ಫೆರಾರಿ ಮಾರಿದ ಸಚಿನ್ ಖರೀದಿಸಿದ್ದು ನಿಸ್ಸಾನ್ ಸೂಪರ್ ಕಾರು

ಮುಂಬೈ, ಜೂನ್ 25: ಸಚಿನ್ ತೆಂಡೂಲ್ಕರ್ ತನ್ನ ನೆಚ್ಚಿನ ಫೆರಾರಿ ಕಾರನ್ನು ಮಾರಿದ್ದಾರೆ. ಆದರೆ ಇದೀಗ ಹೊಸ ಕಾರೊಂದನ್ನು ಖರೀದಿಸಿದ್ದಾರೆ ಎಂದು ವರದಿಯೊಂದು ಹೇಳಿದೆ. ಸಚಿನ್ ತೆಂಡೂಲ್ಕರ್ ಖರೀದಿಸಿರುವ ಹೊಸ ಸೂಪರ್ ಕಾರಿನ ಹೆಸರು "ನಿಸ್ಸಾನ್ ಜಿಟಿ-ಆರ್"

ನೂತನ ನಿಸ್ಸಾನ್ ಜಿಟಿ-ಆರ್ ಕಾರು ಸುಮಾರು 530 ಹಾರ್ಸ್ ಪವರ್ ನೀಡುತ್ತದೆ. ಅದು ಟ್ವಿನ್ ಟರ್ಬೊ, ಫೋರ್ ವೀಲ್ ಡ್ರೈವ್ ಫೀಚರ್ ಹೊಂದಿದೆ. ಸಚಿನ್ ಹೊಸ ಕಾರಿನ ದರ ಅಂದಾಜು 40 ಲಕ್ಷ ರು. ಆಗಿದೆ. ನಿಸ್ಸಾನ್ ಜಿಟಿ ಕಾರು ಇನ್ನೆರಡು ವಾರಗಳಲ್ಲಿ ಬಾಂದ್ರಾದಲ್ಲಿರುವ ತೆಂಡೂಲ್ಕರ್ ಮನೆಗೆ ತಲುಪುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಸಚಿನ್ ಸ್ನೇಹಿತರೊಬ್ಬರು ಕನ್ಫರ್ಮ್ ಮಾಡಿದ್ದಾರೆ. " ಹೊಸ ಕಾರು ಖರೀದಿಸಿದ ಕುರಿತು ಸಚಿನ್ ಮಾಹಿತಿ ನೀಡಿದ್ದಾರೆ" ಎಂದರು. ನಿಮ್ಮ ಸ್ನೇಹಿತರಾದ ಸಚಿನ್ ಫೆರಾರಿ ಮಾರಾಟ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ "ನನ್ನ ಪ್ರಕಾರ ಅವರಿಗೆ ಫೆರಾರಿಯನ್ನು ಮುಂಬೈ ರಸ್ತೆಯಲ್ಲಿ ನಿರ್ವಹಿಸುವುದು ಕಷ್ಟವಾಗಿತ್ತು. ಜೊತೆಗೆ ಇವರ ಫೆರಾರಿ ಕಾರು ಕಂಡಾಕ್ಷಣ ಜನರು ಸುಲಭವಾಗಿ ಗುರುತು ಹಿಡಿಯುತ್ತಿದ್ದರು" ಎಂದರು.

More from DriveSpark

Article Published On: Saturday, June 25, 2011, 12:36 [IST]
English summary
Sachin Tendulkar has driven in a new one – a red Nissan GT-R Supercar. The 530 horse-powered, twin turbo, four-wheel drive which costs Rs 40 lakh approx was delivered to Tendulkar at his residence in Bandra a fortnight ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+