ಆಂಟಿಲಾಕ್ ಬ್ರೇಕಿಂಗ್, ಸ್ಕಿಡ್ ಆದೀತು ಜೋಪಾನ

 Jeff dea
ವಾಹನಗಳೀಗ ಹತ್ತುಹಲವು ಸುರಕ್ಷತೆಯ ಫೀಚರ್ ಗಳೊಂದಿಗೆ ಬರುತ್ತಿವೆ. ಇದರಲ್ಲಿ ಎಬಿಎಸ್ ಹೆಚ್ಚು ಜನಪ್ರಿಯ.ಎಬಿಎಸ್ ಅಂದ್ರೆ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಸಂಕ್ಷಿಪ್ತ. ಎಬಿಎಸ್ ಎಂದರೇನು? ಅದರ ಫೀಚರ್ ಗಳೇನು? ಇದು ನಿಜಕ್ಕೂ ಡ್ರೈವಿಂಗ್ ನಲ್ಲಿ ಸುರಕ್ಷತೆ ಒದಗಿಸುವುದೇ? ಇತ್ಯಾದಿಗಳು ಎಬಿಎಸ್ ಮೇಲಿನ ಸಾಮಾನ್ಯ ಪ್ರಶ್ನೆಗಳು.

ವಾಹನ ಚಲಾಯಿಸುತ್ತಿದ್ದಾಗ ಒಮ್ಮೆಗೆ ಬ್ರೇಕ್ ಹಾಕಿ ಚಕ್ರ ತಿರುಗುದಂತೆ ಡಿಸ್ಸ್ಕ್ ಲಾಕ್ ಮಾಡುವುದೇ ಆಂಟಿಲಾಕ್ ಬ್ರೇಕಿಂಗ್. ನೀವು ಬ್ರೇಕ್ ಹಾಕಿದಕ್ಷಣ ಗಾಡಿ ನಿಲ್ಲುತ್ತದೆ. ಹಾಗಂತ ಭಯ ಪಡುವ ಅಗತ್ಯವಿಲ್ಲ. ಒಂದಿಷ್ಟು ಎಚ್ಚರಿಕೆ ಇದ್ದರೆ ಸಾಕು. ಗರಿಷ್ಠ ವೇಗದಲ್ಲಿ ಸಾಗಿದಾಗ ಒಮ್ಮೆಗೆ ಬ್ರೇಕ್ ಹಾಕಿದರೆ ಸ್ಕಿಡ್ ಆಗೋದಂತು ಗ್ಯಾರಂಟಿ.

ಇದು ಲಾಕ್ ಹಾಕಿ ಚಕ್ರ ತಿರುಗದಂತೆ ನೋಡಿಕೊಳ್ಳುತ್ತದೆ. ಆದರೂ ವೇಗದ ಒತ್ತಡಕ್ಕೆ ವಾಹನ ಮುಂದಕ್ಕೆ ಚಲಿಸಬಹುದು. ಚಕ್ರ ಮತ್ತು ರಸ್ತೆಯ ಘರ್ಷಣೆಗೆ ಸಿಲುಕಿದ ವಾಹನ ಸ್ಕಿಡ್ ಆಗಬಹುದು. ಅತೀವೇಗದಲ್ಲಿದ್ದಾಗ ಅಥವಾ ಇಳಿಜಾರು ರಸ್ತೆಯಲ್ಲಿ ಬ್ರೇಕ್ ಹಾಕಿದಾಗಲೂ ಸ್ಕಿಡ್ ಆಗಬಹುದು. ಡ್ರೈವರ್ ಕಾರ್ ತಿರುಗಿಸಲು ಯತ್ನಿಸುತ್ತ ಬ್ರೇಕ್ ಪೆಡಲ್ ತುಳಿದರೂ ಸ್ಕಿಡಾಗುತ್ತದೆ. ಆದರೆ ಇದನ್ನು ಸೂಕ್ತ ಸಮಯದಲ್ಲಿ ಬಳಸುವುದು, ವಾಹನ ನಿಯಂತ್ರಿಸುವುದು ಚಾಲಕನ ಚಾಕಚಕ್ಯತೆಯನ್ನು ಅವಲಂಬಿಸಿದೆ.

ಎಬಿಎಸ್ ಸ್ಪೀಡ್ ಸೆನ್ಸಾರ್ ಹೊಂದಿದ್ದು ಇದರಿಂದಾಗಿ ಚಕ್ರಗಳ ಮೇಲೆ ಬ್ರೇಕ್ ಒತ್ತಡ ಬೀಳುವುದನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುತ್ತದೆ. ಈಗ ಭಾರತದಲ್ಲಿ ಟಾಪ್ ಎಂಡ್ ವಾಹನಗಳಲ್ಲಿ ಮಾತ್ರ ಎಬಿಎಸ್ ಆಯ್ಕೆ ಇದೆ. ಭವಿಷ್ಯದಲ್ಲಿ ಎಲ್ಲ ವಾಹನಗಳು ಎಬಿಎಸ್ ಸಿಸ್ಟಮ್ ನೊಂದಿಗೆ ಬಂದರೆ ಅಚ್ಚರಿಯಿಲ್ಲ.

ಈಗ ಹಲವು ಮಾದರಿಯ ಎಬಿಎಸ್ ದೊರಕುತ್ತವೆ. ಎಬಿಎಸ್ ಒಳಿತಿನ ಕುರಿತು ಅಪಾರ್ಥ ಮಾಡಿಕೊಂಡವರೇ ಹೆಚ್ಚು. ಎಲ್ಲ ವೇಗಕ್ಕೂ ಮತ್ತು ತುರ್ತು ಕಾಲದ ಬ್ರೇಕಿಂಗ್ ಸಮಯದಲ್ಲಿ ಎಬಿಎಸ್ ಸುರಕ್ಷತೆಯ ಖಾತ್ರಿ ನೀಡುವುದಿಲ್ಲ. ಆದರೆ, ವಾಹನ ಸ್ಕಿಡ್ ಆಗದಂತೆ ನೋಡಿಕೊಳ್ಳುವಲ್ಲಿಯೂ ಡ್ರೈವರ್ ಗೆ ಕೊಂಚ ನೆರವಾಗುತ್ತದೆ. ಅತೀವೇಗದಲ್ಲಿದ್ದಾಗ ಒಮ್ಮೆಗೆ ಬ್ರೇಕ್ ಹಾಕಿದರೆ ಎಬಿಎಸ್ ಸುರಕ್ಷತೆ ಒದಗಿಸುತ್ತದೆ ಅಂತ ಅಂದುಕೊಳ್ಳಬಾರದು.

ಸುರಕ್ಷತೆಗೆ ಎಬಿಎಸ್ ಉತ್ತಮ ನಿಜ. ಆದರೆ ವಾಹನದಲ್ಲಿ ಡ್ರೈವರ್ ಗಿಂತ ಅತ್ಯುತ್ತಮವಾದ ಸೇಫ್ಟಿ ಫೀಚರ್ ಬೇರೆ ಯಾವುದು ಇಲ್ಲ ಎಂದು ಮರೆಯಬಾರದು.

More from DriveSpark

Article Published On: Monday, February 7, 2011, 10:50 [IST]
English summary
English Summary: An ABS generally offers improved vehicle control and decreases stopping distances on dry and slippery surfaces for many drivers. What is ABS? Is it worth the extra mark-up? Does it really add to the safety of the drive? Under what conditions does it work? Is it a must?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+