ಅದೃಷ್ಟ ತಂದ ಸತ್ಯ ಸಾಯಿಬಾಬಾ ಕಾರು: ಇರ್ಫಾನ್ ಮೊಗಲ್

ಇಲ್ಲೊಂದು ವಿಂಟೆಜ್ ಕಾರಿದೆ. ಇದರ ವಿಶೇಷತೆಯೆಂದರೆ ಇದರ ಮೊದಲ ಮಾಲಿಕರಾಗಿದ್ದದ್ದು ಸತ್ಯ ಸಾಯಿಬಾಬಾ. ಇದೇ ಕಾರಣಕ್ಕೆ ಈ ಕಾರಿಗೆ ಸಾಕಷ್ಟು ಮಹತ್ವ ಬಂದಿದೆ. ಸದ್ಯ ಈ ಕಾರಿನ ರಿಜಿಸ್ಟ್ರೇಷನ್ ನಂಬರ್ "ಡಿಎನ್ಎ 8888" ಎಂದಾಗಿದೆ. ಇದನ್ನು 1971ರಲ್ಲಿ ಸಾಯಿ ಬಾಬಾ ಉಪಯೋಗಿಸುತ್ತಿದ್ದರು.
ನವಿಲಿನ ಬಣ್ಣದ ಈ ಆಕರ್ಷಕ ರೋಲ್ಸ್ ರಾಯ್ಸಿ ಕಾರು ಬಾಂದ್ರಾದ ಇರ್ಫಾನ್ ಮೊಗಲ್ ಎಂಬವರ ಬಳಿಯಿದೆ. ಇವರು ಟೊಯೊಟಾ ಟೆಕ್ ಎಂಬ ಐಟೆಕ್ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದಾರೆ. ಈ ಕಾರು ಸತ್ಯ ಸಾಯಿ ಬಾಬಾ ಅವರ ಹೆಸರಿನಲ್ಲಿ ರಿಜಿಸ್ಟ್ರೇಷನ್ ಆಗಿರುವುದರ ಕುರಿತು ಸ್ಕ್ಯಾನ್ ಮಾಡಿದ ದಾಖಲೆ ಪತ್ರವೂ ಇವರಲ್ಲಿದೆ. ಆ ಕಾರಿನ ದಾಖಲೆಯಲ್ಲಿ ಆಂಧ್ರದ ಅನಂತಪುರದ ಪ್ರಶಾಂತಿ ನಿಲಯ ಎಂದು ಬರೆಯಲಾಗಿದ್ದು ಶ್ರೀ ಸತ್ಯ ಸಾಯಿಬಾಬಾ ಇನ್ಶುಟ್ಯೂಟ್ ಆಫ್ ಹೈಯರ್ ಎಜ್ಯುಕೇಷನ್ ಸಂಸ್ಥೆಯ ವಿಳಾಸವಿದೆ.
ಈ ಕಾರನ್ನು ನೇರವಾಗಿ ಇವರು ಸಾಯಿ ಬಾಬಾ ಕೈಯಿಂದ ಖರೀದಿಸಿದ್ದಲ್ಲ. "1984ರಲ್ಲಿ ಈ ಕಾರನ್ನು ವಿವೇಕ್ ಬರ್ಮನ್ ಎಂಬ ವಾಣಿಜ್ಯೋದ್ಯಮಿಗೆ ಈ ಕಾರು ಮಾರಾಟ ಮಾಡಲಾಗಿತ್ತು. ಈ ಕಾರನ್ನು 1996ರಲ್ಲಿ ತಂದೆ ಅಮನ್ ಮೊಗಲ್ ಖರೀದಿಸಿದ್ದರು. ಆ ನಂತರ ಈ ಅದ್ಭುತ ಕಾರು ನಮ್ಮ ಬಳಿಯಿದೆ" ಎಂದು ಇರ್ಫಾನ್ ಹೆಮ್ಮೆ ಪಟ್ಟುಕೊಳ್ಳುತ್ತಾರೆ.
ನಾವು ಆರಂಭದಲ್ಲಿ ಈ ಕಾರು ಖರೀದಿಸುವಾಗ ಡೀಲರ್ ಹೇಳಿದಷ್ಟು ದುಡ್ಡು ಕೊಡಲು ಹಿಂದೆ ಮುಂದೆ ನೋಡಿದ್ದೇವು. ಆದರೆ ಯಾವಾಗ ಇದು ಸತ್ಯ ಸಾಯಿ ಬಾಬಾ ಅವರ ಕಾರೆಂದು ಗೊತ್ತಾಯಿತೋ ಆಗ ಸ್ವಲ್ಪನೂ ಯೋಚಿಸದೇ ಖರೀದಿಸಿದ್ದೇವು" ಎಂದು ಇರ್ಫಾನ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಈ ಕಾರು ಆರಂಭದಲ್ಲಿ ಎಡಿಎ 9" ಎಂಬ ರಿಜಿಸ್ಟ್ರೇಷನ್ ನಂಬರ್ ಹೊಂದಿತ್ತು. ಆಮೇಲೆ ಇದನ್ನು ಡಿಎನ್ಎ 8888 ಎಂದು ಬದಲಾಯಿಸಲಾಯಿತು.
ಲಕ್ಕಿ ಕಾರು: ಈ ಕಾರು ನಮ್ಮ ವ್ಯವಹಾರಕ್ಕೆ ಅದೃಷ್ಟವನ್ನೇ ತಂದಿದೆ. ಸತ್ಯ ಸಾಯಿಬಾಬಾ ಅವರು ಪ್ರಯಾಣಿಸಿದ ಕಾರಿನಲ್ಲಿ ನಿತ್ಯ ಪ್ರಯಾಣಿಸುವ ಯೋಗ ನನಗೆ ದೊರಕಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ" ಎಂದು ಇರ್ಫಾನ್ ಹೇಳುತ್ತಾರೆ.
ಈ ಕಾರನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಮಾರುತ್ತೀರಾ ಎಂದು ಪತ್ರಿಕೆಯೊಂದು ಕೇಳಿದ ಪ್ರಶ್ನೆಗೆ ಇರ್ಫಾನ್ ಇಲ್ಲ ಎಂದಿದ್ದಾರೆ. ಸಚಿನ್ ಕೂಡ ಸಾಯಿಬಾಬಾ ಅವರ ಪರಮ ಭಕ್ತರಾಗಿದ್ದಾರೆ. ಸಚಿನ್ ಈ ಕಾರನ್ನು ಕೇಳಿಲ್ಲ. ಸಚಿನ್ ಅವರ ಹೆಚ್ಚಿನ ಕಾರುಗಳು ನನ್ನ ಟೊಯೊಟಾ ಟೆಕ್ ಗ್ಯಾರೇಜ್ ಗೆ ಸರ್ವಿಸ್ ಮಾಡಲು ಬರುತ್ತಿವೆ. ಸಚಿನ್ ಅವರಿಗೆ ಗೊತ್ತು ನನ್ನ ವ್ಯವಹಾರದಲ್ಲಿ ಈ ಕಾರಿಗೆ ಎಷ್ಟು ಪ್ರಾಮುಖ್ಯತೆ ಇದೆ ಅಂತ. ಈ ಕಾರು ಕೊನೆವರೆಗೂ ನಮ್ಮೊಂದಿಗೆ ಇರುತ್ತದೆ" ಎಂದು ಇರ್ಫಾನ್ ಹೇಳುತ್ತಾರೆ.


Click it and Unblock the Notifications








