ಹರಿಸನ್ ಮೋಟರ್ ಹೊರತಂದ ಫನ್ ಬೈಕ್ ನೋಡಿರಿ

ಜೂನಿಯರ್(50ಸಿಸಿ), ಸ್ಟ್ರೀಕರ್(110ಸಿಸಿ), ಫೈಟರ್(150 ಸಿಸಿ) ಮತ್ತು ಟರ್ಮಿಟೇಟರ್(200ಸಿಸಿ) ಎಂಬ ನಾಲ್ಕು ಆವೃತ್ತಿಗಳನ್ನು ಫಂಟಿ ಬ್ರಾಂಡ್ ನಡಿ ಅನಾವರಣಗೊಳಿಸಿದೆ. ಈ ನಾಲ್ಕು ಬೈಕ್ ದರ 1.5 ಲಕ್ಷ ರು.ನಿಂದ 1.5 ಲಕ್ಷ ರು.ವರೆಗಿದೆ.
ಏನಿದು ಎಟಿವಿ?: ಫನ್ ಡ್ರೈವ್ ಗಾಗಿ ಎಟಿವಿ ಸ್ಪೋರ್ಟ್ಸ್ ಬೈಕ್ ಗಳನ್ನು ಬಳಸಲಾಗುತ್ತದೆ. ಇದು ನಾಲ್ಕು ಚಕ್ರ ಹೊಂದಿದ್ದು, ಇದು ಸಂಚರಿಸಲು ರಸ್ತೆಯೇ ಬೇಕೆಂದಿಲ್ಲ. ಎತ್ತರ ತಗ್ಗು ದಿಬ್ಬದಲ್ಲಿಯೂ ಇದನ್ನು ಚಲಾಯಿಸಬಹುದು. ಇದನ್ನು ಹೆಚ್ಚಾಗಿ ಬೀಚ್ ಗಳಲ್ಲಿ, ಬೆಟ್ಟ ಗುಡ್ಡಗಳ ದಾರಿಯಲ್ಲಿ ಫನ್ ರೈಡ್ ಗಾಗಿ ಬಳಸುತ್ತಾರೆ.


Click it and Unblock the Notifications