ಸಿಂಗೂರು ಭೂವಿವಾದ: ಟಾಟಾ ಸುಪ್ರಿಂ ಕೋರ್ಟ್ ಮೊರೆ

Tata Motors
ನ್ಯಾನೊ ಕಾರು ಘಟಕಕ್ಕಾಗಿ ರೈತರಿಂದ ವಶಪಡಿಕೊಂಡ ಭೂಮಿಯಲ್ಲಿ ಕೆಲಭಾಗವನ್ನು ಮತ್ತೆ ರೈತರಿಗೆ ಮರಳಿಸುವ ಪಶ್ಚಿಮ ಬಂಗಾಳದ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಟಾಟಾ ಮೋಟರ್ಸ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.

ಭೂಮಿ ವಿತರಣೆ ಮಾಡಿದ ಕುರಿತು ಯಾವುದೇ ಅಧಿಕೃತ ಪ್ರಕಟನೆ ಹೊರಬೀಳದ ಹಿನ್ನಲೆಯಲ್ಲಿ ತಡೆ ಕೋರುವುದು ಸಾಧ್ಯವಿಲ್ಲವೆಂದು ಹೈಕೋರ್ಟ್ ನಿನ್ನೆ ಹೇಳಿತ್ತು. ಇದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೋರೆ ಹೋದ ಟಾಟಾ ಮೋಟರ್ಸ್ ಸರಕಾರದ ನಿರ್ಧಾರಕ್ಕೆ ತಡೆಕೋರುವಂತೆ ಮನವಿ ಮಾಡಿದೆ.

ಈ ಹಿಂದೆ ಬೇರೆ ರಾಜ್ಯಗಳು ನೀಡಿದ ಅಹ್ವಾನವನ್ನು ತಿರಸ್ಕರಿಸಿ ಕಂಪನಿಯು ಬಂಗಾಳದ ಸಿಂಗೂರಿನಲ್ಲಿ ಘಟಕ ಸ್ಥಾಪನೆಗೆ ನಿರ್ಧರಿಸಿತ್ತು. ಆದರೆ ಈಗ ಅಲ್ಲಿನ ಸರಕಾರವು ಈ 600 ಎಕರೆ ಭೂಮಿಯನ್ನು ಮತ್ತೆ ರೈತರಿಗೆ ಮರಳಿಸುವ ಮಸೂದೆ ಅಂಗೀಕರಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ತಡೆ ಕೋರಿ ಟಾಟಾ ಮೋಟರ್ಸ್ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಸುಪ್ರಿಂ ಕೋರ್ಟ್ ಮೆಟ್ಟಲೇರಿದೆ.

More from DriveSpark

Article Published On: Tuesday, June 28, 2011, 14:02 [IST]
English summary
Tata Motors Ltd. approached the Supreme Court challenging the Kolkota ahigh court order refusing its plea to restrain West Bengal government from distributing land to farmers in Singur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+