ನ್ಯಾನೊ, ಆಲ್ಟೊ ಎದುರಾಳಿ: ಹೋಂಡಾ ಸಣ್ಣಕಾರು

ಟಾಟಾ ನ್ಯಾನೊ ಮತ್ತು ಮಾರುತಿ ಸುಜುಕಿ ಆಲ್ಟೊ ಕಾರುಗಳಿಗೆ ಪ್ರತಿಸ್ಪರ್ಧಿಯಾಗಬಲ್ಲ ನೂತನ ಸಣ್ಣಕಾರೊಂದನ್ನು ಹೋಂಡಾ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳು ಹೇಳಿವೆ. ಪ್ರಸಕ್ತ ವರ್ಷದ ಅಂತ್ಯದೊಳಗೆ ಬ್ರಿಯೊ ಡೀಸೆಲ್ ಕಾರನ್ನು ಹೋಂಡಾ ಪರಿಚಯಿಸಲಿದೆ ಎಂದು ವದಂತಿಗಳಿದ್ದವು. ಇದೀಗ ಕಂಪನಿಯು ಗ್ರಾಹಕರಲ್ಲಿ ಹೊಸ ಸಣ್ಣಕಾರೊಂದರ ನಿರೀಕ್ಷೆಯನ್ನೂ ಮೂಡಿಸಿದೆ.

ತನ್ನ ಸಣ್ಣಕಾರುಗಳಿಗೆ ಅತ್ಯಧಿಕ ಇಂಧನ ದಕ್ಷತೆಯ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವುದಾಗಿ ಮಾರುತಿ ಸುಜುಕಿ ಪ್ರಕಟಿಸಿದ ನಂತರ ಮಾರುಕಟ್ಟೆಯಲ್ಲಿ ಸಣ್ಣಕಾರುಗಳ ಭರಾಟೆ ಜೋರಾಗುವ ಸೂಚನೆ ದೊರಕಿದೆ. ಟಾಟಾ ಕೂಡ ಅತ್ಯಧಿಕ ಇಂಧನ ದಕ್ಷತೆಯ ಡೀಸೆಲ್ ಎಂಜಿನ್ ನ್ಯಾನೊ ಪರಿಚಯಿಸಲು ಯೋಜಿಸಿದೆ.

ನೂತನ ಹೋಂಡಾ ಸಣ್ಣಕಾರಿನ ಹೆಸರು ಎನ್600 ಎಂದಿರುವ ನಿರೀಕ್ಷೆಯನ್ನು ವರದಿಗಳು ವ್ಯಕ್ತಪಡಿಸಿವೆ. ಇದು 133 ಇಂಚು ಉದ್ದ ಮತ್ತು 58 ಇಂಚು ಅಗಲ ಇದೆ. ಹೋಂಡಾ ಎನ್600 ಕಾರನ್ನು ಕಳೆದ ವರ್ಷ ಟೊಕಿಯೊ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

ನೂತನ ಹೋಂಡಾ ಕಾರು 660 ಸಿಸಿಯ ವಿಟೆಕ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಇದು 64 ಅಶ್ವಶಕ್ತಿ ನೀಡುತ್ತದೆ. ನೂತನ ಹೋಂಡಾ ಸಣ್ಣಕಾರಿನ ದರ ನ್ಯಾನೊ ಮತ್ತು ಆಲ್ಟೊ ದರದ ಆಸುಪಾಸಿನಲ್ಲಿರಲಿದೆ. ಅಂದರೆ ಸುಮಾರು 2-3 ಲಕ್ಷ ರು. ನಡುವೆ ಇರಲಿದೆ.

ನೂತನ ಕಾರು 2014ರ ವೇಳೆಗೆ ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಕೊಂಚ ಸಮಯ ಕಾಯುವುದು ಅನಿವಾರ್ಯ.

Most Read Articles

Kannada
English summary
Honda Developing New Small Car, Launch In 2014. Japanese carmaker is developing a new small car to rival the likes of Tata Nano and Maruti Suzuki Alto.
Story first published: Tuesday, July 10, 2012, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X