ಒಪೆಲ್ ನ್ನು ಮತ್ತೆ ಮಾರಾಟ ಮಾಡಲು ಜಿಎಂ ನಿರ್ಧಾರ!

2009ರಲ್ಲಿಯೇ ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಂಚಿಗೆ ತಲುಪಿದ್ದ ಜನರಲ್ ಮೋಟರ್ಸ್ ಒಪೆಲನ್ನು ಮಾರಾಟ ಮಾಡಲು ಯತ್ನಿಸಿತ್ತು. ಹಲವು ಕಂಪನಿಗಳೊಂದಿಗೆ ಚೌಕಾಶಿ ನಡೆಸಿದ ನಂತರ ಒಪೆಲ್ ಮಾರಾಟ ನಿರ್ಧಾರದಿಂದ ಜಿಎಂ ಹಿಂದೆ ಸರಿದಿತ್ತು.
ನಂತರ ಜಿಎಮ್ 160 ಕೋಟಿ ಡಾಲರ್ ಹೂಡಿಕೆ ಮಾಡಿ ಒಪೆಲ್ ನ್ನು ಮರುರೂಪಿಸಿತ್ತು. ಇದೀಗ ಒಪೆಲ್ ಉತ್ತುಂಗದಲ್ಲಿರುವಾಗ ಜಿಎಂ ಮಾರಾಟ ಮಾಡಲಿದೆ ಎನ್ನುವ ವದಂತಿ ಹಲವರ ಹುಬ್ಬೇರಿಸುವಂತೆ ಮಾಡಿದೆ. ಆದರೆ ಈ ವದಂತಿಯನ್ನು ಒಪೆಲ್ ತಳ್ಳಿಹಾಕಿದೆ.


Click it and Unblock the Notifications








