ನಮ್ಮ ನ್ಯಾನೊ ಕಾರು ಶ್ರೀಲಂಕಾದಲ್ಲಿ ಟ್ಯಾಕ್ಸಿ!

ಕಳೆದ ತಿಂಗಳು ನ್ಯಾನೊ ಕಾರುಗಳು ಶ್ರೀಲಂಕಾ ಮಾರುಕಟ್ಟೆಗೆ ಪ್ರವೇಶಿಸಿದ್ದವು. ಅಲ್ಲಿನ ಸ್ಥಳೀಯ ಕಂಪನಿಯೊಂದಕ್ಕೆ ದುಬಾರಿ ಎಸಿ ಟ್ಯಾಕ್ಸಿ ಬದಲಾಗಿ "ನ್ಯಾನೊ ಟ್ಯಾಕ್ಸಿ" ಹೆಚ್ಚು ಲಾಭಕರ ಅನಿಸಿತ್ತು. ಹೀಗಾಗಿ ಸುಮಾರು 45 ನ್ಯಾನೊಗಳನ್ನು ಟ್ಯಾಕ್ಸಿ ಸೇವೆಗೆ ಬಿಟ್ಟಿದೆ.
"ನಾವೀಗ 45 ನ್ಯಾನೊ ಟ್ಯಾಕ್ಸಿ ಕಾರುಗಳನ್ನು ರಸ್ತೆಗೆ ಬಿಟ್ಟಿದ್ದೇವೆ. ಈ ವರ್ಷದ ಅಂತ್ಯಕ್ಕೆ ಇದು ಇನ್ನೂರು ಕಾರುಗಳಿಗೆ ತಲುಪುವ ನಿರೀಕ್ಷೆಯಿದೆ" ಎಂದು ನ್ಯಾನೊ ಟ್ಯಾಕ್ಸಿ ಕಂಪನಿಯ ವಕ್ತಾರರು ಹೇಳಿದ್ದಾರೆ. ಮೂರು ಚಕ್ರದ ಆಟೋ ರಿಕ್ಷದಷ್ಟು ಓವರ್ ಲೋಡ್ ಮಾಡುತ್ತಿಲ್ಲ ಎಂಬ ಸಂತೋಷದಿಂದ ಅಲ್ಲಿನ ಪ್ರಯಾಣಿಕರಿದ್ದಾರಂತೆ!
ನ್ಯಾನೊ ಟ್ಯಾಕ್ಸಿ ಕಂಪನಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಈ ಸುಂದರ ನ್ಯಾನೊ ಟ್ಯಾಕ್ಸಿಗೆ ಮಹಿಳಾ "ಚಾಲಕಿ"ಯರನ್ನು ನೇಮಿಸಿಕೊಳ್ಳಲಿದೆಯಂತೆ. ಶ್ರೀಲಂಕಾದಲ್ಲಿ ಟಾಟಾ ನ್ಯಾನೊ ದರ ತೆರಿಗೆ ಇತ್ಯಾದಿ ವೆಚ್ಚ ಸೇರಿ ಇಲ್ಲಿಗಿಂತ ಎರಡುವರೆ ಪಟ್ಟು ಹೆಚ್ಚಾಗಿದೆ.


Click it and Unblock the Notifications








