ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಮಾಡಿಫೈ ವಾಹನಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಈ ಹಿನ್ನೆಲೆ ಫೋರ್ಡ್ ಡೀಲರ್ಸ್‌ಗಳು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ದುಬಾರಿ ಬೆಲೆಯ ಎಂಡೀವರ್ ಎಸ್‌ಯುವಿಯನ್ನು ಮಾಡಿಫೈ ಮಾಡಿ ಮಾರಾಟಗೊಳಿಸುತ್ತಿದ್ದಾರೆ.

By Praveen Sannamani

ದಿನ ಬಳಕೆಯ ಜೊತೆಗೆ ಆಫ್ ರೋಡ್‌ನಲ್ಲೂ ಅದ್ಬುತ ಕೌಶಲ್ಯ ಪ್ರದರ್ಶಿಸುವ ಫೋರ್ಡ್ ಎಂಡೀವರ್ ಎಸ್‌ಯುವಿ ಕಾರುಗಳು 7 ಸೀಟರ್ ಮತ್ತು ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಪ್ರೇರಣೆಯೊಂದಿಗೆ ಸದ್ಯ ಟೊಯೊಟಾ ಫಾರ್ಚೂನರ್ ಎಸ್‌ಯುವಿಯ ನೇರ ಪ್ರತಿಸ್ಪರ್ಧಿಯಾಗಿದ್ದು, ಓಡಿಸ್ಸಾದಲ್ಲಿ ಫೋರ್ಡ್ ಅಧಿಕೃತ ಮಾರಾಟಗಾರರು ಮಾಡಿಫೈ ಎಂಡೀವರ್ ಕಾರುಗಳನ್ನು ಮಾರಾಟ ಮಾಡುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಮೊದಲೇ ಆಫ್ ರೋಡ್ ಎಸ್‌ಯುವಿ ಮಾದರಿಯಾಗಿರುವ ಫೋರ್ಡ್ ಎಂಡೀವರ್ ಕಾರುಗಳು ಮಾಡಿಫೈ ನಂತರ ಮತ್ತಷ್ಟು ಬದಲಾವಣೆ ಮಾಡಲಾಗಿದ್ದು, ಕಾರಿನ ಬ್ಯಾನೆಟ್, ಗ್ರೀಲ್ ಮತ್ತು ಚಕ್ರಗಳ ವಿಭಾಗದಲ್ಲಿ ಗುರುತರ ಬದಲಾವಣೆ ತರಲಾಗಿದೆ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಆಪ್ ರೋಡಿಂಗ್ ಕೌಶಲ್ಯಕ್ಕೆ ಸಹಕಾರಿಯಾಗುವಂತೆ ಏರ್‌ಡೈಮಾನಿಕ್ ವಿನ್ಯಾಸಗಳನ್ನು ಹೊರತರಲಾಗಿದ್ದು, ರೂಫ್ ರೈಲ್ಸ್, ಮೂಲ ಮಾದರಿಯಂತೆ ಸಿಲ್ವರ್ ಶೈಡ್ ಅಳವಡಿಸಲಾಗಿದೆ. ಆದರೂ ಮಾಡಿಫೈ ಮಾದರಿಯಲ್ಲಿ ಅತಿಯಾದ ತೂಕ ಕಂಡುಬಂದಿಲ್ಲ. ಇದು ಇಂಧನ ಕಾರ್ಯಕ್ಷಮತೆ ಸಹಕಾರಿಯಾಗಲಿದೆ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಮೇಲೆ ಹೇಳಿದಂತೆ ಚಕ್ರಗಳ ವಿಭಾಗದಲ್ಲಿ ಗುರುತರ ಬದಲಾವಣೆ ತಂದಿರುವ ಮಾಡಿಫೈ ತಂತ್ರಜ್ಞರು 6-ಸ್ಪೋಕ್ ಅಲಾಯ್ ಮಾದರಿಯ 20-ಇಂಚು ಗಾತ್ರದ ಟೈರ್ ಬಳಕೆ ಮಾಡಿದೆ. ಇದು ಕಾರಿನ ಹೊರ ವಿನ್ಯಾಸದ ಆಕರ್ಷಣೆ ಕಾರಣವಾಗಿದ್ದು, ಎಸ್‌ಯುವಿ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯುತ್ತದೆ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಇನ್ನು ಕಾರಿನ ಹಿಂಭಾಗ ವಿನ್ಯಾಸ ಬಗ್ಗೆ ಹೇಳುವುದಾರರೇ, ಕಾರಿನ ಹೊರ ಮೈ ವಿನ್ಯಾಸವನ್ನು ಸಂಪೂರ್ಣ ಬ್ಲ್ಯಾಕ್ ಥೀಮ್ ಬಳಕೆ ಮಾಡಲಾಗಿದ್ದು, ವಿಸ್ತರಿತ ಟೈಲ್ ಲ್ಯಾಂಪ್, ಕ್ರೋಮ್ ಗ್ರಾನಿಷ್‌ಗಳು ಕಾರಿನ ಖದರ್ ಹೆಚ್ಚಿಸಿವೆ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಎಂಜಿನ್ ಸಾಮರ್ಥ್ಯ

