ಫ್ಲೂಯೆನ್ಸ್ ನಂತರ ಕೊಲಿಯೊಸ್: 4 ರೆನಾಲ್ಟ್ ಕಾರುಗಳು

"ಈ ವರ್ಷದ ಆಕ್ಟೊಬರ್ ನಲ್ಲಿ ಕೊಲಿಯೊಸ್ (Koleos) ಎಂಬ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಹೊರತರಲಿದ್ದೇವೆ. 2012ಕ್ಕೆ ಉಳಿದ ಮೂರು ಕಾರುಗಳನ್ನು ಪರಿಚಯಿಸಲಿದ್ದೇವೆ" ರೆನಾಲ್ಟ್ ಇಂಡಿಯಾ ಉಪಾಧ್ಯಕ್ಷರು ಹೇಳಿದ್ದಾರೆ. ಕಂಪನಿಯು ಇತ್ತೀಚೆಗೆ ಫ್ಲೂಯೆನ್ಸ್ ಕಾರನ್ನು ಹೊರತಂದಿತ್ತು.
ಇದರೊಂದಿಗೆ ಕಂಪನಿಯು ಭಾರತದಲ್ಲಿ ಹಗುರ ವಾಣಿಜ್ಯ ವಾಹನ ಕ್ಷೇತ್ರದಲ್ಲಿನ ಅವಕಾಶಗಳತ್ತಲೂ ಗಮನ ಹರಿಸುವುದಾಗಿ ಅವರು ಹೇಳಿದ್ದಾರೆ. ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳೆರಡು ಜಂಟಿಯಾಗಿ ಚೆನ್ನೈನ ಗ್ರೀನ್ ಫೀಲ್ಡ್ ನಲ್ಲಿ ಘಟಕ ನಿರ್ಮಿಸಿವೆ.
"ನಿಸ್ಸಾನ್ ನೊಂದಿಗೆ ಜಂಟಿಯಾಗಿ ಕಂಪನಿಯು ಉತ್ಪಾದನಾ ಘಟಕ ನಿರ್ಮಿಸಿದೆ. ಇದರಲ್ಲಿ ವರ್ಷಕ್ಕೆ ಸುಮಾರು 4 ಲಕ್ಷ ಕಾರುಗಳನ್ನು ಉತ್ಪಾದಿಸಲಾಗುವುದು. ಇದಕ್ಕಾಗಿ ಸುಮಾರು 5 ಸಾವಿರ ಕೋಟಿ ರು. ಹೂಡಿಕೆ ಮಾಡಲಾಗಿದೆ" ಎಂದರು.
ಈಗ ಕಂಪನಿಯು ದೇಶದಲ್ಲಿ ಸುಮಾರು 14 ಡೀಲರ್ ಕೇಂದ್ರಗಳನ್ನು ಹೊಂದಿದ್ದು ಇದನ್ನು ಈ ವರ್ಷದ ಅಂತ್ಯಕ್ಕೆ ಸುಮಾರು 40ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


Click it and Unblock the Notifications








