ಮಾರುಕಟ್ಟೆಗೆ ಹೋಂಡಾ ಬ್ರಿಯೋ ಬಂದ್ರೆ ಎಲ್ಲಾ ಗಡಗಡ

ಸುಮಾರು ಐದು ಜನರನ್ನು ತನ್ನ ಸುಖಾಸೀನದಲ್ಲಿ ಕುಳಿಸಿಕೊಂಡು ಹೊತ್ತೊಯ್ಯ ಬಲ್ಲ ಬ್ರಿಯೋ ಉದ್ದ ಅಗಲ ಎತ್ತರದ ವಿಸ್ತೀರ್ಣ ಹೀಗಿದೆ(length 3,610mm x width 1,680mm x height 1,475 mm). 89 Bhp at 6200 rpm 1200ಸಿಸಿ ಇಂಜಿನ್ ನ ಶಕ್ತಿ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್ ಗೆ 20 ಕಿ.ಮೀ ಮೈಲೇಜ್ ಕೊಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ರಿಡ್ಜ್, ಸ್ವಿಫ್ಟ್, ಫಿಗೋ, ಟೋಯೋಟಾ ಇಟೀಯೋಸ್ ಲಿವಾ, ಶೆವರ್ಲೆ ಬೀಟ್ ಹಾಗೂ ವೋಗ್ಸ್ ವ್ಯಾಗನ್ ಪೋಲೋ ಜೊತೆ ನೇರ ಸ್ಪರ್ಧಿಗಿಳಿಯಲು ಈ ಹ್ಯಾಚ್ ಬ್ಯಾಕ್ ಸರಣಿಯ ಹೋಂಡಾ ಸಣ್ಣ ಕಾರು ಸಜ್ಜಾಗಿದೆ. ಹೋಂಡಾ ಜಾಜ್ ಒಳ್ಳೆ ಪೈಪೋಟಿ ನೀಡಿದರೂ ಮಾರುಕಟ್ಟೆಯಲ್ಲಿ ಹಿಂದೆ ಉಳಿದಿತ್ತು.
ಹೋಂಡಾ ಬ್ರಿಯೋ ಬೆಲೆ 4.5 ಲಕ್ಷ ರು.ನಿಂದ 5 ಲಕ್ಷ ರು( ಎಕ್ಸ್ ಷೋರೂಮ್ ಬೆಲೆ ದೆಹಲಿ) ಇರುವ ಸಾಧ್ಯತೆಯಿದೆ. ಅಧಿಕೃತ ಪ್ರಕಟಣೆ ಇನ್ನೂ ಹೊರಬೀಳಬೇಕಿದೆ.


Click it and Unblock the Notifications








