ಡೀಸಲ್ ಕಾರುಗಳಿಗೆ ವಿಮಾ ಪಾವತಿ ದುಬಾರಿಯಾಗಲಿದೆಯೇ?

Insurence
ಪೆಟ್ರೊಲ್ ದರ ಹೆಚ್ಚೆಂದು ಹೆಚ್ಚಿನ ಜನರು ಡೀಸಲ್ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಬಡ್ಡಿದರ ಹೆಚ್ಚಾಗಿದೆ. ಇದರಿಂದ ಇಎಂಐ ಪಾವತಿಯೂ ಕಿಸೆಗೆ ಒಂಚೂರು ಕತ್ತರಿ ಹಾಕಿದೆ. ಇನ್ನೂ ದುಃಖದ ಸಂಗತಿಯೆಂದರೆ ವಿಮಾ ಕಂಪನಿಗಳೂ ಕೂಡ ಡೀಸಲ್ ಕಾರುಗಳ ಮಾಲಿಕರಿಂದ ಹೆಚ್ಚು ದುಡ್ಡು ವಸೂಲು ಮಾಡಲು ಯೋಚಿಸುತ್ತಿವೆ.

ಪೆಟ್ರೊಲ್ ಕಾರಿಗಿಂತ ಡೀಸಲ್ ಕಾರು ವಿಮಾ ಪಾವತಿ ಶೇ. 30ರಷ್ಟು ದುಬಾರಿಯಾಗಲಿದೆ ಎಂದು ಮೂಲಗಳು ಹೇಳಿವೆ. ಕೆಲವು ವಿಮಾ ಕಂಪನಿಗಳೂ ಕೂಡ ವಿಮಾ ಕಂತು ದರ ಹೆಚ್ಚಳದ ಮುನ್ಸೂಚನೆ ನೀಡಿವೆ.

ದರ ಹೆಚ್ಚಳವೇಕೆ?: ಪೆಟ್ರೊಲ್ ಕಾರಿಗೊಂದು ವಿಮೆ ದರ ಮತ್ತು ಡೀಸಲ್ ಕಾರಿಗೊಂದು ವಿಮಾ ನೀತಿ ಏಕೆ ಎನ್ನಬಹುದು. ಡೀಸಲ್ ಕಾರುಗಳೆಂದರೆ ಲಾಂಗ್ ಡ್ರೈವ್ ಗೆ ಸೂಕ್ತವಾದ ಕಾರು. ಲಾಂಗ್ ಡ್ರೈವ್ ನಲ್ಲಿ ರಿಸ್ಕ್ ಹೆಚ್ಚು. ಇಂತಹ ದುಬಾರಿ ಕಾರುಗಳಿಗೆ ಸಣ್ಣಪುಟ್ಟ ಅಪಘಾತವಾದರೂ ವೆಚ್ಚ ದುಬಾರಿಯಾಗಬಹುದು. ರಸ್ತೆಯಲ್ಲಿ ಡೀಸಲ್ ಕಾರುಗಳ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹೀಗಾಗಿ ಅಪಘಾತದ ಅಪಾಯ ಹೆಚ್ಚಾಗುವ ಭೀತಿಯನ್ನಿಟ್ಟುಕೊಂಡು ವಿಮಾ ಕಂಪನಿಗಳು ದರ ಹೆಚ್ಚಿಸುವ ಕುರಿತು ಯೋಚಿಸುತ್ತಿವೆ.

"ಡೀಸಲ್ ಕಾರುಗಳಿಗೆ ಇಂಧನ ಎಂಬುದು ಪ್ರಮಖ ಪ್ಯಾರಾಮೀಟರ್ ಆಗಿರೋದರಿಂದ ಹೆಚ್ಚು ಲಾಂಗ್ ಡ್ರೈವ್ ಗೆ ಈ ಕಾರುಗಳನ್ನು ಬಳಸುತ್ತಾರೆ. ಹೀಗಾಗಿ ಅಪಾಯದ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ವಿಮಾ ಪಾವತಿ ಹೆಚ್ಚಿಸುವ ಕುರಿತು ಆಲೋಚಿಸುತ್ತಿದ್ದೇವೆ" ಎಂದು ಬಜಾಜ್ ಅಲೆಯನ್ಸ್ ಜನರಲ್ ಇನ್ಶೂರೆನ್ಸ್ ನ ವಾಹನ ವಿಮೆ ವಿಭಾಗದ ಮುಖ್ಯಸ್ಥರು ಹೇಳುತ್ತಾರೆ.

More from DriveSpark

Article Published On: Saturday, June 25, 2011, 10:43 [IST]
English summary
Diesel car insurance to cost more. Insurance firms across India are said to be considering a higher insurance premium for diesel engined cars. Insurance premiums for diesel cars could be increased by up to 30% when compared to equivalent petrol cars which is quite steep a hike (Indiancarsbikes report).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+