ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿ, ನ್ಯಾನೊ ಕಾರು ಗೆಲ್ಲಿರಿ

Nano Car
ಜೈಪುರ, ಜೂನ್ 30: ಜನಸಂಖ್ಯೆ ನಿಯಂತ್ರಿಸಲು ಹೊಸ ಪ್ರಯತ್ನವೊಂದನ್ನು ರಾಜಸ್ಥಾನದ ಝುಂಝುನು ಜಿಲ್ಲೆಯ ಮೆಡಿಕಲ್ ಮತ್ತು ಆರೋಗ್ಯ ಇಲಾಖೆ ಮಾಡಿದೆ. ಅದೇನೆಂದರೆ ಯಾರೆಲ್ಲ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೋ ಅವರಿಗೆಲ್ಲ ನ್ಯಾನೊ ಕಾರು ಗೆಲ್ಲುವ ಬಂಪರ್ ಅವಕಾಶವಾಗಿದೆ.

ಬಹುಮಾನದ ಪಟ್ಟಿಯಲ್ಲಿ ನ್ಯಾನೊ ಮಾತ್ರವಲ್ಲದೇ 5 ಮೋಟರ್ ಸೈಕಲ್, 21 ಇಂಚಿನ 5 ಕಲರ್ ಟೆಲಿವಿಷನ್, 7 ಮಿಕ್ಸರ್ ಗ್ರೈಂಡರ್ ಕೂಡ ಇದೆ. "ನಮ್ಮ ಜಿಲ್ಲೆಯಲ್ಲಿ ಜನಸಂಖ್ಯೆ ನಿಯಂತ್ರಿಸುವುದು ಈ ಆಫರ್ ಗುರಿಯಾಗಿದೆ" ಎಂದು ಝಂಝುನು ಜಿಲ್ಲೆಯ ಮುಖ್ಯ ಮೆಡಿಕಲ್ ಆಫಿಸರ್(ಸಿಎಂಒ) ಸೀತಾರಾಮ್ ಶರ್ಮಾ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಝುಂಝುನು ಜಿಲ್ಲೆಯಲ್ಲಿ ಜನಸಂಖ್ಯೆ ಶೇ 11.8ರಷ್ಟು ಏರಿಕೆ ಕಂಡಿದೆ.

ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಸರಕಾರವು ಹಲವು ಆಮೀಷಗಳನ್ನು ಒಡ್ಡಿದ್ದರೂ, ನಾವಿಬ್ಬರು ನಮಗೊಂದೇ ಸಾಕು ಎಂದರೂ ಜನಸಂಖ್ಯೆ ಇಳಿಕೆ ಕಾಣುತ್ತಿಲ್ಲ. ಇದೀಗ ರಾಜಸ್ಥಾನದ ಝುಂಝುನು ಜಿಲ್ಲೆಯ ಪ್ರಯತ್ನ ಸಫಲವಾಗುವುದೇ ಕಾದು ನೋಡಬೇಕಿದೆ.

More from DriveSpark

Article Published On: Thursday, June 30, 2011, 17:50 [IST]
English summary
The Rajastan medical and health department in bid to encourage People to take up the family planning operation is luring them by a scheme in which lucky dip winners can win several goodies including a Tata Nano. The scheme which has been launched in the district of Jhunjhunu also offers winners motorcycles, TVs and mixer grinders.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+