ಇಂಡೋನೇಷ್ಯಾದಲ್ಲಿ ಟಾಟಾ ನ್ಯಾನೊ ಘಟಕ

Tata Nano
ಜಗತ್ತಿನ ಅಗ್ಗದ ಕಾರು ಖ್ಯಾತಿಯ "ಟಾಟಾ ನ್ಯಾನೊ" ಉತ್ಪಾದನಾ ಘಟಕವನ್ನು ಇಂಡೋನೇಷ್ಯಾದಲ್ಲಿ ನಿರ್ಮಿಸಲು ಟಾಟಾ ಮೋಟರ್ಸ್ ಯೋಜಿಸಿದೆ. ಥೈಲಾಂಡ್ ಗಿಂತ ಇಂಡೋನೇಷ್ಯಾವೇ ಟಾಟಾ ಮೋಟರ್ಸ್ ಗೆ ಹೆಚ್ಚು ಇಷ್ಟವಾಗಿದೆ.

ಈಗಾಗಲೇ ಏಸ್ ಮತ್ತು ಕ್ಷೆನನ್ ಮುಂತಾದ ಹಗುರ ವಾಣಿಜ್ಯ ವಾಹನಗಳನ್ನು ಥೈಲಾಂಡ್ ನಲ್ಲಿ ಕಂಪನಿ ನಿರ್ಮಿಸುತ್ತಿದೆ. ಇಲ್ಲೇ ನ್ಯಾನೊ ಕಾರುಗಳನ್ನು ಉತ್ಪಾದಿಸಿದರೆ ಹೇಗೆ ಎಂದು ಈ ಹಿಂದೆ ಟಾಟಾ ಮೋಟರ್ಸ್ ಯೋಚಿಸುತ್ತಿತ್ತು. ಆದರೆ ಥೈಲಾಂಡ್ ತೆರಿಗೆ ನೀತಿ ಕಂಪನಿಗೆ ಅನುಕೂಲಕರವಾಗಿಲ್ಲದ ಹಿನ್ನಲೆಯಲ್ಲಿ ಟಾಟಾ ಮೋಟರ್ಸ್ ಇಂಡೋನೇಷ್ಯಾದತ್ತ ಗಮನ ಹರಿಸಿದೆ.

ಇಂಡೋನೇಷ್ಯಾದಲ್ಲಿ 2013ರಿಂದ ಪ್ರತಿವರ್ಷ ಸುಮಾರು 50 ಸಾವಿರ ನ್ಯಾನೊ ಕಾರುಗಳನ್ನು ಉತ್ಪಾದಿಸುವ ಗುರಿ ಕಂಪನಿಗಿದೆ. ಅಲ್ಲಿಂದ ಥೈಲಾಂಡ್, ಮಲೇಷಿಯಾ ಮತ್ತು ಪಿಲಿಫಿನ್ಸ್ ದೇಶಗಳಿಗೆ ಪುಟ್ಟ ನ್ಯಾನೊ ಕಾರುಗಳನ್ನು ರಫ್ತು ಮಾಡಲು ಕಂಪನಿ ನಿರ್ಧರಿಸಿದೆ ಎಂದು ಇಂಡೋನೇಷ್ಯಾದ ಪತ್ರಿಕೆಯೊಂದು ವರದಿ ಮಾಡಿದೆ.

ಕಂಪನಿಯು ಈಗ ಭಾರತದಿಂದ ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗೆ ಪುಟ್ಟ ಕಾರು ನ್ಯಾನೊವನ್ನು ರಫ್ತು ಮಾಡುತ್ತಿದೆ. ಶ್ರೀಲಂಕಾದಲ್ಲಿ ನ್ಯಾನೊ ಟ್ಯಾಕ್ಸಿಯಾಗಿ ಜನಪ್ರಿಯಗೊಳ್ಳುತ್ತಿದೆ. ನೇಪಾಳದಲ್ಲಿ ಬುಕ್ಕಿಂಗ್ ಸುರುವಾದ ಮೂರೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ನ್ಯಾನೊ ಕಾರುಗಳನ್ನು ಅಲ್ಲಿನ ಜನರು ಬುಕ್ಕಿಂಗ್ ಮಾಡಿದ್ದಾರೆ.

Article Published On: Tuesday, July 12, 2011, 11:40 [IST]
English summary
Tata Motors has decided to build its Nano small car in Indonesia. Tata Motors had initially planned to expand its commercial vehicle manufacturing plant in Thailand to build the Nano. However the Indian auto major decided to move its Nano production to Indonesia after the country offered better incentives than Thailand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+