ಮೊಟೊಜಿಪಿ ಸೂಪರ್ ಬೈಕ್ ರೈಡರ್ ಮಾರ್ಕೊ ದುರ್ಮರಣ

Posted By:
Marco Simoncelli Died
ಕಾರು ಬೈಕ್ ರೇಸಿಂಗ್ ಟ್ರಾಕ್ ನಲ್ಲಿ ಮರಣ ಮೃದಂಗ ಮುಂದುವರೆದಿದೆ. ನಿನ್ನೆ(ಭಾನುವಾರ) ನಡೆದ ಸೂಪರ್ ಬೈಕ್ ಸವಾರಿಯಲ್ಲಿ ಇಟಲಿಯ ಜನಪ್ರಿಯ ರೈಡರ್ ಮಾರ್ಕೊ ಸಿಮೊನ್ಸೆಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 24 ವರ್ಷ ವಯಸ್ಸಾಗಿತ್ತು.

ಸೂಪರ್ ಬೈಕ್ ರೈಡ್ ಅಂದ್ರೆ ಮಾರ್ಕೊಗೆ ಪಂಚಪ್ರಾಣ. ಸೂಪರ್ ಸಿಕ್ ಎಂಬ ಅಡ್ಡ ಹೆಸರೂ ಇವರಿಗಿತ್ತು. 2008ರ ನಂತರ ಮಾರ್ಕೊ 250 ಸಿಸಿ ವಿಭಾಗದ ಬೈಕ್ ರೇಸ್ ಗೆ ಪ್ರವೇಶಿಸಿದ್ದರು. ಈ ಮೂಲಕ ವಿಶ್ವ ಚಾಂಪಿಯನ್ ಷಿಪ್ ಗೆ ಭರವಸೆಯ ರೈಡರ್ ಎಂದೇ ಖ್ಯಾತರಾಗಿದ್ದರು.

ಮಾರ್ಕೊ ಇಟಲಿಯಲ್ಲಿ ನಡೆಯುತ್ತಿದ್ದ ಮೂರನೇಯ ಅಭ್ಯಾಸ ರೇಸಿಂಗ್ ಪಂದ್ಯದಲ್ಲಿ ಬೈಕ್ ರೈಡ್ ಮಾಡುತ್ತಿದ್ದರು. ಅತಿವೇಗದಲ್ಲಿ ಅಪಘಾತ ಕಂಡ ಬೈಕ್ ನಿಂದಾಗಿ ಅವರ ತೋಳು, ತಲೆ ಮತ್ತು ಕೊರಳಿಗೆ ತೀವ್ರ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಸಾವನ್ನಪ್ಪಿದ್ದಾರೆ.

ಆರಂಭದಲ್ಲಿ 125 ಸಿಸಿ ಬೈಕ್ ರೈಡ್ ನಲ್ಲಿ ಹಲವು ಪ್ರಶಸ್ತಿಗಳನ್ನು ಮಾರ್ಕೊ ಬಾಚಿಕೊಂಡಿದ್ದರು. 2008ರ ನಂತರ ಮಾರ್ಕೊ 250 ಸಿಸಿ ವಿಭಾಗದ ಬೈಕ್ ರೇಸ್ ಗೆ ಪ್ರವೇಶಿಸಿದ್ದರು. ಇತ್ತೀಚೆಗೆ ಇಂಡಿಯಾನಪೊಲಿಸ್ 500 ರೇಸ್ ನಲ್ಲಿ ಮರಣ ಹೊಂದಿದ್ದ ರೇಸಿಂಗ್ ಡಾನ್ - ಡ್ಯಾನ್ ವೆಲ್ಡನ್ ನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

English summary
On 23 October 2011, top rider Marco Simoncelli was involved in an accident with Colin Edwards and Valentino Rossi during the 2011 Malaysian GP at the Sepang International Circuit.
Story first published: Monday, October 24, 2011, 14:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark