ಪೆಟ್ರೋಲ್ ಅಥವಾ ಡೀಸೆಲ್- ಯಾವ ಕಾರು ಸೂಕ್ತ?

Car Buying Tips
ಇದೀಗ ಇಂಧನ ದರ ಹೆಚ್ಚಳದ ಸುಳಿಗೆ ಸಿಲುಕಿರುವ ಕಾರು ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಕಾರು ಆಯ್ಕೆಯ ಸಂದಿಗ್ಧತೆಯಲ್ಲಿದ್ದಾರೆ. ಕೆಲವರಿಗೆ ಡೀಸೆಲ್ ಎಂಜಿನ್ ಕುರಿತು ಏನೂ ಗೊತ್ತಿಲ್ಲ. ಒಂದಿಷ್ಟು ಭಯನೂ ಇರುತ್ತದೆ. ಅಂತಹ ಕನ್ ಫ್ಯೂಸ್ ನಲ್ಲಿರುವರಿಗೆ ಡೀಸೆಲ್ ಮತ್ತು ಪೆಟ್ರೋಲ್ ಕಾರು ಎಂಜಿನ್ ಗಳ ಕೆಲವು ಮಾಹಿತಿ ಇಲ್ಲಿದೆ.

ಡೀಸೆಲ್ ಅಥವಾ ಪೆಟ್ರೋಲ್ ಆವೃತ್ತಿಗಳೂ ಕೂಡ ತಮ್ಮದೇ ಆದ ಒಳಿತು ಮತ್ತು ಕೆಡುಕುಗಳನ್ನು ಹೊಂದಿವೆ. ಆದರೆ ಈಗ ಇವೆರಡು ವರ್ಸನ್ ಗಳ ನಡುವೆ ಅಂಥಹ ಅಂತರವೇನಿಲ್ಲ. ಕೆಲವು ಡೀಸೆಲ್ ಎಂಜಿನ್ ಗಳು ಜಾಸ್ತಿ ಸದ್ದು ಮಾಡುತ್ತವೆ. ಆದರೆ ಇತ್ತೀಚಿನ ಡೀಸೆಲ್ ಎಂಜಿನ್ ಗಳು ಪೆಟ್ರೋಲ್ ಎಂಜಿನ್ ಗಳಿಗೆ ಸರಿಸಾಟಿಯಾಗಿವೆ.

ಹೈಎಂಡ್ ವಾಹನಗಳೂ ಕೂಡ ಈಗ ಡೀಸಲ್ ಎಂಜಿನ್ ನೊಂದಿಗೆ ಬರುತ್ತಿವೆ. ಡೀಸಲ್ ಎಂಜಿನ್ ನಿಂದ ಹೊರಸೂಸುವ ಕಾರ್ಬನ್ ಡೈಯಾಕ್ಷೈಡ್ ಕೂಡ ಕಡಿಮೆ. ಪರಿಸರ ಸ್ನೇಹಿ ಮನಸ್ಸು ನಿಮ್ಮಲ್ಲಿ ಇದ್ದರೆ ಡೀಸಲ್ ಎಂಜಿನ್ ಕಾರ್ ಖರೀದಿಸಬಹುದಾಗಿದೆ.

ಡೀಸೆಲ್ ಎಂಜಿನ್ ಕಾರ್ ಗಳಿಗೆ ಹೋಲಿಸಿದರೆ ಪೆಟ್ರೋಲ್ ಕಾರ್ ದುಬಾರಿಯಲ್ಲ. ಇಂಧನದಲ್ಲಿ ಡೀಸೆಲ್ ದರ ಪೆಟ್ರೋಲ್ ಗಿಂತ ಕಡಿಮೆ. ಹಾಗಾಗಿ ಕಿಸೆಗೆ ಒಂಚೂರು ಉಳಿತಾಯವಾಗುತ್ತದೆ. ನೂತನ ಪೆಟ್ರೋಲ್ ಎಂಜಿನ್ ಗಳು ಡೈರೆಕ್ಟ್ ಇಂಜೆಕ್ಷನ್ ಫೀಚರ್ ಗಳೊಂದಿಗೆ ಬರುತ್ತಿವೆ. ಕಾರ್ಯಕ್ಷಮತೆಗೆ ಒತ್ತು ನೀಡುವವರು ಪೆಟ್ರೋಲ್ ಕಾರ್ ಗಳನ್ನೇ ಖರೀದಿಸುತ್ತಾರೆ. ಆದರೆ ಕೆಲವು ಡೀಸೆಲ್ ಕಾರ್ ಗಳು ಕೂಡ ಪೆಟ್ರೋಲ್ ಎಂಜಿನ್ ನಷ್ಟೇ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತವೆ. ಕೆಲವು ಡೀಸೆಲ್ ಕಾರ್ ಗಳು ಹೆಚ್ಚು ಮೈಲೇಜ್ ಕೂಡ ನೀಡುತ್ತವೆ.

ಡೀಸೆಲ್ ಕಾರು ಖರೀದಿಸಬಯಸುವರು ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪಕ್ಕದ ಅಂಗಡಿಗೆ ಹಾಲಿಗೆ, ಪಕ್ಕದ ರಸ್ತೆಯಲ್ಲಿರುವ ಆಫೀಸಿಗೆ ಪ್ರಯಾಣ ಬೆಳೆಸುವರು ಮಾತ್ರ ನೀವಾಗಿದ್ದರೆ ನಿಮಗೆ ಡೀಸೆಲ್ ಕಾರು ವ್ಯರ್ಥ. ಡೀಸೆಲ್ ಎಂಜಿನ್ ಲಾಂಗ್ ಡ್ರೈವ್ ಮಾಡೋರಿಗೆ ಸೂಕ್ತ ಮತ್ತು ಲಾಭದಾಯಕ. ವರ್ಷಕ್ಕೆ ಕನಿಷ್ಠ 10 ಸಾವಿರ ಕಿ.ಮೀ. ಪ್ರಯಾಣ ಮಾಡುವರು ನೀವಲ್ಲದಿದ್ದರೆ ಡೀಸಲ್ ಎಂಜಿನ್ ಕುರಿತು ಯೋಚಿಸಬೇಡಿ.

Most Read Articles

Kannada
English summary
Are you planning to buy a new car? Which car you chose? Petrol or diesel? What is difference between petrol and diesel cars? Check out, watch out.
Story first published: Saturday, June 16, 2012, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X