ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಸಣ್ಣ ಗಾತ್ರದ ಕಾರು ಮಾರಾಟದಲ್ಲಿ ಈ ಹಿಂದೆ ಜನಪ್ರಿಯತೆ ಸಾಧಿಸಿದ್ದ ಹೋಂಡಾ ಬ್ರಿಯೋ ಹ್ಯಾಚ್‌ಬ್ಯಾಕ್ ಕಾರುಗಳು ಸದ್ಯ ಬೇಡಿಕೆಯಿಲ್ಲದೆ ಮಾರಾಟದಲ್ಲಿ ನೆಲಕಚ್ಚಿದ್ದು, ಈ ಹಿನ್ನೆಲೆ ಹೋಂಡಾ ಇಂಡಿಯಾ ಸಂಸ್ಥೆಯು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಗ್ರಾಹಕರನ್ನು ಸೆಳೆಯುವಲ್ಲಿ ಸಂಪೂರ್ಣ ವಿಫಲವಾಗಿರುವ ಬ್ರಿಯೋ ಕಾರುಗಳು ಭಾರತೀಯ ಮಾರುಕಟ್ಟೆಯಿಂದ ಹಿಂಪಡೆಯುವ ಬಗ್ಗೆ ಹೋಂಡಾ ಸುಳಿವು ನೀಡಿದ್ದು, ಇತ್ತೀಚೆಗೆ ನಡೆದ ಮಾರುಕಟ್ಟೆಯಲ್ಲಿ ಕೆಲವು ವಿದ್ಯಮಾನಗಳಿಂದಾಗಿ ಬ್ರಿಯೋ ಕಾರುಗಳ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿಯೆಂತೆ.

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಸದ್ಯ ದೇಶಿಯ ಮಾರುಕಟ್ಟೆಯ ಕಾರು ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಹೋಂಡಾ ಕಾರು ವಿಭಾಗವು ಬ್ರಿಯೋ ಮಾರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಇದೇ ಕಾರಣಕ್ಕೆ ಬೇಡಿಕೆಯಲ್ಲಿರುವ ಪ್ರಿಮಿಯಂ ಎಸ್‌ಯುವಿ ಕಾರುಗಳತ್ತ ಗ್ರಾಹಕರ ಹೆಚ್ಚಿನ ಗಮನಹರಿಸುತ್ತಿರುವುದು.

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಇದಲ್ಲದೇ ಬ್ರಿಯೋ ಕಾರುಗಳು ಕಳೆದ 1 ವರ್ಷದಿಂದ ತಿಂಗಳಿಗೆ ಸರಾಸರಿಯಾಗಿ 400ರಿಂದ 500 ಕಾರುಗಳು ಮಾತ್ರ ಮಾರಾಟವಾಗುತ್ತಿದ್ದು, ಎಂಟ್ರಿ ಲೆವಲ್ ಕಾರುಗಳು ಕನಿಷ್ಠ ಅಂದ್ರು ತಿಂಗಳಿಗೆ 2 ಸಾವಿರಕ್ಕಿಂತ ಕಡಿಮೆ ಮಾರಾಟ ಹೊಂದಿದ್ದಲ್ಲಿ ಅದು ಗ್ರಾಹಕನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದರ್ಥ.

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಹೀಗಾಗಿ ಬ್ರಿಯೋ ಸ್ಟಾಕ್ ಮುಗಿಯುವ ತನಕ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಇದೇ ವರ್ಷಾಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಮಾರಾಟ ಪ್ರಕ್ರಿಯೆ ಬಂದ್ ಆಗುವುದು ಖಚಿತವಾಗಿದೆ. ಇದರೊಂದಿಗೆ 2011ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಬ್ರಿಯೋ ಪ್ರಯಾಣ 2018ರ ಅಂತ್ಯಕ್ಕೆ ಕೊನೆಗೊಳ್ಳಲಿದೆ.

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಇನ್ನು ಹೋಂಡಾ ನಿರ್ಮಾಣದ ಎಸ್‌ಯುವಿಗಳು ದಿನದಿಂದ ದಿನಕ್ಕೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಾರಾಟದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಬ್ರಿಯೋ ಜೊತೆಗೆ ಬಿಆರ್-ವಿ ಕಾರುಗಳನ್ನು ಸಹ ಭಾರತದಲ್ಲಿ ಸ್ಥಗಿತಗೊಳಿಸುವ ಯೋಚನೆಯಲ್ಲಿದೆ.

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಈ ಬಗ್ಗೆ ಮಾತನಾಡಿರುವ ಹೋಂಡಾ ಕಾರ್ಸ್ ಇಂಡಿಯಾ ಎಂಡಿ ಒಯಿಚಿರೊ ಯುನೊ ಅವರು ಭಾರತೀಯ ಕಾರು ಖರೀದಿದಾರರು ಪ್ರೀಮಿಯಂ ಎಸ್‌ಯುವಿ ಖರೀದಿದತ್ತ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಈ ವಿಫುಲ ಅವಕಾಶ ಬಳಸಿಕೊಳ್ಳಲು ಹೋಂಡಾ ಸದ್ಯದಲ್ಲೇ ಬೃಹತ್ ಯೋಜನೆ ಹಮ್ಮಿಕೊಳ್ಳುತ್ತಿದೆ' ಎಂದಿದ್ದಾರೆ.

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಬ್ರಿಯೋ ಹ್ಯಾಚ್‌ಬ್ಯಾಕ್‌ನಂತೆ ಬಿಆರ್-ವಿ ಮಾರಾಟವನ್ನು ಸಹ ಭಾರತದಲ್ಲಿ ಸ್ಥಗಿತಗೊಳಿಸುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿರುವ ಒಯಿಚಿರೊ ಯುನೊ, ಹೊಸ ಮಾದರಿಯ ಅಮೇಜ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಹಾಗೂ ಪ್ರೀಯಮಂ ಆವೃತ್ತಿಯಾದ ಹೆಚ್‌ಆರ್-ವಿ ಎಸ್‌ಯುವಿ ಹೊರತರುವ ಬಗ್ಗೆ ಸುಳಿವು ನೀಡಿದ್ದಾರೆ.

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಇದರ ಜೊತೆ ಸದ್ಯ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಸಿಟಿ ಸೆಡಾನ್, ಡಬ್ಲ್ಯುಆರ್-ವಿ, ಝಾಜ್ ಹ್ಯಾ‌ಚ್‌ಬ್ಯಾಕ್, ನ್ಯೂ ಅಮೇಜ್ ಸೆಮಿ ಸೆಡಾನ್, ಹೈ ಎಂಡ್ ಕಾರು ಸಿಆರ್-ವಿ ಕಾರುಗಳ ವೈಶಿಷ್ಟ್ಯತೆಗಳನ್ನು ಉನ್ನತಿಕರಿಸುವ ಮೂಲಕ ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದೆ.

MOST READ: 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಬೆಂಟ್ಲಿ ಕಾರಿನ ಒಡೆಯ

ಬ್ರಿಯೋ ಕಾರುಗಳಿಗೆ ಗುಡ್ ಬೈ ಹೇಳಿದ ಹೋಂಡಾ ಮುಂದಿನ ಪ್ಲ್ಯಾನ್ ಏನು?

ಒಟ್ಟಿನಲ್ಲಿ ಎಂಟ್ರಿ ಲೆವಲ್ ಕಾರು ಮಾದರಿಯಾಗಿದ್ದ ಬ್ರಿಯೋ ಕೈಬಿಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿರುವ ಹೋಂಡಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಹೊರತುಪಡಿಸಿ ಬ್ರಿಯೋ ಫೇಸ್‌ಲಿಫ್ಟ್ ಆವೃತ್ತಿಯನ್ನು ವಿದೇಶಿ ಮಾರುಕಟ್ಟೆಗಳಿಗೆ ಮಾತ್ರ ರಫ್ತು ಮಾಡುವ ಉದ್ದೇಶವನ್ನು ಕೂಡಾ ಹೊಂದಿದೆ.

More from DriveSpark

ಹ್ಯುಂಡೈ ನಿರ್ಮಾಣದ ಹೊಸ ಸ್ಯಾಂಟ್ರೋ ಕಾರಿನ ಫೋಟೋ ಗ್ಯಾಲರಿ..!

Article Published On: Monday, November 19, 2018, 18:56 [IST]
English summary
Honda Brio Discontinued — Honda Cars India To Concentrate On SUVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+