ರಸ್ತೆಯಿಂದ ಸರಿದುಬಿಡಿ, ಭಾರತಕ್ಕೆ ಅಸುರ ಬೈಕ್ ಟ್ರಯಂಪ್

Triumph Motorcycles
ಬ್ರಿಟನಿನ ಐಕಾನಿಕ್ ಬ್ರಾಂಡ್ "ಟ್ರಯಂಪ್ ಮೋಟರ್ ಸೈಕಲ್ಸ್" ದೇಶದ ರಸ್ತೆಗಿಳಿಯಲು ಸಜ್ಜಾಗಿದೆ. ಕೆಲವು ದಿನಗಳ ಹಿಂದೆಯೇ ಈ ಕುರಿತು ರೂಮರ್ ಗಳಿದ್ದವು. ಆದರೆ ಎಲ್ಲಾ ರೂಮರ್ ಗಳು ನಿಜವಲ್ಲವೆಂದು ನಾವು ಸುಮ್ಮನಿದ್ದೇವು. ಆದರೆ ಎಲ್ಲಾ ರೂಮರ್ ಗಳು ಸುಳ್ಳಲ್ಲವೆಂಬ ಮಾತನ್ನು "ಟ್ರಯಂಪ್" ನಿಜವಾಗಿಸಿದೆ. ನೋಡಲು ಅಸುರನಂತೆ ಕಾಣುವ ಭಾರಿ ಬೈಕ್ "ಟ್ರಯಂಪ್" ದೇಶದ ರಸ್ತೆಗಿಳಿಯುವುದನ್ನು ಕಂಪನಿ ಕನ್ ಫರ್ಮ್ ಮಾಡಿಬಿಟ್ಟಿದೆ. ರಸ್ತೆಬಿಟ್ಟು ನಿಂತುಕೊಳ್ಳಿ..

ಟ್ರಯಂಪ್ ಆಗಮಿಸುವ ಕುರಿತು ಕಂಪನಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ಭಾರತದಲ್ಲಿ ಆಡಳಿತ ತಂಡವನ್ನೂ ಕಂಪನಿ ಕಟ್ಟಿದೆ. ಆಶೀಸ್ ಜೋಷಿ ಎಂಬವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ. ಶೀಘ್ರದಲ್ಲಿ ಕಂಪನಿಯು ಇಲ್ಲಿ ಅಧಿಕೃತ ಡೀಲರ್ಷಿಪ್ ಕೇಂದ್ರಗಳನ್ನು ತೆರೆಯಲಿದೆ.

"ಬೈಕ್ ಮಾರುಕಟ್ಟೆಯಲ್ಲಿ ಭಾರತ ಪ್ರಮುಖ ಮತ್ತು ನಾವು ಬಹಳಷ್ಟು ಎಚ್ಚರಿಕೆಯಿಂದ ಇಲ್ಲಿನ ಮಾರುಕಟ್ಟೆ ಪ್ರವೇಶಿಸಲು ನಿರ್ಧರಿಸಿದ್ದೇವೆ. ಶೀಘ್ರದಲ್ಲಿ ಅಂದರೆ ಅತೀ ಶೀಘ್ರದಲ್ಲಿ ಭಾರತಕ್ಕೆ ಟ್ರಿಂಪ್ ಬೈಕ್ ಬರುತ್ತಿದೆ" ಎಂದವರು ಟ್ರಿಂಪ್ ಮೋಟರ್ ಸೈಕಲ್ ನ ಸಿಇಒ ನಿಕ್ ಬ್ಲೊರ್.

ಟ್ರಯಂಪ್ ಸ್ಕ್ರಾಂಬ್ಲರ್ ಎಂಬುದು 800 ಸಿಸಿ ಬೈಕ್. ಉಳಿದಂತೆ ಟ್ರಿಂಪ್ ಬೊನೆವಿಲ್ಲೆ ಮತ್ತು ರಾಕೆಟ್ 3 ಎಂಬ ಬೈಕ್ ಗಳು ಭಾರತದ ರಸ್ತೆಗಿಳಿಯಲಿವೆ. ಈ ಬೈಕ್ ಗಳ ಕುರಿತು ಫುಲ್ ಮಾಹಿತಿ ಶೀಘ್ರದಲ್ಲಿ ನಿರೀಕ್ಷಿಸಿ...!

More from DriveSpark

Article Published On: Wednesday, June 29, 2011, 16:54 [IST]
English summary
Iconic British two wheeler brand Triumph Motorcycles is all set to enter the Indian market. Finally there has been an official confirmation for the same after Triumph Motorcycles appointed a management team to handle its affairs in India. Ashish Joshi has been appointed as Triumph's managing director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+