ಭಾರತದಲ್ಲಿ ಆಡಿ ಎ6 ಸೀರಿಸ್ ಉತ್ಪಾದನೆ ಸುರು

ಆರಂಭದಲ್ಲಿ ಪ್ರತಿ ವರ್ಷ ಸುಮಾರು 2 ಸಾವಿರಕ್ಕೂ ಹೆಚ್ಚು ಆಡಿ ಎ6 ಕಾರುಗಳನ್ನು ಉತ್ಪಾದಿಸಲು ಕಂಪನಿ ನಿರ್ಧರಿಸಿದೆ. ಕಂಪನಿ ಆಡಿ ಎ4 ಮತ್ತು ಆಡಿ ಕ್ಯೂ5 ಕಾರುಗಳ ಉತ್ಪಾದನೆಯನ್ನು ಕಳೆದ 2007ರ ಸೆಪ್ಟಂಬರ್ ನಲ್ಲಿಯೇ ಆರಂಭಿಸಿತ್ತು.
ಭಾರತದಲ್ಲಿ ಆಡಿಯ ಹೆಚ್ಚಿನ ಕಾರುಗಳು ಮಾರಾಟವಾಗುತ್ತಿವೆ. ಅಂದರೆ ಆಡಿ ಎ4, ಆಡಿ ಎ6, ಆಡಿ ಎ7 ಸ್ಪೋರ್ಟ್ಸ್ ಕಾರುಗಳು ರಸ್ತೆಯಲ್ಲಿವೆ. ಉಳಿದಂತೆ ಕೂಪ್ ಆವೃತ್ತಿಗಳಾದ ಆಡಿ ಎ8, ಆಡಿ ಕ್ಯೂ5, ಆಡಿ ಕ್ಯೂ7, ಆಡಿ ಆರ್ಎಸ್ 5 ಮತ್ತು ಆಡಿ ಆರ್8 ಮತ್ತು ಆಡಿ ಆರ್8 ಸ್ಪೈಡರ್ ಎಂಬ ಸೂಪರ್ ಸ್ಪೋರ್ಟ್ಸ್ ಕಾರುಗಳನ್ನು ಹೊರತಂದಿದೆ.


Click it and Unblock the Notifications








