ಫೋರ್ಸ್ ಇಂಡಿಯಾ ಹೆಸರಿನಿಂದ 'ಇಂಡಿಯಾ' ಪದವನ್ನು ಕೈಬಿಟ್ಟ ಮಲ್ಯ

Written By:

ಮುಂದಿನ ಋತುವಿಗೆ ಭಾರತೀಯ ಮೂಲದ ಫಾರ್ಮುಲಾ ಒನ್ ತಂಡ ಫೋರ್ಸ್ ಇಂಡಿಯಾ ಹೆಚ್ಚು ರೂಪಾಂತರಗೊಂಡು ಮತ್ತೆ ನಿಮ್ಮ ಮುಂದೆ ಬರಲಿದೆ.

ಹೌದು, ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಖ್ಯಾತಿಗೊಳಿಸಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದ್ದು, ಇದಕ್ಕೆ ಮುನ್ನುಡಿ ಎಂಬಂತೆ ತಂಡದ ಹೆಸರನ್ನು 'ಫೋರ್ಸ್ ಒನ್' ಎಂದು ಮರುನಾಮಕರಣ ಮಾಡಿದೆ.

2016ರಲ್ಲಿ, ಸಿಲ್ವರ್‌ಸ್ಟೋನ್ ಮೂಲದ ತಂಡವು ನಿರ್ಮಾಣಕಾರರ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡು ಹೆಚ್ಚು ಖ್ಯಾತಿ ಗಳಿಸಿತ್ತು.

ಫಾರ್ಮುಲಾ ಒನ್ ತಂಡಕ್ಕೆ 'ಅಂತರರಾಷ್ಟ್ರೀಯ' ಮೆರುಗು ನೀಡುವ ನಿಟ್ಟಿಲ್ಲಿ ಫೋರ್ಸ್ ಇಂಡಿಯಾ ಹೆಸರನ್ನು ಬದಲಾಯಿಸುತ್ತೇವೆ ಎಂದು ಕಳೆದ ವಾರ ತಂಡದ ಮುಖ್ಯಸ್ಥ ವಿಜಯ್ ಮಲ್ಯ ತಿಳಿಸಿದ್ದರು.

ತಂಡವು ಇತ್ತೀಚಿಗೆ ಎಲ್ಲಡೆ ಗಮನ ಸೆಳೆಯುತ್ತಿದ್ದು, ಈ ಯಶಸ್ಸನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ತಂಡದ ಬಜೆಟ್ ಅನ್ನು ವಿಸ್ತರಿಸಲು ಮುಂದಾಗಿದೆ ಮತ್ತು ತಂಡಕ್ಕೆ ಹೆಚ್ಚು ಅಂತರರಾಷ್ಟ್ರೀಯ ಪ್ರಾಯೋಜಕರ ಅಗತ್ಯವಿದೆ ಎಂದು ಆಡಳಿತ ತಿಳಿಸಿದೆ.

ಸಿಲ್ವರ್‌ಸ್ಟೋನ್ ಮೂಲದ ಈ ತಂಡ ಜೋರ್ಡನ್, ಮಿಡ್‌ಲ್ಯಾಂಡ್ ಮತ್ತು ಸ್ಪೈಕರ್ ಎಂದು ಹೆಸರುಗಳಿಂದ ಖ್ಯಾತಿ ಗಳಿಸಿದ್ದ ಈ ತಂಡ ಸದ್ಯ ಫೋರ್ಸ್ ಒನ್ ಎಂಬ ಹೆಸರು ಪಡೆಯಲಿದೆ.

'ಇಂಡಿಯಾ' ಹೆಸರನ್ನು ಕೈಬಿಡುವುದರಿಂದ ಜಾಗತಿಕ ಪ್ರಾಯೋಜಕರನ್ನು ಸೆಳೆಯಬಹುದು ಎಂದು ಫೋರ್ಸ್ ಇಂಡಿಯಾ ಮುಖ್ಯಸ್ಥ ವಿಜಯ್ ಮಲ್ಯ ತಿಳಿಸಿದ್ದಾರೆ.

'ಫೋರ್ಸ್' ಪದವನ್ನು ಹೆಸರಿನಲ್ಲಿ ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಇದರಿಂದಾಗಿ ತಂಡದ ಬಗ್ಗೆ ಜನರಿಗೆ ಹೆಚ್ಚು ತಿಳಿಯಲಿದೆ ಎಂದು ಮಲ್ಯ ಉತ್ತರಿಸಿದ್ದಾರೆ.

Read more on ರೇಸ್ race
English summary
Indian Formula One team Force India is all set to be rebranded for next season. The team is likely to drop 'India' to give it a more international flavour.
Story first published: Wednesday, June 28, 2017, 18:32 [IST]
Please Wait while comments are loading...

Latest Photos