ಪರೀಕ್ಷೆ ವೇಳೆ ಟಾಟಾ ನ್ಯಾನೊ ಎಲೆಕ್ಟ್ರಿಕ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆ

Written By:

ಟಾಟಾ ಮೋಟಾರ್ಸ್ ಕಂಪನಿಯು ತನ್ನ ನ್ಯಾನೊ ಕಾರಿನ ಅದೃಷ್ಟವನ್ನು ಮತ್ತೆ ಪರೀಕ್ಷೆ ಮಾಡಲು ಮುಂದಾಗಿದ್ದು, ಇತ್ತೀಚೆಗೆ ಈ ಟಾಟಾ ನ್ಯಾನೊ ಎಲೆಕ್ಟ್ರಿಕ್ ಕಾರು ಕೊಯಮತ್ತೂರಿನಲ್ಲಿ ಪರೀಕ್ಷೆ ಮಾಡಲಾಗಿದೆ.

ಪರೀಕ್ಷೆ ವೇಳೆ ಟಾಟಾ ನ್ಯಾನೊ ಎಲೆಕ್ಟ್ರಿಕ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ರಹಸ್ಯ ಚಿತ್ರಗಳನ್ನು ಗಮನಿಸಿದಂತೆ, ನ್ಯಾನೊ ಎಲೆಕ್ಟ್ರಿಕ್ ವಾಹನವು ಮೇಲ್ನೋಟಕ್ಕೆ ಆಂತರಿಕ ದಹನಕಾರಿ ಎಂಜಿನ್ ಪಡೆದ ಸಾಮಾನ್ಯ ನ್ಯಾನೊನಂತೆ ಕಾಣುತಿದೆ. ಆದಾಗ್ಯೂ, ಟಾಟಾ ನ್ಯಾನೊ ವಿದ್ಯುತ್ ಆವೃತ್ತಿಯ ಕಾರಿನ ಕಿಟಕಿಯ ಕಡೆಗೆ '4BNEV-A08' ಸ್ಟಿಕ್ಕರ್ ಆಧಾರದ ಮೇಲೆ ಈ ಕಾರನ್ನು ಎಲೆಕ್ಟ್ರಿಕ್ ಮಾದರಿ ಎಂದು ಗುರುತಿಸಬಹುದಾಗಿದೆ.

ಪರೀಕ್ಷೆ ವೇಳೆ ಟಾಟಾ ನ್ಯಾನೊ ಎಲೆಕ್ಟ್ರಿಕ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಟಾಟಾ ನ್ಯಾನೊ ವಿದ್ಯುತ್ ವಾಹನದ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲದಿದ್ದರೂ ಸಹ, ಈ ಅಗ್ಗದ ಎಲೆಕ್ಟ್ರಿಕ್ ಕಾರು ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಚಲಿಸುವ ವಿದ್ಯುತ್ ಮೋಟರ್ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಪರೀಕ್ಷೆ ವೇಳೆ ಟಾಟಾ ನ್ಯಾನೊ ಎಲೆಕ್ಟ್ರಿಕ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಟಾಟಾ ಮೋಟಾರ್ಸ್ ಕಂಪನಿಯು ಯು.ಕೆ ಯಲ್ಲಿ ಇರುವಂತಹ 'ಟಾಟಾ ಮೋಟಾರ್ಸ್ ಯುರೋಪಿಯನ್ ಟೆಕ್ನಿಕಲ್ ಸೆಂಟರ್' ನಲ್ಲಿ ಎಲೆಕ್ಟ್ರಿಕ್ ಪವರ್‌ಟ್ರೈನ್ ಟೆಕ್ನಾಲಜಿ ಅಭಿವೃದ್ಧಿಪಡಿಸುತ್ತಿರುವ ವಿಚಾರ ನಮಗೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.

ಪರೀಕ್ಷೆ ವೇಳೆ ಟಾಟಾ ನ್ಯಾನೊ ಎಲೆಕ್ಟ್ರಿಕ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಇತ್ತೀಚೆಗೆ, ಟಾಟಾ ಮೋಟಾರ್ಸ್ ಯುರೋಪಿಯನ್ ಟೆಕ್ನಿಕಲ್ ಸೆಂಟರ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಟಾಟಾ ಟಿಯೊಗೊ ಇವಿ ಮತ್ತು ಬೋಲ್ಟ್ ಇವಿ ವಿದ್ಯುತ್ ವಾಹನಗಳನ್ನು ಈಗಾಗಲೇ ಸಂಸ್ಥೆಯು ಪ್ರದರ್ಶನ ಮಾಡಿದೆ.

ಪರೀಕ್ಷೆ ವೇಳೆ ಟಾಟಾ ನ್ಯಾನೊ ಎಲೆಕ್ಟ್ರಿಕ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಬಲಿಷ್ಠ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ವಿದ್ಯುತ್ ಪವರ್‌ಟ್ರೈನ್ ಮೂಲಕ ನ್ಯಾನೊ ಕಾರಿನ ಪುನರುಜ್ಜೀವನಗೊಳಿಸುವ ಮೂಲಕ ಅದೃಷ್ಟವನ್ನು ಮತ್ತೆ ಪರೀಕ್ಷೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದು, ಈ ಮೂಲಕ ತಾನು ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿರುವುದಾಗಿ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ.

English summary
Tata Motors seems to be trying to revive the fortunes of the Tata Nano. Recently, the Tata Nano electric car was spotted testing in Coimbatore.
Story first published: Monday, September 11, 2017, 19:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark