ಸ್ವಿಫ್ಟ್ ಗೆ ಟಾಂಗ್ ನೀಡಲಿದೆಯೇ ರೆನಾಲ್ಟ್ ಹ್ಯಾಚ್ ಬ್ಯಾಕ್

Renault will launch hatchback
ಮುಂದಿನ ವರ್ಷ ದೇಶದಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಹೊಸ ಹ್ಯಾಚ್ ಬ್ಯಾಕ್ ಕಾರೊಂದನ್ನು ಪರಿಚಯಿಸಲಾಗುವುದು ಎಂದು ರೆನಾಲ್ಟ್ ಹೇಳಿದೆ. ಈ ಕಾರು ಮಾರುತಿ ಸುಜುಕಿಯ ಸ್ವಿಫ್ಟ್ ಗೆ ಪೈಪೋಟಿ ನೀಡಲಿದೆಯಂತೆ!

ನೂತನ ಕಾರನ್ನು ಮುಂಬೈನಲ್ಲಿ ವಿನ್ಯಾಸ ಮಾಡಲಾಗುತ್ತಿದೆ."ಭಾರತದ ಗ್ರಾಹಕರಿಗೆ ಸೂಕ್ತವಾಗುವ ಹ್ಯಾಚ್ ಬ್ಯಾಕ್ ಕಾರೊಂದನ್ನು ವಿನ್ಯಾಸ ಮಾಡುತ್ತಿದ್ದೇವೆ" ಎಂದು ರೆನಾಲ್ಟ್ ಉಪಾಧ್ಯಕ್ಷರಾದ ಪಿಲಿಪ್ ಕ್ಲಿನ್ ಹೇಳಿದ್ದಾರೆ.

ಕಂಪನಿಯು ಈ ವರ್ಷದ ಅಂತ್ಯಕ್ಕೆ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ "ನ್ಯೂ ಕೊಲಿಯೊಸ್" ಕಾರನ್ನು ಹೊರತರಲಿದೆ. ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಕಂಪನಿಯು ಮತ್ತೊಂದು ಎಸ್ ಯುವಿ ಡಸ್ಟರನ್ನು ಹೊರತರಲಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಕಂಪನಿಯು ಐಷಾರಾಮಿ ಸೆಡಾನ್ ಕಾರು "ರೆನಾಲ್ಟ್ ಫ್ಲೂಯೆನ್ಸ್ ನ್ನು ಹೊರತಂದಿದೆ. ಫ್ಲೂಯೆನ್ಸ್ ಕಾರೊಂದನ್ನು ತಿರುಪತಿ ತಿರುಮಲ ವೆಂಕಟೇಶ್ವರನಿಗೂ ಕಾಣಿಕೆಯಾಗಿ ಅರ್ಪಿಸಲಾಗಿದೆ. ಒಟ್ಟಾರೆ ಭಾರತದ ರಸ್ತೆಗೆ ಇನ್ನಷ್ಟು ರೆನಾಲ್ಟ್ ಕಾರುಗಳು ಬರಲಿವೆ ಎಂಬುದು ಕಾರುಪ್ರಿಯರಿಗೆ ಖುಷಿಯ ವಿಷ್ಯ.

More from DriveSpark

Article Published On: Wednesday, June 22, 2011, 11:56 [IST]
English summary
Renault, the French car maker said that in India, it will launch a new hatchback during the Auto Expo in January 2012 and that will compete with Maruti Suzuki's Swift. By its design centre in Mumbai, the car is specifically designed for the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+