ಬರಲಿದೆ ಹೊಸ ರೇವಾ: ಮಹೀಂದ್ರದಿಂದ 5 ಹೊಸ ಕಾರುಗಳು

ಕಳೆದ ವರ್ಷ ಕಂಪನಿಯು ಕೊರಿಯಾದ ಸ್ಯಾಂಗ್ಯೊಂಗ್ ಕಂಪನಿಯನ್ನು 48 ಕೋಟಿ ಡಾಲರ್ ಗೆ ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಸ್ಯಾಂಗ್ಯೊಂಗ್ ಕಂಪನಿಯು ಮಹೀಂದ್ರಕ್ಕಾಗಿ ಹೊಸ ಹೊಸ ಕಾರುಗಳನ್ನು ಪರಿಚಯಿಸುತ್ತಿದೆ. ಆದರೂ ಸ್ಯಾಂಗ್ಯೊಂಗ್ ಕಂಪನಿಯು ತನ್ನದೇ ಡೀಲರ್ಷಿಪ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
"ಕಂಪನಿಯು ಸ್ಯಾಂಗ್ಯೊಂಗ್ ಸ್ಪೋರ್ಟ್ಸ್ ಕಾರನ್ನು ಮಹೀಂದ್ರ ಡೀಲರ್ಷಿಪ್ ಮೂಲಕ ಮಾರಾಟ ಮಾಡಬೇಕೆ ಅಥವಾ ಅದಕ್ಕಾಗಿ ಹೊಸ ಡೀಲರ್ಷಿಪ್ ಕೇಂದ್ರಗಳನ್ನು ತೆರೆಯಬೇಕೆ ಎಂದು ಇನ್ನೂ ನಿರ್ಧರಿಸಿಲ್ಲ" ಎಂದು ಗೋಯೆಂಕಾ ಹೇಳಿದ್ದಾರೆ. ಇದರೊಂದಿಗೆ ಸ್ಯಾಂಗ್ಯೊಂಗ್ ಉತ್ಪನ್ನಗಳಿಗೆ ಮಹೀಂದ್ರ ಟ್ಯಾಗ್ ಹಾಕುವ ಕುರಿತು ಕೂಡ ಯೋಚಿಸಿಲ್ಲ ಎಂದರು. ಇದರೊಂದಿಗೆ ಕಂಪನಿಯು ಹೊಸ ರೇವಾ ಕಾರು ಮತ್ತು ಸಿ ರೆಕ್ಸಾಟನ್ ಕಾರುಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊರತರಲಿದೆ.


Click it and Unblock the Notifications








