ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ ಭಾರತಕ್ಕೆ

By Nagaraja

ಸಂಪೂರ್ಣವಾಗಿ ಸೂರ್ಯ ಶಾಖದಿಂದಲೇ ಚಲಿಸುವ ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ಅಥವಾ ಸೋಲರ್ ನಿಯಂತ್ರಿತ ವಿಮಾನ ಗುಜರಾತ್‌ನ ಅಹಮಾಬಾದ್‌ನಲ್ಲಿ ಇಂದು (2015 ಮಾರ್ಚ್ 10, ಮಂಗಳವಾರ) ಬಂದಿಳಿಯಲಿದೆ.

ದುಬೈನ ಅಬುದಾಬಿಯಿಂದ ಗುಜರಾತ್‌ನ ಅಹಮಾದಾಬಾದ್‌ಗೆ ಪಯಣ ಬೆಳೆಸಿರುವ 'ಸೋಲರ್ ಇಂಪಲ್ಸ್' ವಿಮಾನ ಕಳೆದ ದಿನವೇ ಭಾರತಕ್ಕೆ ಆಗಮಿಸಬೇಕಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಒಂದು ದಿನದಷ್ಟು ವಿಳಂಬಗೊಂಡಿದೆ.

ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ - ಸೋಲಾರ್ ಇಂಪಲ್ಸ್

ಈ ಸಂದರ್ಭದಲ್ಲಿ ವಿಶ್ವದ ಏಕೈಕ ಸೌರವಿಮಾನ ಸೋಲಾರ್ ಇಂಪಲ್ಸ್ ಸಂಸ್ಥಾಪಕ ಬರ್ಟ್ರಾಂಡ್ ಪಿಕಾರ್ಡ್ ಹಾಗೂ ಆ್ಯಂಡ್ರೆ ಬೋರ್ಶ್‌ಬರ್ಗ್ ಸಹ ಜೊತೆಗಿರಲಿದ್ದಾರೆ. ಎರಡು ದಿನಗಳಷ್ಟು ಕಾಲ ಭಾರತದಲ್ಲಿ ಕಳೆಯಲಿರುವ ಇವರು ವಾರಣಾಸಿಗೂ ಪಯಣ ಬೆಳೆಸಲಿದ್ದಾರೆ.

ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ - ಸೋಲಾರ್ ಇಂಪಲ್ಸ್

ಸ್ವಿಜರ್ಲೆಂಡ್‌ನಲ್ಲಿ ನಿರ್ಮಿತ ಸೋಲಾರ್ ಇಂಪಲ್ಸ್ ಸೌರಶಕ್ತಿ ವಿಮಾನವು ಪರಿಸರ ಸ್ನೇಹಿ ಇಂಧನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲಿದ್ದು, ವಿಶ್ವಕ್ಕೆ ತನ್ನ ಆಗಮನವನ್ನು ಪರಿಚಯಿಸಲಿದೆ.

ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ - ಸೋಲಾರ್ ಇಂಪಲ್ಸ್

ಅಬುದಾಬಿಯಿಂದ ಚೊಚ್ಚಲ ಹಾರಾಟ ಆರಂಭಿಸಿರುವ ಸೌರಶಕ್ತಿ ವಿಮಾನವು ಅರಬೀಯಾ ಸಮುದ್ರ ಮಾರ್ಗವಾಗಿ ಭಾರತವನ್ನು ತಲುಪಲಿದೆ. ಇಲ್ಲಿಂದ ಬಳಿಕ ಚೀನಾ, ಫೆಸಿಫಿಕ್ ಸಾಗರ, ಅಮೆರಿಕ, ಅಟ್ಲಾಂಟಿಕಾ ಸಾಗರ, ಯುರೋಪ್, ಉತ್ತರ ಆಫ್ರಿಕಾವನ್ನು ಸುತ್ತಾಡಿ ಮತ್ತೆ ಅಬುದಾಬಿ ನಗರವನ್ನು ಹಿಂತಿರುವ ಯೋಜನೆ ಹೊಂದಿದೆ. ಇದಕ್ಕಾಗಿ ಒಟ್ಟು 25 ದಿನಗಳು ತಗಲುವ ನಿರೀಕ್ಷೆಯಿದೆ.

ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ - ಸೋಲಾರ್ ಇಂಪಲ್ಸ್

ಭಾರತದಲ್ಲಿ ಸರಕಾರ ಪ್ರತಿನಿಧಿ, ಎನ್‌ಜಿಒಗಳ ಜೊತೆ ಸಮಾಲೋಚನೆ ಮಾಡಲಿರುವ ಬರ್ಟ್ರಾಂಡ್ ಪಿಕಾರ್ಡ್ ಹಾಗೂ ಆ್ಯಂಡ್ರೆ ಬೋರ್ಶ್‌ಬರ್ಗ್ ಅವರ ಸೌರ ವಿಮಾನವು ವಾರಾಣಸಿಯಲ್ಲಿ ಗಂಗಾ ನಂದಿಯ ಮೇಲೂ ಹಾರಾಡಲಿದೆ. ಈ ಮೂಲಕ ಸ್ವಚ್ಛತೆ ಹಾಗೂ ಶುದ್ಧ ಇಂಧನದ ಸಂದೇಶವನ್ನು ರವಾನಿಸಲಿದ್ದಾರೆ.

ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ - ಸೋಲಾರ್ ಇಂಪಲ್ಸ್

ಸೋಲಾರ್ ಇಂಪಲ್ಸ್, ಹಗಲು ರಾತ್ರಿವಿಡೀ ಸೌರಶಕ್ತಿಯಲ್ಲಿ ಸಂಚರಿಸುವ ವಿಶ್ವದ ಏಕಮಾತ್ರ ಸೌರ ವಿಮಾನವಾಗಿದೆ. ಅಲ್ಲದೆ ಗಂಟೆಗೆ 140 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ - ಸೋಲಾರ್ ಇಂಪಲ್ಸ್

ಬೋಯಿಂಗ್ 747 ವಿಮಾನಗಿಂತಲೂ ಅಗಲವಾದ ರೆಕ್ಕೆಯನ್ನು (72 ಮೀಟರ್) ಹೊಂದಿರುವ ಸೋಲರ್ ವಿಮಾನ 2,300 ಕೆ.ಜಿ ತೂಕವನ್ನು (ಕಾರಿನ ಭಾರಕ್ಕೆ ಸಮಾನ) ಹೊಂದಿದೆ.

ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ - ಸೋಲಾರ್ ಇಂಪಲ್ಸ್

17,248 ಸೌರಕೋಶಗಳನ್ನು ರೆಕ್ಕೆ-ಪುಕ್ಕಗಳಲ್ಲಿ ಹೊಂದಿರುವ ಈ ಸೌರಶಕ್ತಿ ವಿಮಾನವು ಎಲೆಕ್ಟ್ರಿಕ್ ಮೋಟಾರ್‌ಗೆ ಅಗತ್ಯ ಶಕ್ತಿಯನ್ನು ಸರಬರಾಜು ಮಾಡುತ್ತದೆ. ಅಲ್ಲದೆ 663 ಕೆ.ಜಿ ತೂಕದ ನಾಲ್ಕು ಲಿಥಿಯಂ ಪೊಲಿಮರ್ ಬ್ಯಾಟರಿಗಳಿಂದ ಸೌರಕೋಶಗಳನ್ನು ರಿಚಾರ್ಜ್ ಮಾಡಲಾಗುತ್ತದೆ.

ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ - ಸೋಲಾರ್ ಇಂಪಲ್ಸ್

10 ವರ್ಷಗಳ ಸುದೀರ್ಘ ಅಧ್ಯಯನ, ನಿರ್ಮಾಣ ಹಾಗೂ ಪರೀಕ್ಷಾರ್ಥ ಚಾಲನೆಯ ಬಳಿಕ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಗರಿಷ್ಠ 70 ಅಶ್ವಶಕ್ತಿ (17.5 ಅಶ್ವಶಕ್ತಿ ಉತ್ಪಾದಿಸುವ ನಾಲ್ಕು ವಾಹನಗಳಿಗೆ ಸಮಾನ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
Solar Impulse: World's first solar-powered aircraft
Story first published: Tuesday, March 10, 2015, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X