ಮೋದಿ ಮ್ಯಾಜಿಕ್: ಮಾರುತಿ ನಂತರ ಗುಜರಾತ್ ಗೆ ಫೋರ್ಡ್

ಗುಜರಾತಿನತ್ತ ಫೋರ್ಡ್ ಪ್ರಯಾಣ
ಗುಜರಾತಿನ ಅಭಿವೃದ್ಧಿ ಪುಂಗಿಗೆ ವಾಹನ ಕಂಪನಿಗಳು ತಲೆಯಾಡಿಸುತ್ತಿವೆ. ದೇಶದ 26 ರಾಜ್ಯಗಳಲ್ಲಿ ಗುಜರಾತ್ ಬೃಹತ್ ಆಟೋ ಹಬ್ ಆಗಿ ಜನಪ್ರಿಯಗೊಳ್ಳುವ ನಿರೀಕ್ಷೆಯಿದೆ. ಇತ್ತೀಚೆಗೆ ಮಾರುತಿ ಸುಜುಕಿ ಗುಜರಾತಿನಲ್ಲಿ ಘಟಕ ತೆರೆಯುವುದಾಗಿ ಪ್ರಕಟಿಸಿತ್ತು. ಅಲ್ಲಿ ಜನರಲ್ ಮೋಟರ್ಸ್, ಟಾಟಾ ಮೋಟರ್ಸ್ ಈಗಾಗಲೇ ಘಟಕ ಸ್ಥಾಪಿಸಿವೆ. ಇದೀಗ ಫೋರ್ಡ್ ಸರದಿ.

ಫೋರ್ಡ್ ಇಂಡಿಯಾ ತನ್ನ ಎರಡನೇ ಘಟಕವನ್ನು ಗುಜರಾತಿನ ಪುಣೆ ಅಥವಾ ಸನಂದ್ ಎಂಬಲ್ಲಿ ನಿರ್ಮಿಸಲು ಯೋಜಿಸುತ್ತಿದೆ. ಇದನ್ನು ಕಂಪನಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಉದ್ಯಮ ಮೂಲಗಳು ಹೇಳುವ ಪ್ರಕಾರ ಫೋರ್ಡ್ ಗುಜರಾತಿಗೆ ಪ್ರಯಾಣ ಬೆಳೆಸುವುದು ಬಹುತೇಕ ಖಚಿತವಾಗಿದೆ. ಕಂಪನಿಯು 2015ರ ವೇಳೆಗೆ 5 ಹೊಸ ಕಾರುಗಳನ್ನು ಅನಾವರಣ ಮಾಡಲಿರುವುದರಿಂದ ಈ ವದಂತಿಯನ್ನು ನಂಬಬಹುದಾಗಿದೆ.

ಈಗ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೆನ್ನೈನ ಮರಾಯಿಮಲೈ ಎಂಬಲ್ಲಿ ಒಂದು ಘಟಕವನ್ನು ಹೊಂದಿದೆ. ಇಲ್ಲಿ ವಾರ್ಷಿಕ 2 ಲಕ್ಷ ವಾಹನಗಳನ್ನು ಉತ್ಪಾದಿಸುತ್ತಿದೆ.

ಮೂಲಗಳು ಹೇಳುವ ಪ್ರಕಾರ ಎರಡನೇ ಘಟಕ ನಿರ್ಮಾಣಕ್ಕಾಗಿ ಫೋರ್ಡ್ ಇಂಡಿಯಾ ಸುಮಾರು 5 ಸಾವಿರ ರೂ. ಕೋಟಿ ಹೂಡಿಕೆ ಮಾಡಲಿದೆ. ಇದು ವಾರ್ಷಿಕ ಸುಮಾರು 3 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ನಿರೀಕ್ಷೆಯಿದೆ ಎನ್ನಲಾಗಿದೆ.

"ಭಾರತದಲ್ಲಿ ವಿಶ್ವದರ್ಜೆಯ ವಾಹನಗಳನ್ನು ಹೊರತರಲು ಕಂಪನಿ ನಿರ್ಧರಿಸಿದೆ. ಇದಕ್ಕಾಗಿ ತಮಿಳುನಾಡು ಘಟಕದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಿದೆ. ಜೊತೆಗೆ ದೇಶದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಇತರ ಆಯ್ಕೆಗಳತ್ತಲೂ ಗಮನ ನೀಡುವುದಾಗಿ" ಫೋರ್ಡ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

More from DriveSpark

Article Published On: Wednesday, June 8, 2011, 16:40 [IST]
English summary
After Maruti Suzuki, Ford India is revving up to drive into Gujarat. Company plans to invest Rs 5000 crore to set up a three-lakh-cars-per-annum plant in Gujarat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+