ಪ್ರಮುಖ ಎರಡು ಮಾದರಿಯ ಡೀಸೆಲ್ ಎಂಜಿನ್ ಲಭ್ಯವಿರುವ ಎಂಡೀವರ್ ಕಾರುಗಳು 2.2-ಲೀಟರ್ ಫೌರ್ ಸಿಲಿಂಡರ್ ಮತ್ತು 3.2-ಲೀಟರ್ ಫೈವ್ ಸಿಲಿಂಡರ್ ಎಂಜಿನ್‌ ಹೊಂದಿದ್ದು, 2.2-ಲೀಟರ್ ಮಾದರಿಯು 158ಬಿಎಚ್‌ಪಿ, 385ಎನ್ಎಂ ಟಾರ್ಕ್ ಮತ್ತು 3.2-ಲೀಟರ್ ಮಾದರಿಯು 197ಬಿಎಚ್‌ಪಿ, 470ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಜೊತೆಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿದ್ದು, ಸುರಕ್ಷೆಯ ಪ್ರಯಾಣಕ್ಕಾಗಿ ಒಟ್ಟು 6 ಸ್ಟ್ಯಾಂಡರ್ಡ್ ಏರ್‌ಬ್ಯಾಗ್ ಪಡೆದಿದೆ. ಬ್ರೇಕಿಂಗ್ ವಿಭಾಗದಲ್ಲೂ ಹೆಚ್ಚಿನ ಕಾಳಜಿ ವಹಿಸಲಾಗಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಪ್ರತಿ ಚಕ್ರದಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಮಾಡಲಾಗಿದೆ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಬೆಲೆಗಳು

ಸದ್ಯ ಎಕ್ಸ್‌ಶೋರಂ ಪ್ರಕಾರ ಆಲ್ ವೀಲ್ಹ್ ಟೆಕ್ನಾಲಜಿ ಪ್ರೇರಿತ ಎಂಡೀವರ್ ಕಾರುಗಳು ಆರಂಭಿಕವಾಗಿ ರೂ.26.32ಲಕ್ಷ ಬೆಲೆ ಹೊಂದಿದ್ದು, ಮಾಡಿಫೈಗೊಂಡ ಎಂಡೀವರ್ ಕಾರುಗಳು ಮೂಲ ಬೆಲೆಗಿಂತ 2 ರಿಂದ 3 ಲಕ್ಷ ಹೆಚ್ಚುವರಿಯಾಗಲಿವೆ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ದೇಶಾದ್ಯಂತ ವಿವಿಧ ಮಾದರಿಯಲ್ಲಿ ಮಾಡಿಫೈಗೊಂಡ ಎಂಡೀವರ್ ಕಾರುಗಳನ್ನು ನೋಡಬಹುದಾಗಿದ್ದು, ಅದಕ್ಕಾಗಿ ಎಸ್‌ಯುವಿ ಪ್ರಿಯರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಆದ್ರೆ ಓಡಿಸ್ಸಾದಲ್ಲಿ ಅಧಿಕೃತ ಡೀಲರ್‌ಗಳೇ ಮಾಡಿಫೈ ಮಾದರಿಗಳನ್ನು ಮಾರಾಟ ಮಾಡುತ್ತಿರುವುದು ಖರ್ಚು ಸಹ ತಗ್ಗಲಿದ್ದು, ಅದಕ್ಕಾಗಿ ಖಾತ್ರಿ ಕೂಡಾ ಸಿಗುತ್ತದೆ ಎನ್ನುವುದೇ ಇಲ್ಲಿನ ಇಂಟ್ರಸ್ಟಿಂಗ್ ವಿಚಾರ.

ಎಸ್‌ಯುವಿ ಪ್ರಿಯರನ್ನು ಸೆಳೆದ ಮಾಡಿಫೈ ಫೋರ್ಡ್ ಎಂಡೀವರ್...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ತಾಂತ್ರಿಕ ದೋಷದಿಂದಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಬಿಜೆಪಿ ಮುಖಂಡನ ಹೊಸ ಫೋರ್ಡ್ ಎಂಡೀವರ್...

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಸಲ್ಮಾನ್ ಖಾನ್ ಜೊತೆ ಜಾಲಿ ರೈಡ್‌ಗೆ ಹೋಗಿದ್ದ ನಟಿ ಜಾಕ್ವೆಲಿನ್ ಹೀಗೆ ಮಾಡಿದ್ದು ಸರಿನಾ?

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

Most Read Articles

Kannada
Read more on car modifications ford
English summary
Ford Endeavour Modified By Dealership.
Story first published: Friday, April 27, 2018, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X