ರೆನಾಲ್ಟ್ ಸ್ಪೋರ್ಟ್ಸ್ ಕಾರು ಡಸ್ಟರ್ ಬರುತ್ತಿದೆ ದಾರಿಬಿಡಿ

ನೂತನ ಡಸ್ಟರ್, ಲೊಗಾನ್(ಈಗಿನ ವೆರಿಟೊ) ಫ್ಲಾಟ್ ಫಾರ್ಮ್ ನಲ್ಲಿ ರಸ್ತೆಗಿಳಿಯಲಿದೆ. 1.5 ಲೀಟರ್ ಡೀಸಲ್ ಎಂಜಿನ್ ಹೊಂದಿರುವ ಡಸ್ಟರ್, 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದ್ದು ಸುಮಾರು 107 ಹಾರ್ಸ್ ಪವರ್ ನೀಡಲಿದೆ.
ಡಸ್ಟರ್ ಕಾರಿನಲ್ಲಿ ಇಂಟಿರಿಯರ್ ಅಪ್ ಗ್ರೇಡ್ ಮಾಡುವುದಾಗಿ ಕಂಪನಿ ತಿಳಿಸಿದೆ. ರೆನಾಲ್ಟ್ ನ ಚೆನ್ನೈ ಘಟಕದಲ್ಲಿ ಡಸ್ಟರ್ ಉತ್ಪಾದನೆಗೊಳ್ಳಿದೆ. ಇದರ ದರ ಸುಮಾರು 7-8 ಲಕ್ಷ ರು. ಆಸುಪಾಸಿನಲ್ಲಿರಲಿದೆ.
ಡಸ್ಟರ್ ರಸ್ತೆಗಿಳಿಯಲು ಇನ್ನು ಸುಮಾರು 15 ತಿಂಗಳು ಕಾಯಬೇಕಿದೆ. ಅದಕ್ಕೂ ಮುನ್ನ ಕಂಪನಿಯು 5 ಕಾರುಗಳನ್ನು ಪರಿಚಯಿಸಲು ಈಗಾಗಲೇ ಯೋಜಿಸಿದೆ. ಈಗಾಗಲೇ ಕಂಪನಿಯು ಭಾರತದಲ್ಲಿ 14 ಡೀಲರ್ಷಿಪ್ ಕೇಂದ್ರಗಳನ್ನು ಹೊಂದಿದೆ. ಈ ವರ್ಷದ ಅಂತ್ಯಕ್ಕೆ ಇದನ್ನು 100ಕ್ಕೆ ಮತ್ತು 2012ರ ಅಂತ್ಯಕ್ಕೆ 100ಕ್ಕೆ ತಲುಪಿಸಲು ಕಂಪನಿ ಯೋಜಿಸಿದೆ.


Click it and Unblock the Notifications








