ನೇಪಾಳದಲ್ಲಿ ಟಾಟಾ ನ್ಯಾನೊ ಸಕತ್ ಹಿಟ್ ಮಗಾ!

ಕಂಪನಿಯ ನಿರೀಕ್ಷೆಗಿಂತ ಹೆಚ್ಚು ನ್ಯಾನೊ ಕಾರುಗಳು ನೇಪಾಳದಲ್ಲಿ ಬುಕ್ಕಿಂಗ್ ಆಗುತ್ತಿವೆ. ಅಲ್ಲಿ ಬುಕ್ಕಿಂಗ್ ಆರಂಭವಾದ ಮೂರೇ ದಿನಗಳಲ್ಲಿ ಸುಮಾರು 200 ನ್ಯಾನೊ ಕಾರುಗಳು ಬುಕ್ಕಿಂಗ್ ಆಗಿವೆ. ಭಾರತದಲ್ಲಿನ ನ್ಯಾನೊ ಮಾರಾಟಕ್ಕೆ ಹೋಲಿಸಿದರೆ ಇದು ಒಂದು ದಾಖಲೆ ಎಂದರೂ ತಪ್ಪಾಗದು.
ನೇಪಾಳದಲ್ಲಿ ನ್ಯಾನೊ ಅಗ್ಗದ ಕಾರಲ್ಲ. ಯಾಕೆಂದರೆ ಅಲ್ಲಿ ಈ ಪುಟ್ಟ ಕಾರಿಗೆ ಸುಮಾರು 7 ಲಕ್ಷ ರುಪಾಯಿ. ನೇಪಾಳ ಸರಕಾರ ವಿಧಿಸಿರುವ ಅತ್ಯಧಿಕ ಆಮದು ಸುಂಕವೇ ವಿಶ್ವದ ಅಗ್ಗದ ಕಾರು ಖ್ಯಾತಿಯ ನ್ಯಾನೊವನ್ನು ದುಬಾರಿಯಾಗಿಸಿದೆ.
ಆಮದು ಸುಂಕ ಹೆಚ್ಚಾಗಿ ನ್ಯಾನೊ ದುಬಾರಿಯಾದರೂ ಅಲ್ಲಿನ ಜನರು ಪುಟ್ಟ ಕಾರಿನತ್ತ ಆಕರ್ಷಿತರಾಗುತ್ತಿದ್ದಾರೆ. ಅಲ್ಲಿನ ಶೋರೂಂಗಳಲ್ಲಿ ಹೆಚ್ಚು ಜನರು ವೇಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಶ್ರೀಲಂಕಾದಲ್ಲೂ ನ್ಯಾನೊ ಕಾರು ಅತ್ಯುತ್ತಮವಾಗಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಅಲ್ಲಿನ ಕಂಪನಿಯೊಂದನ್ನು ನ್ಯಾನೊ ಕಾರನ್ನು ಟಾಕ್ಸಿಯಾಗಿ ಪರಿವರ್ತಿಸಿದೆ.


Click it and Unblock the Notifications








