ಫೋರ್ಸ್ ಇಂಡಿಯಾ ಹೆಸರನ್ನು ಬದಲಾಯಿಸುತ್ತೇವೆ : ವಿಜಯ್ ಮಲ್ಯ

Written By:

ಫಾರ್ಮುಲಾ ಒನ್ ತಂಡಕ್ಕೆ 'ಅಂತರರಾಷ್ಟ್ರೀಯ' ಮೆರುಗು ನೀಡುವ ನಿಟ್ಟಿಲ್ಲಿ ಫೋರ್ಸ್ ಇಂಡಿಯಾ ಹೆಸರನ್ನು ಬದಲಾಯಿಸುತ್ತೇವೆ ಎಂದು ತಂಡದ ಮುಖ್ಯಸ್ಥ ವಿಜಯ್ ಮಲ್ಯ ತಿಳಿಸಿದ್ದಾರೆ.

ಫೋರ್ಸ್ ಇಂಡಿಯಾ ತಂಡದ ಹೆಸರು ಬದಲಾವಣೆ : ವಿಜಯ್ ಮಲ್ಯ ರೇಸ್

ಪ್ರಾಯೋಜಕರನ್ನು ಸೆಳೆಯಲು ಈ ರೀತಿಯ ತೀರ್ಮಾನಕ್ಕೆ ಆಡಳಿತ ಮಂಡಳಿ ಬಂದಿದೆ ಎನ್ನಲಾಗಿದೆ. ತಂಡವು ತನ್ನ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ಯೋಜನೆ ಇಟ್ಟುಕೊಂಡಿದ್ದು, ತಂಡದ ಹೆಸರನ್ನು ಬದಲಾವಣೆ ಮಾಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದೆ.

ಫೋರ್ಸ್ ಇಂಡಿಯಾ ತಂಡದ ಹೆಸರು ಬದಲಾವಣೆ : ವಿಜಯ್ ಮಲ್ಯ ರೇಸ್

ಸಿಲ್ವರ್‌ಸ್ಟೋನ್ ಮೂಲದ ಈ ತಂಡ ಜೋರ್ಡನ್, ಮಿಡ್‌ಲ್ಯಾಂಡ್ ಮತ್ತು ಸ್ಪೈಕರ್ ಎಂದು ಹೆಸರುಗಳಿಂದ ಖ್ಯಾತಿಗಳಿಸಿತ್ತು.

ಫೋರ್ಸ್ ಇಂಡಿಯಾ ತಂಡದ ಹೆಸರು ಬದಲಾವಣೆ : ವಿಜಯ್ ಮಲ್ಯ ರೇಸ್

ಈ ತಂಡದ ಮೇಲೆ ಮೊದಲಿನಿಂದಲೂ ಕಣ್ಣು ಇಟ್ಟಿದ್ದ ಮಲ್ಯ ಅವರು 2008ರಲ್ಲಿ ಈ ತಂಡವನ್ನು ಖರೀದಿಸಿ ಅದನ್ನು 'ಫೋರ್ಸ್ ಇಂಡಿಯಾ' ಎಂದು ಹೆಸರಿಸಿದರು.

ಫೋರ್ಸ್ ಇಂಡಿಯಾ ತಂಡದ ಹೆಸರು ಬದಲಾವಣೆ : ವಿಜಯ್ ಮಲ್ಯ ರೇಸ್

ಪ್ರತಿಯೊಂದು ವಿಚಾರದಲ್ಲೂ ಕೈಸುಟ್ಟುಕೊಂಡಿದ್ದ ವಿಜಯ್ ಮಲ್ಯ ಒಡೆತನದ ಕಂಪನಿಗಳ ಗುಂಪಿನಲ್ಲಿ ಹೆಚ್ಚು ಯಶಸ್ಸು ಗಳಿಸಿರುವುದು ಈ ಫೋರ್ಸ್ ಇಂಡಿಯಾ ಮಾತ್ರ. ಫೋರ್ಸ್ ಇಂಡಿಯಾ ತಂಡ 2016ಲ್ಲಿ ನೆಡೆದ ಚಾಂಪಿಯನ್‌ಶಿಪ್ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿಕೊಂಡಿತ್ತು.

ಫೋರ್ಸ್ ಇಂಡಿಯಾ ತಂಡದ ಹೆಸರು ಬದಲಾವಣೆ : ವಿಜಯ್ ಮಲ್ಯ ರೇಸ್

ನಂತರ 2017 ಫಾರ್ಮುಲಾ ಒನ್ ಕ್ರೀಡಾಋತುವಿನಲ್ಲಿ ಸಹ ತಂಡವು ನಾಲ್ಕನೇ ಸ್ಥಾನವನ್ನು ಗಳಿಸುವ ಮೂಲಕ ಫೋರ್ಸ್ ಇಂಡಿಯಾ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ.

ಫೋರ್ಸ್ ಇಂಡಿಯಾ ತಂಡದ ಹೆಸರು ಬದಲಾವಣೆ : ವಿಜಯ್ ಮಲ್ಯ ರೇಸ್

ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ತಂಡವು ವಿಶೇಷವಾಗಿ 2017ರಲ್ಲಿ ಹೆಚ್ಚು ರೂಪಾಂತರ ಹೊಂದಿದೆ ಮತ್ತು ಹೊಸ ಪ್ರಾಯೋಜಕರನ್ನು ಆಕರ್ಷಣೆ ಮಾಡಲು ಯಶ್ವಸಿಯಾಗಿದೆ.

Read more on ರೇಸ್ race
English summary
Force India is considering a name change to give an 'international flavour' to the Formula One team. This was stated by team boss Vijay Mallya.
Story first published: Thursday, June 15, 2017, 19:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark