ಇಂಡಿಕಾ ಇವಿ2: ಸಣ್ಣ ಕಾರುಗಳಲ್ಲಿಯೇ ಅಧಿಕ ಮೈಲೇಜ್ ಕಾರು

ಇಂಡಿಕಾ ಇವಿ2 ಸಣ್ಣ ಕಾರ್ ದುಬಾರಿಯೇನಲ್ಲ. ಇದರ ದರ 5 ಲಕ್ಷ ರೂ.ಗಿಂತ ಕಡಿಮೆಯಿದೆ. ಸಿಆರ್4 ಡೀಸಲ್ ಎಂಜಿನ್ ಕಾರಿಗೆ 3.95 ಲಕ್ಷ ರೂ.ನಿಂದ 4.77 ಲಕ್ಷ(ದೆಹಲಿ ಎಕ್ಸ್ ಶೋರೂಂ) ರೂ. ಮತ್ತು ಎಂಪಿಎಫ್ ಐ ಪೆಟ್ರೊಲ್ ಆವೃತ್ತಿ ದರ 2.95 ಲಕ್ಷ ರೂ. ಮತ್ತು 3.58 ಲಕ್ಷ ರೂ.ಗಳ ಆಸುಪಾಸಿನಲ್ಲಿದೆ. ಇವಿ2 ಕಾರ್ ಗಳು ಆಕರ್ಷಕ ಆಪಲ್ ಹಸಿರು, ನಿಯೊ ಆರೇಂಜ್, ಸಿಲ್ವರ್ ಮತ್ತು ಮಿಂಟ್ ಬಿಳಿ ಬಣ್ಣಗಳಲ್ಲಿ ದೊರಕುತ್ತವೆ. ಆದರೆ ನೂತನ ಕಾರಿನಲ್ಲಿ ಪವರ್ ಸ್ಟೇರಿಂಗ್ ಮತ್ತು ಏರ್ ಕಂಡಿಷನ್ ಸಿಸ್ಟಮ್ ಇಲ್ಲ.
ದಶಕದಿಂದ ರಸ್ತೆಯಲ್ಲಿರುವ ಇಂಡಿಕಾ ಕಾರ್ ಗಳು ಟಾಟಾ ಮೋಟರ್ಸ್ ಮಾರಾಟಕ್ಕೆ ಮೋಸ ಮಾಡಿಲ್ಲ. ವಿ2 ಆವೃತ್ತಿಗಳಲ್ಲಿ ಹೊರಬಂದ ನಂತರ ಮಾರುಕಟ್ಟೆಯಲ್ಲಿ ಇದರ ನಿಜವಾದ ಗೆಲುವು ಆರಂಭವಾಗಿತ್ತು. ನೂತನ ಇವಿ2 ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ. ಹೊಸ ಗ್ರಾಫಿಕ್ಸ್, ಅಲಾಯ್ ವೀಲ್ ಮತ್ತು ಮಿನುಗುವ ಲೈಟ್ ಗಳು ಕಾರಿನ ಲುಕ್ ಹೆಚ್ಚಿಸಿವೆ. ಸಣ್ಣ ಕಾರ್ ಸೆಗ್ಮೆಂಟ್ ನಲ್ಲಿ ಅತ್ಯಧಿಕ ಇಂಧನ ದಕ್ಷತೆ ಮತ್ತು ನೂತನ ತಂತ್ರಜ್ಞಾನ ಫೀಚರ್ ಗಳ ಮೂಲಕ ಬಂದ ಇವಿ2 ಹೆಚ್ಚಿನವರ ಬಜೆಟ್ ಗೆ ಸೂಕ್ತವಾದ ಕಾರ್.


Click it and Unblock the Notifications








