ಸೈಕಲ್ ಮೇಲೆ ವಾಕ್ ಮಾಡಿರಿ: ಆರೋಗ್ಯಕ್ಕೆ ಒಳ್ಳೇದು!

ಸೈಕಲ್ ನಿಂದ ಇಳಿದು ವಾಕ್ ಮಾಡಬಹುದು. ಆದರೆ ಸೈಕಲ್ ನಲ್ಲಿಯೇ ವಾಕಿಂಗ್ ಮಾಡಲು ಸಾಧ್ಯವಿದೆಯೇ? ಇಲ್ಲೊಂದು ಹೊಸ ಸೈಕಲ್ ಮಾರುಕಟ್ಟೆಗೆ ಬಂದಿದೆ. ಎಲಿಪ್ಪಿಗೊ 3ಸಿ(ElliptiGO 3C) ಎಂಬ ಬೈಸಿಕಲ್ ನಲ್ಲಿ ವಾಕಿಂಗ್ ಮತ್ತು ಸೈಕ್ಲಿಂಗ್ ಒಟ್ಟಾಗಿ ಮಾಡಬಹುದಾಗಿದೆ. ಇದರ ಪೆಡಲ್ ಮೇಲೆ ವಾಕಿಂಗ್ ರೀತಿ ನಡೆದರೆ ಸಾಕು ಸೈಕಲ್ ವೇಗವಾಗಿ ಸಾಗುತ್ತದೆ.
ಎಲಿಪ್ಪಿಗೊ ಎಂಬ ವಿದೇಶಿ ಕಂಪನಿಯೊಂದು ಇಂತಹ ವಿನೂತನ ಬೈಸಿಕಲ್ ಹೊರತಂದಿದೆ. ಇದರ ದರ ಸುಮಾರು 1,799 ಡಾಲರ್. ಅಂದ್ರೆ ಅಂದಾಜು 80 ಸಾವಿರ ರೂಪಾಯಿ. ವಿಶೇಷವೆಂದರೆ ಈ ಬೈಸಿಕಲ್ ನಲ್ಲಿ ಯಾವುದೇ ಸಾಮಾಗ್ರಿಗಳನ್ನು ಸಾಗಿಸಲು ಸಾಧ್ಯವಿಲ್ಲ. ಬರೀ ನೀವು ಮಾತ್ರ ವಾಕಿಂಗ್ ಮತ್ತು ಸೈಕ್ಲಿಂಗ್ ಮಾಡಬಹುದು ಅಷ್ಟೇ! ಈ ಸೈಕಲ್ ಕಿತ್ತಲೆ ಮತ್ತು ಹಸಿರು ಬಣ್ಣಗಳಲ್ಲಿ ದೊರಕುತ್ತದೆ.


Click it and Unblock the Notifications








