ಫೆರಾರಿ ಮರೆತುಬಿಡಿ, ಸಚಿನ್ ಕಾರುಲೋಕ ನೋಡಿ ಬೆರಗಾಗಿರಿ

ಸಚಿನ್ 98 ರನ್ ಗೆ ಔಟಾದರಂತೆ ಎಂದಾಗ ಕ್ರಿಕೆಟ್ ಪ್ರೇಮಿಗಳು ಛೇ ಎನ್ನುತ್ತಾರೆ. ಅಂತದ್ದೇ ಭಾವನೆ ಇಂದು ಹೆಚ್ಚಿನವರ ಮುಖದಲ್ಲಿದೆ. ಅದಕ್ಕೆ ಕಾರಣ ಸಚಿನ್ ತನ್ನ ಪ್ರೀತಿಯ ಫೆರಾರಿ ಕಾರನ್ನು ಮಾರಿದ ಸುದ್ದಿ. ತಾನು ಅಷ್ಟು ಪ್ರೀತಿಸುವ ಕಾರನ್ನು ಯಾಕೆ ಮಾರಿಬಿಟ್ಟರು ಎಂಬುದು ಎಲ್ಲರ ಪ್ರಶ್ನೆ.

ಆದರೆ ಫೆರಾರಿ ಮಾರಾಟವಾದಗ ಸಚಿನ್ ಗ್ಯಾರೇಜ್ ನಲ್ಲಿದ್ದ ಉಳಿದ ಎಲ್ಲಾ ಕಾರುಗಳು ಖುಷಿಪಟ್ಟಿರಬಹುದು. ಅವುಗಳಿಗೆ ನಿಜಕ್ಕೂ ಆ ರೇಸಿಂಗ್ ಕಾರಿನ ಮೇಲೆ ಇನ್ನಿಲ್ಲದ ಸಿಟ್ಟು. ಫೆರಾರಿ ಬಂದ ಮೇಲೆ ತಮ್ಮ ಮೇಲೆ ತೆಂಡೂಲ್ಕರ್ ಗಮನನೇ ನೀಡುತ್ತಿಲ್ಲ ಎನ್ನುವುದು ಅವುಗಳ ದೂರು ಆಗಿರಬಹುದು.

ನಿಜ. ಸಚಿನ್ ಬಳಿ ಸಾಕಷ್ಟು ಲಕ್ಷುರಿ, ವೇಗದ ಕಾರುಗಳಿವೆ. ಯಾರಾದರೂ ಗಿಫ್ಟ್ ನೀಡಿರುವುದು, ಮ್ಯಾನ್ ಆಫ್ ಮ್ಯಾಚ್, ಮ್ಯಾನ್ ಆಫ್ ಸೀರಿಸ್ ಪಡೆದಾಗ ದೊರಕಿದ್ದು ಸೇರಿದಂತೆ ಅವರ ಗ್ಯಾರೇಜ್ ನಲ್ಲಿ ಬ್ಯೂಟಿ ಕಾರುಗಳು ಸಾಲಾಗಿವೆ. ಕೆಲವೊಂದು ಕಾರುಗಳು ಸಚಿನ್ ದಿವ್ಯ ನಿರ್ಲಕ್ಷ್ಯದಿಂದ ಮೂಲೆಯಲ್ಲಿ(ಕಣ್ಣೀರು ಸುರಿಸುತ್ತ) ಬಾಕಿಯಾಗಿವೆ.

ಫೆರಾರಿ ಕಾರಲ್ಲದೇ ಸಚಿನ್ ಇಷ್ಟಪಡುವ ಕಾರು ಕಂಪನಿಗಳೆಂದರೆ ಮರ್ಸಿಡಿಸ್, ಪೊರ್ಷ್, ಬಿಎಂಡಬ್ಲ್ಯು. ಈ ಕಂಪನಿಯ ಪ್ರಮುಖ ಮಾಡೆಲ್ ಕಾರುಗಳು ಅವರಲ್ಲಿದೆ. ಅದರಲ್ಲಿ ಮರ್ಸಿಡಿಸ್ ಕಂಪನಿಯ ಎಸ್ಎಲ್ಎಸ್ ಎಎಂಜಿ ಕಾರು ಅವರಿಗಿಷ್ಟ. ಅದರೊಂದಿಗೆ ಮರ್ಸಿಡಿಸ್ ಸಿ230 ಕಾರಲ್ಲೂ ಆಗಾಗ ಸವಾರಿ ಹೊರಡುತ್ತಾರೆ. ಲ್ಯಾಂಡ್ ಕ್ರೂಷರ್ ಕೂಡ ಅವರ ನೆಚ್ಚಿನ ಕಾರು.

