ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

Written By:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ ಹೋಂಡಾ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತೇರಡು ವಿನೂತನ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ಮಾಹಿತಿ ಇಲ್ಲಿದೆ ನೋಡಿ..

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಹೋಂಡಾ WR-V ಮಾರಾಟದಲ್ಲಿ ಯಶಸ್ಸು ಕಂಡಿರುವ ಹೋಂಡಾ ಸಂಸ್ಥೆಯು ಹ್ಯುಂಡೈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಬಲ್ಲ ವಿನೂತನ ಕಂಪ್ಯಾಕ್ಟ್ ಎಸ್‌ಯುವಿ ಹಾಗೂ ಸಾಮಾನ್ಯ ಎಸ್‌ಯುವಿಯೊಂದನ್ನು ನಿರ್ಮಾಣ ಮಾಡುತ್ತಿದೆ. 4-ಮೀಟರ್ ಉದ್ದವುಳ್ಳ ಕ್ರೇಟಾ ಮಾದರಿಯಲ್ಲೇ ಹೊಸ ಕಾರುಗಳನ್ನು ನಿರ್ಮಾಣವಾಗಲಿದ್ದು, ಮಧ್ಯಮ ಗಾತ್ರದ ಹಲವು ಕಾರು ಮಾದರಿಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ಗುರಿಹೊಂದಿದೆ.

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಹೋಂಡಾ ಬಿಡುಗಡೆ ಮಾಡುವ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ ಹೊಸ ಕಾರುಗಳು 4 ಮೀಟರ್ ಉದ್ದಳತೆ ಹೊಂದಿದೆ ಎನ್ನಲಾಗಿದ್ದು, ಕ್ರಾಸ್‌ಓವರ್ ಇಲ್ಲವೇ ಎಸ್‌ಯುವಿ ವೈಶಿಷ್ಟ್ಯತೆ ಹೊಂದಿರಲಿವೆ ಎನ್ನಲಾಗಿದೆ.

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿರುವ WR-V ಮಾದರಿಗಿಂತ ಕೆಳದರ್ಜೆಯ ಮತ್ತು ಬ್ರಿಯೋಗಿಂತ ಹೆಚ್ಚಿನ ಗುಣಮಟ್ಟದ ಮಾದರಿಯಾಗಲಿರುವ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಕಾರು, 2ಯುಎ ಎಂಬ ಕೋಡ್‌ನೆಮ್ ಅಡಿ ಅಧ್ಯಯನ ಹಂತದಲ್ಲಿದೆ.

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಒಂದು ವೇಳೆ ಹೋಂಡಾ ತಂಡವು ಕೈಗೊಂಡಿರುವ ಅಧ್ಯಯನಕ್ಕೆ ಮಾರುಕಟ್ಟೆಯಲ್ಲಿ ಸಕರಾತ್ಮಕ ಪ್ರಕ್ರಿಯೆ ಸಿಕ್ಕಲ್ಲಿ ಮುಂದಿನ ವರ್ಷವೇ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ರಸ್ತೆಗಿಳಿಯಲಿದ್ದು, 1.2-ಲೀಟರ್ ಪೆಟ್ರೋಲ್ ಅಥವಾ 1.2-ಲೀಟರ್ ಡಿಸೇಲ್ ಎಂಜಿನ್ ಪಡೆದುಕೊಳ್ಳಲಿವೆ.

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಜೊತೆಗೆ ಸ್ಟ್ಯಾಂಡರ್ಡ್ ಇಂಟಿರಿಯರ್ ಮತ್ತು ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಳ್ಳಲಿರುವ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿಯು ಮಧ್ಯಮ ಗಾತ್ರದ ಕಾರುಗಳನ್ನು ಇಷ್ಟಪಡುವ ಭಾರತೀಯ ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಇನ್ನು ಎರಡನೇ ಎಸ್‌ಯುವಿ ಕಾರು ಕೂಡಾ ಕ್ರೇಟಾ ಮಾದರಿಯಲ್ಲಿ ಸಿದ್ದಗೊಳ್ಳುವುದು ಖಚಿತವಾಗಿದ್ದು, 1.5-ಲೀಟರ್ ಎಂಜಿನ್‌ನೊಂದಿದೆ 5-ಸೀಟರ್ ಇಲ್ಲವೇ 7-ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದು ಕೂಡಾ ಪ್ರಿಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ.

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಇನ್ನು ಕಳೆದ ಡಿಸೆಂಬರ್‌ನಿಂದಲೇ ಮೊಬಿಲಿಯೊ ಎಂಪಿವಿ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಹೋಂಡಾ ಸಂಸ್ಥೆಯು ಸಿಟಿ ಸೆಡಾನ್, ಡಬ್ಲ್ಯುಆರ್-ವಿ, ಝಾ, ನ್ಯೂ ಅಮೇಜ್ ಸೆಮಿ ಸೆಡಾನ್, ಸಿಆರ್-ವಿ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ನಿರ್ಮಾಣದ ಮೇಲೂ ವಿಶೇಷ ಆಸಕ್ತಿ ತೊರಿದೆ.

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಒಟ್ಟಿನಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ಮಾರುತಿ ವಿಟಾರಾ ಬ್ರೇಝಾ, ಫೋರ್ಡ್ ಇಕೋ ಸ್ಪೋರ್ಟ್, ಟಾಟಾ ನೆಕ್ಸಾನ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿರುವ ಹೋಂಡಾ ಸಂಸ್ಥೆಯು, ವಿನೂತನ ಕಾರುಗಳನ್ನು ಕೈಗೆಟುಕುವ ಬೆಲೆಗಳಲ್ಲಿ ಬಿಡುಗಡೆಗೊಳಿಸಲು ಎದರು ನೋಡುತ್ತಿದೆ.

ಹೋಂಡಾದಿಂದ ಭಾರತೀಯ ಮಾರುಕಟ್ಟೆಗಾಗಿ ಮತ್ತೇರಡು ಹೊಸ ಕಾರುಗಳು

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

English summary
Honda To Introduce Two New SUVs In India.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark