ಭಾರತದಲ್ಲಿ ಹೊಸ ಕಾರಿನಷ್ಟೇ ಬೇಡಿಕೆ ಹಳೆಕಾರಿಗೂ ಇದೆ

ದೇಶದ ವಾಹನ ಮಾರುಕಟ್ಟೆ ಇತ್ತೀಚೆಗೆ ಅತ್ಯುತ್ತಮವಾಗಿ ಪ್ರಗತಿ ಕಾಣುತ್ತಿದೆ. ಬರೀ ಹೊಸ ಕಾರಿಗಷ್ಟೇ ಬೇಡಿಕೆ ಇದೆ ಎಂದು ಭಾವಿಸಿದರೆ ಅದು ತಪ್ಪು. ಯಾಕೆಂದರೆ ಇಲ್ಲಿ ಹೊಸ ಕಾರಿಗಿಂತ ಹಳೆಯ ಕಾರುಗಳಿಗೆ ಸ್ವಲ್ಪ ಹೆಚ್ಚು ಬೇಡಿಕೆಯಿದೆ. ಗ್ರಾಹಕನೊಬ್ಬ ಹೊಸ ಕಾರೊಂದನ್ನು ಖರೀದಿಸಿ ಎಷ್ಟು ವರ್ಷ ಇಟ್ಟುಕೊಳ್ಳುಲು ಸಾಧ್ಯ? ವರ್ಷಕ್ಕೆ ಹತ್ತಾರು ಬಾರಿ ಮೊಬೈಲ್ ಫೋನ್ ಬದಲಾಯಿಸುವರಿದ್ದಾರೆ. ಆದರೆ ಕಾರುಗಳನ್ನು ಹಾಗೇ ಬದಲಾಯಿಸುವುದು ಕಷ್ಟ ಅಲ್ಲವೇ?

ಹೊಸ ಕಾರಿನಷ್ಟೇ ಭಾರತದಲ್ಲಿ ಹಳೆಯ ಕಾರುಗಳು ಮಾರಾಟವಾಗುತ್ತಿವೆ. ಇವೆರಡಕ್ಕೆ ಒಂದೇ ರೀತಿಯ ಬೇಡಿಕೆಯಿದೆ ಎಂದು ಕಾರ್ಜೂಡಾಟ್ ಕಾಮ್ ನ ಉಪಾಧ್ಯಕ್ಷರು ಹೇಳುತ್ತಾರೆ. 2010ರಲ್ಲಿ ಸುಮಾರು 17 ಲಕ್ಷ ಹೊಸ ಕಾರುಗಳು ಮಾರಾಟಗೊಂಡಿವೆ. ಆದರೆ ಇದೇ ಸಮಯದಲ್ಲಿ 18.5 ಲಕ್ಷ ಸೆಕೆಂಡ್ ಹ್ಯಾಂಡ್ ಕಾರುಗಳು ಮಾರಾಟಗೊಂಡಿವೆ.

ಸುಮಾರು ವರ್ಷದ ಹಿಂದೆ ಹೊಸ ಕಾರೊಂದು ಗ್ರಾಹಕನ ಬಳಿ ಸುಮಾರು 12 ವರ್ಷವಾದರೂ ಜೊತೆಗಿರುತ್ತಿತ್ತು. ಆದರೆ ಈಗ ಒಂದು ವಾಹನ 5 ವರ್ಷಕ್ಕೆ ಸಾಕೆನಿಸುತ್ತದೆ. ಮತ್ತೊಂದು ಹೊಸ ಆವೃತ್ತಿ ಖರೀದಿಗೆ ಮನ ಹಾತೋರೆಯುತ್ತದೆ. ಹೀಗಾಗಿ ಗ್ರಾಹಕನೊಬ್ಬನ ಬಳಿ ಈಗ ಕಾರಿನ ಸರಾಸರಿ ಆಯಸ್ಸು ಕೇವಲ 5 ವರ್ಷ. ಹೀಗೆ ಸಾಕಷ್ಟು ಜನರು ಕಾರುಗಳನ್ನು ಮಾರಾಟ ಮಾಡುವಂತೆ, ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಲು ಸಾಕಷ್ಟು ಜನ ಸರದಿಯಲ್ಲಿ ಕಾದಿರುತ್ತಾರೆ.

