ಸಣ್ಣ ಕಾರು ಖರೀದಿಗೆ ಆರೇ ಆರು ಸೂಕ್ತ ಸಲಹೆ

small car
ಪುಟ್ಟ ಕುಟುಂಬದ ಸವಾರಿಗೆ ಸೂಕ್ತವಾಗಿರುವ ಸಣ್ಣ ಕಾರು ಹೆಚ್ಚಿನವರ ಆಯ್ಕೆ. ಗಂಡ ಹೆಂಡತಿ ಮಗು ಹೀಗೆ ಬೆರಳೆಣಿಕೆಯ ಜನರ ಸವಾರಿಗೆ ಟಾಟಾ ಸುಮ ಬೇಕೆಂದಿಲ್ಲ. ಪುಟ್ಟ ನ್ಯಾನೊದಿಂದ ಹಿಡಿದು ಸಾಕಷ್ಟು ಸಣ್ಣ ಕಾರುಗಳಿಂದ ರಸ್ತೆಯಲ್ಲಿವೆ. ಗ್ರಾಹಕರ ಸಣ್ಣ ಕಾರು ಖರೀದಿ ಟ್ರೆಂಡನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ಈ ಸೆಗ್ಮೆಂಟ್ ಕುರಿತು ಹೆಚ್ಚು ಒತ್ತು ನೀಡುತ್ತಿದ್ದು, ವಿನೂತನ ಮಾದರಿಗಳನ್ನು ಹೊರತರುತ್ತಿವೆ.

ಶಂಖದಿಂದ ಬಂದದ್ದೇಲ್ಲ ತೀರ್ಥವಲ್ಲ. ಅದೇ ರೀತಿ ಎಲ್ಲ ಸಣ್ಣ ಕಾರುಗಳು ನಿಮಗೆ ಸೂಕ್ತವಾಗಲಿಕ್ಕಿಲ್ಲ. ವಿವಿಧ ಕಂಪನಿಗಳ ಶೋರೂಂಗಳಲ್ಲಿ ಸಾಲಾಗಿರಿಸಿದ ಸಣ್ಣ ಕಾರುಗಳಲ್ಲಿ ಯಾವುದನ್ನು ಖರೀದಿಸಬೇಕೆಂಬ ಗೊಂದಲ ಗ್ರಾಹಕನಿಗೆ ಸಹಜ. ಸಣ್ಣ ಕಾರು ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು? ಯಾವ ಕಾರು ಸೂಕ್ತ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

1. ನಿಮ್ಮ ಅವಶ್ಯಕತೆಗೆ ಸೂಕ್ತವಾಗಿದೆಯೇ?
ಹಾಗಂತ ನೀವು ಹಲವು ಬಾರಿ ನಿಮ್ಮಲ್ಲೇ ಕೇಳಿಕೊಳ್ಳಿ. ನಿಮ್ಮ ಕುಟುಂಬದ ಗಾತ್ರಕ್ಕೆ, ಸವಾರಿ ಅವಶ್ಯಕತೆಗೆ ಕಾರು ಸೂಕ್ತವಾಗಿರುವುದೇ ಪರಿಶೀಲಿಸಿ. ನಾಲ್ಕು ಚಕ್ರದ ಪುಟ್ಟ ಕಾರಿನಲ್ಲಿ ನಿಮ್ಮ ಯಾವೆಲ್ಲ ಅವಶ್ಯಕತೆಗಳು ಈಡೇರಬೇಕು ಎಂಬ ಸಣ್ಣ ಪಟ್ಟಿ ತಯಾರಿಸಿ. ಇಂಧನ ದಕ್ಷತೆ, ಆಕರ್ಷಕತೆ, ನಿಮ್ಮ ಸಣ್ಣ ಕುಟುಂಬಕ್ಕೆ ಆ ಕಾರ್ ಕಂಫರ್ಟ್ ಎನಿಸಬಹುದಾ? ಕಂಪನಿಯ ಸಾಕಷ್ಟು ಸರ್ವಿಸ್ ಸೆಂಟರ್ ಗಳಿರುವುದೇ? ನಿಮ್ಮ ಬಜೆಟ್ ಗೆ ಸೂಕ್ತವಾಗಿದೆಯೇ? ಎಂದು ಪರಿಶೀಲಿಸಿ.

2. ಇಂಧನ ದಕ್ಷತೆ, ಪೆಟ್ರೊಲ್ ಅಥವಾ ಡೀಸಲ್
ಕಾರೊಂದನ್ನು ಖರೀದಿಸುವಾಗ ಪ್ರಮುಖವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಇಂಧನ ದಕ್ಷತೆ. ಯಾವ ಬಗೆಯ ಎಂಜಿನ್ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಸರಿಯಾದ ಯೋಜನೆ ನಿಮಗಿರಬೇಕು. ಪೆಟ್ರೊಲ್ ಎಂಜಿನ್ ಕಾರು ಸೂಕ್ತನಾ ಅಥವಾ ಡೀಸಲ್ ಎಂಜಿನಾ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ನೀವು ಪ್ರತಿದಿನ ಬಹಳಷ್ಟು ದೂರ ಪ್ರಯಾಣ ಮಾಡುವರಾದರೆ ಡೀಸಲ್ ಎಂಜಿನ್ ಸೂಕ್ತವಾಗಿದೆ. ಫೋರ್ಡ್ ಫಿಗೊ, ಟಾಟಾ ಇಂಡಿಕಾ ವಿ2 ಮತ್ತು ಟಾಟಾ ಇಂಡಿಕಾ ವಿಸ್ಟಾ ಇತ್ಯಾದಿಗಳು ಕೆಲವು ಪ್ರಮುಖ ಡೀಸಲ್ ಸಣ್ಣ ಕಾರುಗಳಾಗಿವೆ.

