ಡೀಸಲ್ ಕಾರುಗಳಿಗೆ ಜೈಹೋ, ಜಿಎಂ ಹೊಸ ಬೀಟ್

General Motors
ಪೆಟ್ರೋಲ್ ದರ ದುಬಾರಿಯಾಗುತ್ತಿರುವುದರಿಂದ ಡೀಸಲ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ನೂತನ ಡೀಸಲ್ ಬೀಟ್ ಕಾರೊಂದನ್ನು ಹೊರತರಲು ಜನರಲ್ ಮೋಟರ್ಸ್ ನಿರ್ಧರಿಸಿದೆ. ಇದರೊಂದಿಗೆ ಕಂಪನಿಯ ಹಲವು ಡೀಸಲ್ ಕಾರುಗಳು ರಸ್ತೆಗಿಳಿಯಲು ಸರದಿ ಸಾಲಿನಲ್ಲಿ ನಿಂತಿವೆ.

ಜನರಲ್ ಮೋಟರ್ಸ್ ಬೀಟ್ ನ ನೂತನ ಡೀಸಲ್ ಆವೃತ್ತಿಯನ್ನು ಈ ತಿಂಗಳು ಹೊರತರಲಿದೆ. "ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡೀಸಲ್ ಮಾಡೆಲ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತೇವೆ" ಎಂದು ಜಿಎಂ ಅಧ್ಯಕ್ಷರಾದ ಕಾರ್ಲ್ ಸ್ಯಾಮ್ ಹೇಳಿದ್ದಾರೆ.

ಆವಿಯೊ ಯುವಿಎ ಈಗ ಪೆಟ್ರೊಲ್ ಎಂಜಿನ್ ನಲ್ಲಿ ದೊರಕುತ್ತಿದೆ. ಆದರೆ ಆವಿಯೊ ಸೆಡಾನ್ ಕಾರು ಪೆಟ್ರೊಲ್ ಮತ್ತು ಸಿಎನ್ ಜಿ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತಿವೆ. ಈಗ ಪೆಟ್ರೊಲ್ ಮತ್ತು ಡೀಸಲ್ ದರಗಳ ನಡುವಿನ ಅಂತರ 26 ರು.ಗಿಂತಲೂ ಹೆಚ್ಚಿರುವುದರಿಂದ ಕಂಪನಿಯು ಡೀಸಲ್ ಕಾರುಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಒಂದು ಸಲಹೆ:
ಪೆಟ್ರೊಲ್ ದರ ಹೆಚ್ಚಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಡೀಸಲ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ಯಾಕೆಂದರೆ ಡೀಸಲ್ ಕಾರುಗಳು ನಿಮಗೆ ಸೂಕ್ತವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಡೀಸಲ್ ಅಥವಾ ಪೆಟ್ರೋಲ್ ಆವೃತ್ತಿಗಳೂ ಕೂಡ ತಮ್ಮದೇ ಆದ ಒಳಿತು ಮತ್ತು ಕೆಡುಕುಗಳನ್ನು ಹೊಂದಿವೆ. ಆದರೆ ಈಗ ಇವೆರಡು ವರ್ಸನ್ ಗಳ ನಡುವೆ ಅಂಥಹ ಅಂತರವೇನಿಲ್ಲ. ಕೆಲವು ಡೀಸಲ್ ಎಂಜಿನ್ ಗಳು ಜಾಸ್ತಿ ಸದ್ದು ಮಾಡುತ್ತವೆ. ಆದರೆ ಇತ್ತೀಚಿನ ಡೀಸಲ್ ಎಂಜಿನ್ ಗಳು ಪೆಟ್ರೊಲ್ ಎಂಜಿನ್ ಗಳಿಗೆ ಸರಿಸಾಟಿಯಾಗಿವೆ.

