ಮಹೀಂದ್ರ: ಎರಡು ಹೊಸ ವೆರಿಟೊ, ಒಂದು ಸ್ಪೋರ್ಟ್ಸ್ ಕಾರು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂರು ಹೊಸ ಆವೃತ್ತಿಗಳನ್ನು ಹೊರತರಲು ಕಂಪನಿ ನಿರ್ಧರಿಸಿದೆ ಎಂದು ಮಹೀಂದ್ರ ಅಧ್ಯಕ್ಷರಾದ ಪವನ್ ಗೋಯೆಂಕ ಹೇಳಿದ್ದಾರೆ.

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಶೀಘ್ರದಲ್ಲಿ ಸೆಡಾನ್ ಕಾರು ವೆರಿಟೊದ ಎರಡು ಹೊಸ ಆವೃತ್ತಿಗಳನ್ನು ಹೊರತರಲಿದೆ. ಇದರೊಂದಿಗೆ ಕಂಪನಿಯು ಜಾಗತಿಕ ಸ್ಪೋರ್ಟ್ಸ್ ಯುಟಿಲಿಟಿ ವಾಹನವೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಪ್ರಸಕ್ತ ವರ್ಷದ ಡಿಸೆಂಬರ್ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ.

ಮಹೀಂದ್ರ ಕಂಪನಿಯು ಕೆಲವು ತಿಂಗಳ ಹಿಂದೆ ಕೊರಿಯಾದ ಸ್ಪೋರ್ಟ್ಸ್ ಕಾರು ಸ್ಪೆಷಲಿಸ್ಟ್ ಸ್ಯಾಂಗ್ಯೊಂಗ್ ನ್ನು ಸ್ವಾಧೀನ ಪಡಿಸಿಕೊಂಡಿದೆ. ಕೊರಿಯಾ ಕಂಪನಿಯ ಎಂಜಿನಿಯರ್ ಗಳ ನೆರವಿನಿಂದ ಹೊರಬರುವ ಸ್ಪೋರ್ಟ್ಸ್ ಕಾರಿನಲ್ಲಿ ಸಾಕಷ್ಟು ಪ್ರಗತಿ ನಿರೀಕ್ಷಿಸಬಹುದಾಗಿದೆ ಎಂದು ಕಂಪನಿ ಹೇಳಿದೆ.

ಇದರೊಂದಿಗೆ ಸ್ಯಾಂಗ್ಯೊಂಗ್ ಕಂಪನಿಯ ರೆಕ್ಷಾನ್ ಮತ್ತು ಕೊರಾಂಡೊ ಕಾರುಗಳು ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ. ಇವೆರಡು ಮಾಡೆಲ್ ಗಳನ್ನು ಪೂರ್ಣಪ್ರಮಾಣದಲ್ಲಿ ಕೊರಿಯಾದಿಂದ ಆಮದು ಮಾಡಿಕೊಳ್ಳಲು ಕಂಪನಿ ನಿರ್ಧರಿಸಿದೆ. ಮಹೀಂದ್ರ ವೆರಿಟೊ ಆವೃತ್ತಿಯು ಮಹೀಂದ್ರ ರೆನಾಲ್ಟ್ ಲೊಗಾನಿನ ಮುಂದುವರೆದ ಆವೃತ್ತಿಯಾಗಿದೆ.

More from DriveSpark

Article Published On: Tuesday, July 12, 2011, 13:19 [IST]
English summary
Mahindra and Mahindra will soon launch two new variants of the Verito sedan along with a new SUV this financial year. Pawan Goenka, the president of Mahindra and Mahindra said the carmaker would launch a refreshed version of the Verito and also launch a smaller version which will be in the sub-four metre in length.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+