ಹೊಸ ತಂತ್ರಜ್ಞಾನದೊಂದಿಗೆ ವಾಹನವೊಂದು ಬಂದಾಗ ಹಳೆಯ ವಾಹನದ ಮೇಲಿನ ಮೋಹ ಕಡಿಮೆಯಾಗುತ್ತದೆ. ಭಾರತದಲ್ಲಿ ಒಂದು ವಾಹನದ ಸರಾಸರಿ ಮಾಲಿಕತ್ವ 5 ವರ್ಷವಾದರೂ ಇದೆ. ಆದರೆ ಅಮೆರಿಕದಲ್ಲಿ ಇದು ಈಗಾಗಲೇ ಮೂರು ವರ್ಷಕ್ಕೆ ತಲುಪಿದೆ. ಭಾರತ ಈ ಸ್ಥಾನಕ್ಕೆ ತಲುಪಲು ಇನ್ನೂ ಮೂರರಿಂದ 5 ವರ್ಷಗಳ ಅಗತ್ಯವಿದೆ ಎಂದು ವಿಶ್ಲೇಷಕರು ಅಂದಾಜಿಸುತ್ತಾರೆ.

ಮುಂದಿನ ದಶಕದಲ್ಲಿ, 5 ವರ್ಷದಲ್ಲಿ ಕಾರು ಮಾರಾಟ ಮಾಡುವ ಪ್ರವೃತ್ತಿ 3 ವರ್ಷಕ್ಕೆ ಇಳಿಯಲಿದೆ ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. ಅರ್ಥವ್ಯವಸ್ಥೆ ಹೆಚ್ಚು ಭೂಮ್ ಆಗಿದ್ದರೆ, ಖರೀದಿ ಸಾಮರ್ಥ್ಯ ಹೆಚ್ಚಿದರೆ, ಹೊಸ ಮಾಡೆಲ್ ವಾಹನಗಳ ಕುರಿತು ನಿರೀಕ್ಷೆ ಜಾಸ್ತಿ ಇದ್ದರೆ, ವಾಹನ ಖರೀದಿಗೆ ಸುಲಭ ಸ್ಕೀಮ್ ಗಳಿದ್ದರೆ ಮುಂದಿನ ದಿನಗಳಲ್ಲಿ ಗ್ರಾಹಕನೊಬ್ಬನ ಬಳಿ ಹೊಸ ಕಾರಿನ ಆಯಸ್ಸು ಕಡಿಮೆಯಾಗುವ ಸಾಧ್ಯತೆಯಿದೆ.

ಲಕ್ಷುರಿ ಸೆಗ್ಮೆಂಟ್ ನಲ್ಲೂ ಸೆಕೆಂಡ್ ಹ್ಯಾಂಡ್ ವಾಹನಗಳ ಭರಾಟೆ ಜೋರಾಗಿಯೇ ಇದೆ. ವೋಲ್ವೊ, ಆಡಿ, ಫೋಕ್ಸ್ ವ್ಯಾಗನ್ ಮತ್ತು ಮರ್ಸಿಡಿಸ್ ಬೆಂಜ್ ನ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಕಾರಣವೆಂದರೆ ಮೂರು ವರ್ಷದಲ್ಲಿ ಹೊಸ ಕಾರೊಂದರ ದರ ಸುಮಾರು ಶೇಕಡಾ 45ರಷ್ಟಾದರೂ ಇಳಿಕೆ ಕಂಡಿರುತ್ತದೆ. ಒಂದಿಷ್ಟು ದುಡ್ಡು ಕಡಿಮೆ ಕೊಟ್ಟಾದರೂ ಐಷಾರಾಮಿ ಕಾರೊಂದರ ಮಾಲೀಕರಾಗಬಹುದು.

Most Read Articles

Kannada
English summary
The automobile industry in India has been growing on a good stint in recent times and there has been an equal rise in the sale of pre-owned cars. The reason attributed for this is the change of cars by owners in five years which had been 12 years in earlier times.
Story first published: Thursday, April 7, 2011, 16:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X