ಹೈಎಂಡ್ ವಾಹನಗಳೂ ಕೂಡ ಈಗ ಡೀಸಲ್ ಎಂಜಿನ್ ನೊಂದಿಗೆ ಬರುತ್ತಿವೆ. ಡೀಸಲ್ ಎಂಜಿನ್ ನಿಂದ ಹೊರಸೂಸುವ ಕಾರ್ಬನ್ ಡೈಯಾಕ್ಷೈಡ್ ಕೂಡ ಕಡಿಮೆ. ಪರಿಸರ ಸ್ನೇಹಿ ಮನಸ್ಸು ನಿಮ್ಮಲ್ಲಿ ಇದ್ದರೆ ಡೀಸಲ್ ಎಂಜಿನ್ ಕಾರ್ ಖರೀದಿಸಬಹುದಾಗಿದೆ.

ಡೀಸಲ್ ಎಂಜಿನ್ ಕಾರ್ ಗಳಿಗೆ ಹೋಲಿಸಿದರೆ ಪೆಟ್ರೊಲ್ ಕಾರ್ ದುಬಾರಿಯಲ್ಲ. ಇಂಧನದಲ್ಲಿ ಡೀಸಲ್ ದರ ಪೆಟ್ರೊಲ್ ಗಿಂತ ಕಡಿಮೆ. ಹಾಗಾಗಿ ಕಿಸೆಗೆ ಒಂಚೂರು ಉಳಿತಾಯವಾಗುತ್ತದೆ.

ನೂತನ ಪೆಟ್ರೊಲ್ ಎಂಜಿನ್ ಗಳು ಡೈರೆಕ್ಟ್ ಇಂಜೆಕ್ಷನ್ ಫೀಚರ್ ಗಳೊಂದಿಗೆ ಬರುತ್ತಿವೆ. ಕಾರ್ಯಕ್ಷಮತೆಗೆ ಒತ್ತು ನೀಡುವವರು ಪೆಟ್ರೊಲ್ ಕಾರ್ ಗಳನ್ನೇ ಖರೀದಿಸುತ್ತಾರೆ. ಆದರೆ ಕೆಲವು ಡೀಸಲ್ ಕಾರ್ ಗಳು ಕೂಡ ಪೆಟ್ರೊಲ್ ಎಂಜಿನ್ ನಷ್ಟೇ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತವೆ.

ಕೆಲವು ಡೀಸಲ್ ಕಾರ್ ಗಳು ಹೆಚ್ಚು ಮೈಲೇಜ್ ಕೂಡ ನೀಡುತ್ತವೆ. ಆದರೆ ವರ್ಷಕ್ಕೆ 13 ಸಾವಿರದಿಂದ 15 ಸಾವಿರ ಕಿ.ಮೀ.ಯಷ್ಟು ವಾರ್ಷಿಕ ಪ್ರಯಾಣ ಇಲ್ಲದಿದ್ದರೆ ನಿಮಗೆ ನಷ್ಟವಾಗಬಹುದು. ಹೀಗಾಗಿ ಜಾಸ್ತಿ ಪ್ರಯಾಣ ಮಾಡದವರಿಗೆ ಪೆಟ್ರೊಲ್ ಎಂಜಿನ್ ಆಯ್ಕೆ ಉತ್ತಮ. ವರ್ಷಕ್ಕೆ ಕನಿಷ್ಠ 10 ಸಾವಿರ ಕಿ.ಮೀ. ಪ್ರಯಾಣ ಮಾಡುವರು ನೀವಲ್ಲದಿದ್ದರೆ ಡೀಸಲ್ ಎಂಜಿನ್ ಕುರಿತು ಯೋಚಿಸಬೇಡಿ.

More from DriveSpark

Article Published On: Thursday, July 14, 2011, 15:42 [IST]
English summary
General Motor India which will soon launch the new diesel powered Beat intends to increase the number of diesel vehicles in its model line-up as demand for diesel cars continues to surge in the wake of increased petrol prices. GM India will launch the diesel variant of the Beat hatchback this month and is open to adding diesel engines to the rest of its models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+