ನೂತನ ಎಟಿಯೋಸ್ ಮತ್ತು ಲಿವಾ ಮುಂದಿನ ವರ್ಷ ರಸ್ತೆಗೆ

ನೂತನ ಕಾರ್ ಗಳನ್ನು ಹೊರತಂದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸಲಾಗದು. ಕಳೆದ ಡಿಸೆಂಬರ್ ನಲ್ಲಿ ಕಂಪನಿಯು ಹೊರತಂದ ಎಟಿಯೋಸ್ ಆವೃತ್ತಿಯ ಪೂರೈಕೆಯಲ್ಲಿನ ವಿಳಂಬ ತಪ್ಪಿಸುವುದು ಕೂಡ ಕಂಪನಿಯ ಈ ನಿರ್ಧಾರದ ಹಿಂದಿನ ಕಾರಣಗಳಾಗಿವೆ. ಇದರೊಂದಿಗೆ ಕಂಪನಿಯು ಬೆಂಗಳೂರು ಘಟಕ ಸೇರಿದಂತೆ ದೇಶದ ಒಟ್ಟಾರೆ ಕಾರು ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ.
"ಕಂಪನಿಯು ಈ ವರ್ಷದ ಅಂತ್ಯಕ್ಕೆ ಎಟಿಯೋಸ್ ನ ಡೀಸಲ್ ಆವೃತ್ತಿ ಮತ್ತು ಲಿವಾ ಸಣ್ಣ ಕಾರನ್ನು ಹೊರತರಲು ನಿರ್ಧರಿಸಲಾಗಿತ್ತು. ಕಾರ್ ವೇಟಿಂಗ್ ಪಿರೇಡ್ ಕಡಿಮೆ ಮಾಡಲು ಮತ್ತು ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಮುಂದಿನ ವರ್ಷದ ಮೊದಲಾರ್ಧದಲ್ಲಿ ನೂತನ ಕಾರುಗಳನ್ನು ಹೊರತರಲಾಗುವುದು" ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಹೇಳಿದ್ದಾರೆ.
ಕಂಪನಿಯು ವರ್ಷಕ್ಕೆ ಸುಮಾರು 60 ಸಾವಿರದಷ್ಟು ಕಾರು ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯಲ್ಲಿವೆ. ಇದರೊಂದಿಗೆ ಬೆಂಗಳೂರಿನಲ್ಲಿರುವ ಅವಳಿ ಘಟಕಗಳಲ್ಲಿ ಸಣ್ಣ ಕಾರು ಲಿವಾವನ್ನು ಉತ್ಪಾದಿಸಲಿದೆ. ಬೆಂಗಳೂರು ಘಟಕದಲ್ಲಿ ವರ್ಷಕ್ಕೆ ಸುಮಾರು 1.5 ಲಕ್ಷ ಲಿವಾ ಕಾರುಗಳನ್ನು ಉತ್ಪಾದಿಸುವುದಾಗಿ ಕಂಪನಿ ಕಳೆದ ತಿಂಗಳು ಪ್ರಕಟಿಸಿತ್ತು.


Click it and Unblock the Notifications








