ಫೆರಾರಿ ಟಿಆರ್ ಬ್ಯೂಟಿ, ಕಾರು ಲೋಕದ ವಿಶ್ವ ಸುಂದರಿ

Ferrari Testa Rossa
ಫೆರಾರಿ ಕಾರುಗಳೆಂದರೆ ವಾಹನ ಲೋಕದಲ್ಲಿಯೇ ವಿಶ್ವಸುಂದರಿ ಕಾರುಗಳು. ಅದರಲ್ಲಿ ಹೆಚ್ಚು ಗಮನ ಸೆಳೆಯುವುದು 1958ರ ಫೆರಾರಿ 250 ಟೀಸ್ಟಾ ರೊಸಾ ಎಂಬ ಬ್ಯೂಟಿ.

ಫೆರಾರಿ ಟಿಆರ್ ಅಥವಾ ಟೀಸ್ಟಾ ರೊಸಾ ಎಂದು ಈ ಸುಂದರಿಗೆ ಎರಡು ಹೆಸರು. 1958ರಲ್ಲಿ ಈ ರೇಸ್ ಕಾರಿನಲ್ಲಿ ಫ್ರಾನ್ಸ್ ಚಾಲಕನೊಬ್ಬ ಸಾವಿಗೀಡಾಗಿರುವುದನ್ನು ಮರೆತುಬಿಡೋಣ. ಈಗಲೂ ಫೆರಾರಿ ಕಾರುಗಳಲ್ಲಿ ಇದು ತುಂಬಾ ಜನಪ್ರಿಯ. ಇದರ ಬಾಡಿ ವಿನ್ಯಾಸವೇ ಹೆಚ್ಚು ಇಷ್ಟವಾಗುತ್ತದೆ.

24 ಹವರ್ಸ್ ಲಿ ಮ್ಯಾನ್ಸ್ ಚಾಪಿಯನ್ ನಲ್ಲಿ ಇದು ಮೂರು ಬಾರಿ 1958, 1960 ಮತ್ತು 1961ರಲ್ಲಿ ಚಾಂಪಿಯನ್ ಪಡೆದಿತ್ತು. ಈ ರೀತಿ ಚಾಪಿಯನ್ ಷಿಪ್ ಪಡೆದ ಮೊದಲ ಅಮೆರಿಕದ ಕಾರೆಂಬ ಖ್ಯಾತಿಯೂ ಇದಕ್ಕಿದೆ. ಇದರ ಸರಾಸರಿ ವೇಗ ಪ್ರತಿಗಂಟೆಗೆ 106.2 ಮೈಲುಗಳು. ಈಗಿನ ವೇಗದ ಕಾರುಗಳಿಗೆ ಹೋಲಿಸಿದರೆ ತುಸು ಕಡಿಮೆಯೇ.

ಟೀಸ್ಟಾ ರೋಸಾ ಪದದ ಅರ್ಥ "ಕೆಂಪು ತಲೆ". ಇಲ್ಲಿವರೆಗೆ ಕಂಪನಿಯು ಕೇವಲ 21 ಕಾರುಗಳನ್ನು ಮಾತ್ರ ರಸ್ತೆಗೆ ಬಿಟ್ಟಿದೆ. ಫೆರಾರಿಯ 250 ಜಿಟಿಒ ಕಾರಿನ ನಂತರದ ಹೆಚ್ಚು ಬೆಲೆಬಾಳುವ ಕಾರಿದು. 2009ರಲ್ಲಿ ಟೀಸ್ಟಾ ರೋಸಾ ಕಾರೊಂದು 12,100,000 ಡಾಲರ್ ದಾಖಲೆ ದರಕ್ಕೆ ಬಿಕರಿಯಾಯಿತು.

ಇದರ ಏರೋಡೈನಾಮಿಕ್ ವಿನ್ಯಾಸ ರೇಸಿಂಗ್ ಯಶಸ್ವಿಗೆ ಕಾರಣವಾದಂತೆ ವಿವಾದಗಳಿಗೂ ಕಾರಣವಾಗಿತ್ತು. ಇದರ ಸವಾರಿಯಲ್ಲಿ ಫ್ರಾನ್ಸ್ ಚಾಲಕನೊಬ್ಬ ಮೃತ್ಯುಗೀಡಾಗಿದ್ದ. ಈಗಲೂ ವಿಶ್ವದ ಬ್ಯೂಟಿ ಕಾರು ಲೋಕದಲ್ಲಿ ಫೆರಾರಿ ಟಿಆರ್ ಮಿಂಚುತ್ತಿದೆ. ಈ ರೇಸ್ ಕಾರಿಗೊಂದು ಸಲ್ಯೂಟ್.

More from DriveSpark

Article Published On: Friday, June 3, 2011, 10:38 [IST]
English summary
The Most Beautiful Cars of Le Mans. The Ferrari TR, or 250 Testa Rossa, is a race car model built by Ferrari in the 1950s and 60s. The Testa Rossa is still today one of the most famous Ferraris. Here is Ferrari TR full review. Just drive it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+