ಟಾಟಾ ಮೋಟರ್ಸ್ ಘಟಕಕ್ಕೆ ಗೋಲ್ಡನ್ ಪಿಕಾಕ್ ಅವಾರ್ಡ್

ಕಂಪನಿಯ ಜೆಮ್ಷೆಡ್ಪುರ ಘಟಕ ಚಿನ್ನದ ನವಿಲುಗರಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಭಾರತದ ಮಾಜಿ ನ್ಯಾಯಮೂರ್ತಿ ಮತ್ತು ಮಾನವ ಹಕ್ಕು ಆಯೋಗದ ಸದಸ್ಯರಾದ ಪಿ. ಎನ್. ಭಗವತಿ ನೇತೃತ್ವದ ತೀರ್ಪುದಾರರ ತಂಡ ಈ ಪ್ರಶಸ್ತಿಯನ್ನು ಟಾಟಾಗೆ ದಯಾಪಾಲಿಸಿದೆ.
ಈ ಪ್ರಶಸ್ತಿಯನ್ನು ದೆಹಲಿಯಲ್ಲಿ ಇತ್ತೀಚೆಗೆ ನಡೆದ 13ನೇ ವಿಶ್ವ ಕಾಂಗ್ರೆಸ್ ಪರಿಸರ ನಿರ್ವಹಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗಿದೆ. ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಹೆಸರಿನಲ್ಲಿ 1991ರ ನಂತರ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಹಿಂದೆ ಜೀವಮಾನದ ಸಾಧನೆಗಾಗಿ ಅಣ್ಣಾ ಹಜಾರೆ ಕೂಡ ಗೋಲ್ಡನ್ ಪಿಕಾಕ್ ಪ್ರಶಸ್ತಿ ಪಡೆದಿದ್ದರು.


Click it and Unblock the Notifications








