ರೇವಾ ಎನ್ಎಕ್ಸ್ಆರ್ ಬ್ಯಾಟರಿ ಕಾರು ಶೀಘ್ರದಲ್ಲಿ ರಸ್ತೆಗೆ

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ರೇವಾ ಎಲೆಕ್ಟ್ರಿಕ್ ಕಾರು ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಒಂದು ವರ್ಷದ ಹಿಂದೆ ಅದಕ್ಕೆ ಮಹೀಂದ್ರ ರೇವಾ ಎಂದು ನಾಮಕರಣ ಮಾಡಿತ್ತು. ನಂತರ ಕಂಪನಿಯು ಹೆಚ್ಚು ಶಕ್ತಿಶಾಲಿಯಾದ ದೊಡ್ಡ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುವ ಯತ್ನದಲ್ಲಿತ್ತು.
ಈ ಹಿನ್ನೆಲೆಯಲ್ಲಿ ಕಂಪನಿ ಅಭಿವೃದ್ಧಿಪಡಿಸಿದ್ದು ರೇವಾ ಎನ್ಎಕ್ಸ್ಆರ್ ಎಂಬ ಕಾರನ್ನು. ಇದನ್ನು ಕಳೆದ ವರ್ಷವೇ ವಿನ್ಯಾಸ ಮಾಡಲಾಗಿತ್ತು. ದೇಶದ ರಸ್ತೆಯಲ್ಲಿ ಹಲವು ಟೆಸ್ಟ್ ಗಳನ್ನು ನಡೆಸಿ ನೂತನ ಕಾರನ್ನು ಇನ್ನಷ್ಟು ಅಭಿವೃದ್ಧಿಪಡಿಸತೊಡಗಿತು.
ಕಂಪನಿಯು ಇತ್ತೀಚೆಗೆ ಹೊಸ ರೇವಾ ಕಾರನ್ನು ಬೆಂಗಳೂರಿನಲ್ಲಿ ಟೆಸ್ಟ್ ಡ್ರೈವ್ ಮಾಡಿತ್ತು. ಇದು ಈ ಕಾರು ಶೀಘ್ರದಲ್ಲಿ ರಸ್ತೆಗಿಳಿಯುವುದನ್ನು ಹೆಚ್ಚು ಖಾತ್ರಿ ಪಡಿಸಿದೆ. ರೇವಾ ಎನ್ಎಕ್ಸ್ಆರ್ ಎಂಬುದು ಎರಡು ಡೋರು ಮತ್ತು ನಾಲ್ಕು ಸೀಟಿನ ಕಾರಾಗಿದೆ. ಇದರಲ್ಲಿ ಒಂದಿಷ್ಟು ಹೈಟೆಕ್ ಫೀಚರ್ ಗಳಿರುವ ನಿರೀಕ್ಷೆಯಿದೆ. ಇದರ ದರದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.


Click it and Unblock the Notifications