ನೀವು ಪ್ರತಿದಿನ ಸುಮಾರು 40 ಕಿ.ಮೀ. ಪ್ರಯಾಣಿಸುವರಾದರೆ ಪೆಟ್ರೊಲ್ ಎಂಜಿನ್ ಆಯ್ಕೆ ಮಾಡಿಕೊಳ್ಳಬಹುದು. ಈಗ ಹಲವಾರು ಪೆಟ್ರೊಲ್ ಕಾರುಗಳು ಲಭ್ಯವಿದೆ. ಇಂಡಿಕಾ ಪೆಟ್ರೊಲ್, ಸ್ಯಾಂಟ್ರೊ, ಝೆನ್ ಎಸ್ಟಿಲೊ, ಆಲ್ಟೊ, ಆಲ್ಟೊ ಕೆ10, ಹ್ಯುಂಡೈ ಐ10, ಷೆವರ್ಲೆ ಬೀಟ್, ಫೋರ್ಡ್ ಫಿಗೊ, ಮಾರುತಿ ವ್ಯಾಗನಾರ್, ಟಾಟಾ ನ್ಯಾನೊ, ಷೆವರ್ಲೆ ಸ್ಪಾರ್ಕ್ ಇತ್ಯಾದಿ ಸಾಕಷ್ಟು ಕಾರುಗಳು ದೊರಕುತ್ತಿವೆ.

3. ತುಲನೆ ಮಾಡಿ ನೋಡಿರಿ

ನೀವು ಖರೀದಿಸಲು ಇಚ್ಚಿಸಿದ ಸಣ್ಣ ಕಾರನ್ನು ಮಾರುಕಟ್ಟೆಗೆ ಲಭ್ಯವಿರುವ ಇತರ ಆವೃತ್ತಿಗಳೊಂದಿಗೆ ತುಲನೆ ಮಾಡಿ ನೋಡಿರಿ. ಅಂದರೆ ದರ, ಇಂಧನ ದಕ್ಷತೆ, ಆರಾಮದಾಯಕತೆ ಇತ್ಯಾದಿಗಳನ್ನು ಹೋಲಿಸಿ ನೋಡಿದಾಗ ಸರಿಯಾದ ನಿರ್ಣಯಕ್ಕೆ ಬರಲು ನಿಮಗೆ ಸಾಧ್ಯವಾಗುತ್ತದೆ.

4. ಹಣದ ಲೆಕ್ಕಚಾರ

ಸಣ್ಣ ಕಾರುಗಳ ದರ ಕನಿಷ್ಠ ಒಂದುವರೆ ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿರುತ್ತದೆ. ಕಾರಿನ ದರ ನೋಡಿ ಇದು ಉತ್ತಮ ಕಾರು ಅಂತ ಯಾವತ್ತಿಗೂ ನಿರ್ಧರಿಸಬೇಡಿ. ಕೆಲವೊಮ್ಮೆ ಹೆಚ್ಚು ಫೀಚರ್ ಇರುವ ಕಾರು ಗುಣಮಟ್ಟದಲ್ಲಿ ಕಡಿಮೆ ದರದ ಕಡಿಮೆ ಫೀಚರ್ ಇರುವ ಕಾರುಗಳಷ್ಟಿರುವುದಿಲ್ಲ.

5. ನೆಟ್ ನಲ್ಲಿ ಜಾಲಾಡಿ
ವಾಹನ ಮಾಹಿತಿಗಳನ್ನು ನೀಡುವ ಸೂಕ್ತ ಅಂತರ್ ಜಾಲ ತಾಣಗಳಿಗೆ ಭೇಟಿ ನೀಡುವ ಮೂಲಕ ದರ, ಫೀಚರ್ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಿ. ಅಂತರ್ ಜಾಲದಲ್ಲಿ ಕಾರುಗಳ ಬಗ್ಗೆ ಸಾಕಷ್ಟು ತಿಳಿದುಕೊಂಡರೆ ಯಾವ ಕಾರು ಸೂಕ್ತ ಎಂಬ ಐಡಿಯಾ ನಿಮಗೆ ಬರಬಹುದು.

6. ನಿರ್ಣಯ ತೆಗೆದುಕೊಳ್ಳುವ ಸಮಯ

ತುರ್ತಾಗಿ ಕಾರು ಖರೀದಿಸುವ ನಿರ್ಣಯಕ್ಕೆ ಬರಬೇಡಿ. ಸಾಕಷ್ಟು ವಿಚಾರ ವಿನಿಮಯ ಮಾಡಿರಿ. ಸಾಕಷ್ಟು ಸಮಯ ತೆಗೆದುಕೊಳ್ಳಿ. ವಾಹನದ ಬಗ್ಗೆ ತಿಳಿದವರೊಂದಿಗೆ ಒಂದಿಷ್ಟು ಚರ್ಚಿಸಿ. ಒಳ್ಳೆಯ ಕಾರೊಂದನ್ನು ಖರೀದಿಸಿರಿ.

ಇದನ್ನೂ ಓದಿ: ಕಾರು ಖರೀದಿಸುವ ಮುನ್ನ ಈ 5 ಸಲಹೆ ಪಾಲಿಸಿ

More from DriveSpark

Article Published On: Tuesday, April 26, 2011, 16:54 [IST]
English summary
Buying small car is not small job. Indian buyers are very passionate about small cars. Here are few points that you should keep in mind before buying small cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+