ಹೂಡಿಕೆ ಮಾಡಿದೆ. ಈ ಕೇಂದ್ರವು ಅಲ್ಲಿನ ವಾರ್ವಿಕ್ ಮ್ಯಾನುಫ್ಯಾಕ್ಚರಿಂಗ್ ಗ್ರೂಪ್ ನೆರವಿನಿಂದ ನಡೆಯುತ್ತಿದೆ. ಇಂಗ್ಲೆಂಡ್ ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಹೆಚ್ಚಿನ ಉತ್ತೇಜನ ನೀಡಲು ಮತ್ತು ಮೌಲ್ಯಯುತವಾದ ಉತ್ಪನ್ನ ಹೊರತರಲು ಸುಮಾರು 5 ಕೋಟಿ ಪೌಂಡ್ ಹೂಡಿಕೆ ಮಾಡಲಾಗುವುದು ಎಂದು ಕಂಪನಿಯ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.


Click it and Unblock the Notifications








