ಆಕಸ್ಮಿಕವಾಗಿ ಕಾರಿನ ಡೋರ್ ಲಾಕ್- ಉಸಿರುಗಟ್ಟಿ ಅವಳಿ ಮಕ್ಕಳು ಸಾವು

Written By:

ಕಾರಿನಲ್ಲಿ ಕುಳಿತು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾರ್ ಡೋರ್ ಕ್ಲೋಸ್ ಆದ ಪರಿಣಾಮ ಅವಳಿ ಮಕ್ಕಳಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಹರಿಯಾಣಾದ ಗುರ್ಗಾಂವ್‌ನಲ್ಲಿ ನಡೆದಿದೆ.

5 ವರ್ಷದ ಹರ್ಷಾ ಮತ್ತು ಹರ್ಷಿತಾ ಸಾವನ್ನಪ್ಪಿದ್ದು, ಕಾರಿನ ಒಳಗೆ ಕುಳಿತು ಕಣ್ಣುಮುಚ್ಚಾಲೆ ಆಡುತ್ತಿರುವಾಗ ಈ ದಾರುಣ ಘಟನೆ ನಡೆದಿದೆ.

ಬಹಳ ಹೊತ್ತಾದರೂ ಮನೆಯಲ್ಲಿ ಮಕ್ಕಳು ಕಾಣದಾದಾಗ ಅವರ ತಂದೆ ಹುಡುಕಾಟ ನಡೆಸಲು ಪ್ರಾರಂಭಿಸಿದ್ದಾರೆ. ಹೀಗಾಗಿ ಮಕ್ಕಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸೋಣ ಎಂದು ಕಾರು ಹತ್ತಲು ಹೋದಾಗ ಮಕ್ಕಳಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

To Follow DriveSpark On Facebook, Click The Like Button
ದುರಂತ

ಗಾಬರಿಗೊಂಡ ತಂದೆ ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ದನಾದರೂ ಅವರಾಗಲೇ ಪ್ರಾಣ ತ್ಯಜಿಸಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. 

ಇನ್ನು ಘಟನೆ ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತಂತೆ ತೀವ್ರ ತನಿಖೆ ನಡೆಸಿದ್ದಾರೆ.

Read more on ಸಾವು death
English summary
Read in Kannada about Locked Inside The Car, Five Year Old Twins Die Due To Heat in Gurgaon.
Story first published: Thursday, June 15, 2017, 12:32 [IST]
Please Wait while comments are loading...

Latest Photos