ಸಚಿನ್ ತೆಂಡೂಲ್ಕರ್ ಗೆ ವೇಗದ ಸವಾರಿ ಥ್ರಿಲ್ ಅನುಭವ ನೀಡುತ್ತದೆ ನಿಜ. ಹಾಗಂತ ಅವರು ರಾಷ್ ಡ್ರೈವರಲ್ಲ. ವೇಗದ ಸವಾರಿ ಅವರಿಗೆ ಮನೋಲ್ಲಾಸ ನೀಡುತ್ತದೆ. ಅವರೇ ಹೇಳುವಂತೆ "ವೇಗದ ಸವಾರಿ ಎಂಜಾಯೆಬಲ್". ಕಾರು ಡ್ರೈವಿಂಗ್ ನಲ್ಲಿ ತಕ್ಷಣ ಸೊನ್ನೆಯಿಂದ 80kmph ವೇಗ ಪಡೆದುಕೊಳ್ಳುವುದೆಂದರೆ ಇಷ್ಟವೆಂದು ಒಮ್ಮೆ ಹೇಳಿದ್ದರು.

ಸಚಿನ್ ತೆಂಡೂಲ್ಕರ್ ಅವರ ಮೊದಲ ಕಾರು ಯಾವುದು? ನೀವು ನಂಬಲೇಬೇಕು ಅವರು ಆರಂಭದಲ್ಲಿ ಬಳಸುತ್ತಿದ್ದದ್ದು ಮಾರುತಿ 800. ಮನೆಯ ಹತ್ತಿರವಿರುವ ಸಿನಿಮಾ ಥಿಯೇಟರ್ ಗೆ ಹೋಗಲು ಇದೇ ಕಾರನ್ನು ಬಳಸುತ್ತಿದ್ದರಂತೆ. ಇದೀಗ ಅವರ ಗ್ಯಾರೆಜ್ ನಲ್ಲಿ ಸಾಕಷ್ಟು ಲಕ್ಷುರಿ ಕಾರುಗಳು ಸಾಲಾಗಿವೆ.

ಸಚಿನ್ ಗೆ ಫಾರ್ಮುಲಾ ಒನ್ ರೇಸ್ ಆಟವೆಂದರೆ ಇಷ್ಟ. ಅದಕ್ಕಾಗಿ ಅವರು ಫೆರಾರಿ ಕಾರನ್ನು ಹೆಚ್ಚು ಇಷ್ಟಪಡುತ್ತಿದ್ದರು. ಮುಂಬೈ-ಪುಣೆ ಎಕ್ಸ್ ಪ್ರೇಸ್ ಹೆದ್ದಾರಿಯಲ್ಲಿ ವೇಗದ ಸವಾರಿ ಕೈಗೊಳ್ಳುವುದು ಸಚಿನ್ ಗೆ ಇಷ್ಟವಂತೆ. ಕೆಲವೊಮ್ಮೆ ಸಂತೋಷಕ್ಕಾಗಿ ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲೂ ಸವಾರಿ ಕೈಗೊಳ್ಳುತ್ತಾರಂತೆ. ಸಚಿನ್ ತನ್ನ ಇಷ್ಟದ ಕಾರು ಫೆರಾರಿಯನ್ನು ಮಾರಿದಾಗ ಇದೇಲ್ಲ ನೆನಪಾಯಿತು.

More from DriveSpark

Article Published On: Friday, June 24, 2011, 10:51 [IST]
English summary
Sachin Tendulkar and Car World : Indian Cricketer Sachin Tendulkar has sold his favorite car 360 Modena Ferrari to a businessman of Surat. However, in his garage there are other beauties like Mercedes SLS AMG, Mercedes C230, Land Cruiser among others. A check list of lovely Blondies in Sachins Car Museum, India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+