ಮಿಸ್ ಯು ಐಕಾನ್, ಇತಿಹಾಸದ ಪುಟ ಸೇರಿದ ಫೋರ್ಡ್ ಕಾರು

ಕಂಪನಿಯು ಈಗಾಗಲೇ ಜಾಗತಿಕವಾಗಿ 8 ಹೊಸ ಕಾರುಗಳನ್ನು ಹೊರತರುವುದಾಗಿ ಪ್ರಕಟಿಸಿದೆ. ಇದರಲ್ಲಿ ಒಂದು ಆವೃತ್ತಿ ಮುಂದಿನ ವರ್ಷ ರಸ್ತೆಗಿಳಿಯಲಿದೆ. "ನಾವು ಐಕಾನ್ ಉತ್ಪಾದನೆಯನ್ನು ನಿಲ್ಲಿಸುತ್ತಿದ್ದೇವೆ. ಕಂಪನಿಯ ಉತ್ಪಾದನೆ ಘಟಕದಲ್ಲಿ ಹೊಸ ಕಾರುಗಳನ್ನು ಉತ್ಪಾದಿಸಲು ಈ ನಿರ್ಧಾರಕ್ಕೆ ಬರಲಾಗಿದೆ. ಈ ವರ್ಷದ ನಂತರ ಎಂಟು ಹೊಸ ಕಾರುಗಳು ಸರದಿಯಲ್ಲಿ ರಸ್ತೆಗಿಳಿಯಲಿದೆ" ಎಂದು ಫೋರ್ಡ್ ಇಂಡಿಯಾ ಅಧ್ಯಕ್ಷರು ಹೇಳಿದ್ದಾರೆ.
ಕಂಪನಿಯು ಇಲ್ಲಿವರೆಗೆ ಸುಮಾರು 1,34,000 ಐಕಾನ್ ಕಾರುಗಳನ್ನು ಮಾರಾಟ ಮಾಡಿದೆ. ಈಗ ಈ ಕಾರು 1.3 ಪೆಟ್ರೊಲ್ ಮತ್ತು 1.4 ಲೀಟರ್ ಡೀಸಲ್ ಆವೃತ್ತಿಯಲ್ಲಿ ಮಾತ್ರ ದೊರಕುತ್ತಿದೆ. ಇವೆರಡರ ಎಕ್ಸ್ ಶೋರೂಂ ದರ ಕ್ರಮವಾಗಿ 5 ಲಕ್ಷ ರೂ. ಮತ್ತು 5.6 ಲಕ್ಷ ರೂಪಾಯಿ ಆಗಿದೆ. ಕೆಲವು ತಿಂಗಳ ನಂತರ ಕಂಪನಿಯು ಫಿಯೆಸ್ಟಾ ಸಲೂನ್ ಆವೃತ್ತಿಯನ್ನು ಹೊರತರುವ ನಿರೀಕ್ಷೆಯಿದೆ. ಸದ್ಯ ಫೋರ್ಡ್ ಇಂಡಿಯಾ ಫಿಗೊ ಕಾರು ಮಾರಾಟದಲ್ಲಿ ಬ್ಯುಸಿಯಾಗಿದೆ. ಕಳೆದ ತಿಂಗಳಲ್ಲಿ ಸುಮಾರು 8,600 ಫಿಗೊ ಕಾರುಗಳು ಮಾರಾಟಗೊಂಡಿವೆ. ಇಲ್ಲಿವರೆಗೆ ಒಟ್ಟಾರೆ ಸುಮಾರು 68 ಸಾವಿರ ಫಿಗೊ ಕಾರುಗಳು ಮಾರಾಟಗೊಂಡಿವೆ.


Click it and Unblock the Notifications








