ಟಾಟಾ ನ್ಯಾನೊ ವಿರುದ್ಧ ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಅಲ್ಲಿನ ಟ್ಯಾಕ್ಸಿ ಮಾರುಕಟ್ಟೆಗೆ ನ್ಯಾನೊ ಕ್ಯಾಬ್ ಪ್ರವೇಶಿಸಿರುವುದರಿಂದ ಅಲ್ಲಿನ ರಿಕ್ಷಾ ಚಾಲಕರು ಕೋಪಗೊಂಡಿದ್ದಾರೆ. ಅವರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಕೊಂಚ ರಾಜಕೀಯದ ಬಣ್ಣವೂ ಬಂದಿದೆ.
ಜಾಗತಿಕ ಮಾರುಕಟ್ಟೆಗೆ ಪ್ರಯಾಣ ಬೆಳೆಸುವ ಕಾರ್ಯತಂತ್ರವಾಗಿ ಶ್ರೀಲಂಕಾಕ್ಕೂ ನ್ಯಾನೊ ಪ್ರವೇಶಿಸಿತ್ತು. ಆದರೆ ಅಲ್ಲಿನ ಕಂಪನಿಯೊಂದಕ್ಕೆ ಪುಟ್ಟ ಕಾರನ್ನು ನೋಡಿದಾಗ ಹೊಸ ಐಡಿಯಾ ಹೊಳೆದಿತ್ತು. ಅಲ್ಲಿನ ಏರ್ ಕಂಡಿಷನ್ ಕ್ಯಾಬ್ ಗೆ ಬದಲಾಗಿ ನ್ಯಾನೊ ಕಾರುಗಳನ್ನೇ ರಸ್ತೆಗಿಳಿಸಿತ್ತು. ದರನೂ ಕಡಿಮೆ. ಸಹಜವಾಗಿ ಇದು ಪ್ರಯಾಣಿಕರನ್ನು ಆಕರ್ಷಿಸಿತ್ತು.
ಕಂಪನಿಯು ನ್ಯಾನೊ ಕಾರಿನ ಚಕ್ರ ಮತ್ತು ಪ್ರಯಾಣಿಕ ಸೀಟಿಗೆ ಮಹೀಂದಾ ರಾಜಪಕ್ಷ ಅವರ ಚಿತ್ರವನ್ನು ಅಂಟಿಸಿತ್ತು. "ನಮಗೆ ತೆರಿಗೆ ವಿನಾಯಿತಿ ಮಾಡುವುದಾಗಿ ಚುನಾವಣೆಯಲ್ಲಿ ರಾಷ್ಟ್ರಾಧ್ಯಕ್ಷರಾದ ಮಹೇಂದ್ರ ರಾಜಪಕ್ಸ ಅಶ್ವಾಸನೆ ನೀಡಿದ್ದರು. ಈಗ ನೋಡಿದರೆ ಭಾರತದ ನ್ಯಾನೊ ಕಾರನ್ನು ಕ್ಯಾಬಾಗಿ ಪರಿವರ್ತಿಸಲಾಗಿದೆ. ಅದಕ್ಕೆ ಅವರ ಚಿತ್ರ ಅಂಟಿಸಲಾಗಿದೆ. ಇದು ಮೋಸ ಮೋಸ.. ನಮಗೆ ನ್ಯಾಯ ಬೇಕು" ಎಂದು ರಿಕ್ಷಾ ಚಾಲಕರು ಬೊಬ್ಬೆ ಹೊಡೆಯುತ್ತಿದ್ದಾರೆ.
ನ್ಯಾನೊ ಟ್ಯಾಕ್ಸಿ ಕಂಪನಿಯು ಇನ್ನಷ್ಟು ನ್ಯಾನೊ ಕ್ಯಾಬ್ ಗಳನ್ನು ಪರಿಚಯಿಸಲು ಯೋಜಿಸಿದೆ. ಆದರೆ ಕಂಪನಿಯ ಈ ವಿಸ್ತರಣಾ ಯೋಜನೆಯನ್ನು ಸ್ವ ಉದ್ಯೋಗಿಗಳ ಒಕ್ಕೂಟ(ಎಫ್ ಒಎಸ್ಇ) ವಿರೋಧಿಸಿದೆ. ಇನ್ನಷ್ಟು ನ್ಯಾನೊ ಕ್ಯಾಬ್ ಬಂದರೆ, ಟ್ಯಾಕ್ಸಿ ಸ್ಟಾಂಡ್ ಗಳು ನ್ಯಾನೊ ಸ್ಟಾಂಡ್ ಗಳಾದರೆ ನಾವು ನಿರುದ್ಯೋಗಿಗಳಾಗುತ್ತೇವೆ ನಮಗೆ ನಿರುದ್ಯೋಗ ಗ್ಯಾರಂಟಿ ಎಂದು ಟ್ಯಾಕ್ಸಿ ಚಾಲಕರು ಬೊಬ್ಬೆ ಹೊಡೆಯುತ್ತಿದ್ದಾರೆ.
ಗ್ರಾಹಕರಿಂದ ಏರ್ ಕಂಡಿಷನ್ ಅಳವಡಿಸಿದ ಟ್ಯಾಕ್ಸಿಗಿಂತ ನ್ಯಾನೊ ಟ್ಯಾಕ್ಸಿಗೆ ಕಡಿಮೆ ದರ ಪಡೆದುಕೊಳ್ಳಲಾಗುತ್ತದೆ. ಮೂರು ಚಕ್ರದ ರಿಕ್ಷಾ ದರದಷ್ಟೇ ಪ್ರಯಾಣ ಶುಲ್ಕ ವಿಧಿಸಲಾಗುತ್ತಿದೆ. ಟ್ಯಾಕ್ಸಿ ಸ್ಟಾಂಡ್ ಗಳು ನ್ಯಾನೊ ಸ್ಟಾಂಡ್ ಗಳಾದರೆ ನಾವು ನಿರುದ್ಯೋಗಿಗಳಾಗುತ್ತೇವೆ ಎಂದು ಅವರು ಬೊ್ಬೆ ಹಾಕುತ್ತಿದ್ದಾರೆ. ವಿಶ್ವದ ಅಗ್ಗದ ಕಾರು ನ್ಯಾನೊ ಶ್ರೀಲಂಕಾದಲ್ಲಿ ಇಲ್ಲಿಗಿಂತ ಮೂರು ಪಟ್ಟು ದುಬಾರಿಯಾಗಿದೆ.


Click it and Unblock the Notifications








