ಶ್ರೀಲಂಕಾ ಪೊಲೀಸ್ ತೆಕ್ಕೆಗೆ 279 ಅತ್ಯಂತ ಶಕ್ತಿಶಾಲಿ ಬೈಕ್‌ಗಳು
ನೆರೆಯ ಶ್ರೀಲಂಕಾದಲ್ಲಿ ಕೋಮುಗಲಭೆ ಪದೇ ಪದೇ ಭುಗಿಲೆದ್ದಿರುವುದು ಅಲ್ಲಿನ ಭದ್ರತಾ ವಿಭಾಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಿಸುವುದಕ್ಕೆ ಮುಂದಾಗಿರುವ ಶ್ರೀಲಂಕಾ ಪೊಲೀಸ್ 279 ಅತ್ಯಂತ ಶಕ್ತಿಶಾಲಿ ಯಮಹಾ ಬೈಕ್‌ಗಳನ್ನು ತನ್ನ ತೆಕ್ಕೆಗೆ ಸೇರಿಕೊಂಡಿದೆ.
2014 ಜುಲೈ 1ರಂದು ಕೊಲಂಬೊದಲ್ಲಿ ನಡೆದ ಸಮಾರಂಭದಲ್ಲಿ ಜಪಾನ್ ಮೂಲದ ಯಮಹಾ ಎಫ್‌ಝಡ್6ಆರ್ ಬೈಕ್‌ಗಳನ್ನು ಪೊಲೀಸ್ ಪಡೆಗೆ ಹಸ್ತಾಂತರಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕೋಮುಗಲಭೆಯನ್ನು ಹದ್ದು ಬಸ್ತಿನಲ್ಲಿಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಭರವಸೆ ನೀಡಿದ್ದಾರೆ.

ಒಟ್ಟು 945 ಕೋಟಿ ರು. ವೆಚ್ಚದಲ್ಲಿ ಅಂದರೆ ಪ್ರತಿ ಬೈಕ್‌ಗೆ ಮೂರು ದಶಲಕ್ಷಗಳಷ್ಟು ರುಪಾಯಿ ಖರ್ಚು ಮಾಡಿ ಯಮಹಾದ ದುಬಾರಿ 600 ಸಿಸಿ ಬೈಕ್‌ಗಳನ್ನು ಖರೀದಿಸಲಾಗಿದೆ.

ವರದಿಗಳ ಪ್ರಕಾರ ಶ್ರೀಲಂಕಾದಲ್ಲಿ ವಾರ್ಷಿಕವಾಗಿ ನಡೆಯುತ್ತಿರುವ ರಸ್ತೆ ಅಪಘಾತಕ್ಕೆ ಸರಾಸರಿ 2,500ದಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೈವೇ ಪೊಲೀಸ್ ಪಡೆಗೆ ಸೇರಲಿರುವ ಯಮಹಾ ನೂತನ ಬೈಕ್‌ಗಳು ಪಹರೆ ನಡೆಸಲಿದೆ.

ಇನ್ನು ಯಮಹಾ ಎಫ್‌ಝಡ್6ಆರ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದರ ಚಾಲನೆ ತುಂಬಾನೇ ಸುಲಭವಾಗಿದೆ. ಕಡಿಮೆ ಸೀಟು ಎತ್ತರ ಎಲ್ಲ ದೇಹ ಕಾಯ ಹೊಂದಿರುವ ಗ್ರಾಹಕರಿಗೆ ಅತ್ಯುತ್ತಮ ಚಾಲನಾ ಅನುಭವ ಪ್ರದಾನ ಮಾಡಲಿದೆ.

ಯಮಹಾ ಎಫ್‌ಝಡ್6ಆರ್ ನಿರ್ವಹಣೆ, ಹ್ಯಾಂಡ್ಲಿಂಗ್ ಹಾಗೂ ಕ್ರೀಡಾತ್ಮಕ ಶೈಲಿ ಸಂಯೋಜನೆಯಾಗಿದೆ. ಇದು 600 ಸಿಸಿ ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್ ಡಿಒಎಚ್‌ಸಿ 16 ವಾಲ್ವೆ ಎಂಜಿನ್ ಪಡೆದುಕೊಂಡಿದೆ. ಹಾಗೆಯೇ 6 ಸ್ಪೀಡ್ ಮಲ್ಟಿ ಪ್ಲೇಟ್ ವೆಟ್ ಕ್ಲಚ್ ಪಡೆದುಕೊಳ್ಳಲಿದೆ.

ಇನ್ನು ಇದು ಡಿಜಿಟಲ್ ಸ್ಪೀಡೋಮೀಟರ್, ಅನಾಲಾಗ್ ಟ್ಯಾಕೋಮೀಟರ್, ಓಡೋಮೀಟರ್/ಟ್ರಿಪ್‌ಮೀಟರ್, ಪ್ಲೂಯಲ್ ಗೇಜ್ ಮತ್ತು ವಾಟರ್ ಕೂಲಂಟ್ ಗೇಜ್‌ಗಳನ್ನು ಹೊಂದಿರುತ್ತದೆ.

ಯಮಹಾ ಎಫ್‌ಝಡ್6ಆರ್ ಮುಂಭಾಗ ಹಾಗೂ ಹಿಂಭಾಗದಲ್ಲಿ ಹೈಡ್ರಾಲಿಕ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದು ಲೈಟ್ ವೇಟ್ ಸ್ಪೋರ್ಟ್ಸ್ ಬೈಕ್ ಆಗಿರಲಿದೆ.

ಇದು ವಿಭಜಿತ ಸೀಟು ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ ನಾವೀನ್ಯತೆಯ ಭಾಗವಾಗಿ ಸೀಟು ಎತ್ತರ ಹೊಂದಾಣಿಸುವ ತಂತ್ರಜ್ಞಾನವು ಒಳಗೊಂಡಿದೆ.

ಒಟ್ಟಾರೆಯಾಗಿ ಯಮಹಾದ ನೂತನ ಬೈಕ್ ಶ್ರೀಲಂಕಾ ಪೊಲೀಸ್ ಪಡೆಗೆ ಇನ್ನಷ್ಟು ಶಕ್ತಿ ತುಂಬಲಿದೆ. ಭಾರತ ಪೊಲೀಸ್ ಪಡೆಗೂ ಇಂತಹ ಶಕ್ತಿಶಾಲಿ ಬೈಕ್‌ಗಳ ಸೇರ್ಪಡೆಯಾಗಲಿ ಎಂಬುದು ನಮ್ಮ ಆಶಯ.


Click it and Unblock the Notifications








