ಸಿಂಗೂರು ಭೂ ಹಂಚಿಕೆಗೆ ಸುಪ್ರಿಂಕೋರ್ಟ್ ತಡೆ, ಟಾಟಾ ನಿರಾಳ

ಮಮತಾ ಬ್ಯಾನರ್ಜಿಯವರ ವಿವಾದಿತ ಸಿಂಗೂರು ಮಸೂದೆ ವಿರೋಧಿಸಿ ಟಾಟಾ ಮೋಟರ್ಸ್ ಸುಪ್ರಿಂ ಕೋರ್ಟ್ ಮೊರೆಹೋಗಿತ್ತು. ಹೈಕೋರ್ಟ್ ತೀರ್ಪು ಪ್ರಕಟವಾಗುವರೆಗೆ ರೈತರಿಗೆ ಭೂಮಿ ವಾಪಸ್ ಮಾಡದಂತೆ ರಾಜ್ಯ ಸರಕಾರಕ್ಕೆ ಸುಪ್ರಿಂ ಕೋರ್ಟಿನ ಏಕಸದಸ್ಯ ಪೀಠ ಇಂದು ತಡೆಯಾಜ್ಞೆ ನೀಡಿದೆ.
ಸುಪ್ರಿಂ ಕೋರ್ಟ್ ತಡೆಯಾಜ್ಞೆಯಿಂದ ಸರಕಾರಕ್ಕೆ ಹಿನ್ನಡೆಯಾಗದು. ನಾವು ಹೈಕೋರ್ಟಿನಿಂದ ಸಕಾರಾತ್ಮಕ ತೀರ್ಪಿನ ನಿರೀಕ್ಷೆಯಲ್ಲಿರುವುದಾಗಿ ಪಶ್ಚಿಮ ಬಂಗಾಳ ನಿಯೋಜಿಸಿದ ವಕೀಲರು ಹೇಳಿದ್ದಾರೆ.


Click it and Unblock the Notifications








