ಟೊಯೊಟಾದಲ್ಲಿ ಜಾಬ್, ಹುಬ್ಬಳ್ಳಿಯಲ್ಲಿ ಎಕ್ಸಾಂ ಬರೀರಿ

ಟೊಯೊಟಾ ಕಿರ್ಲೊಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಒಟ್ಟು ಎಷ್ಟು ಉದ್ಯೋಗ ಖಾಲಿ ಇದೆ ಎಂಬುದು ತಿಳಿದಿಲ್ಲ. ಬೆಂಗಳೂರು ಸಮೀಪದ ಬಿಡದಿಯಲ್ಲಿ ನೂತನ ಘಟಕವೊಂದು ಆರಂಭವಾಗುತ್ತಿರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗಾವಕಾಶವಿರುವ ನಿರೀಕ್ಷೆಯಿದೆ.
ಅರ್ಹತೆಗಳು
* 19ರಿಂದ 23ರವರೆಗಿನ ವಯೋಮಿತಿಯವರಿಗೆ ಮಾತ್ರ ಅವಕಾಶ.
* ಮೆಕಾನಿಕಲ್/ ಆಟೋಮೊಬೈಲ್ಸ್/ ಐಇಎಂ/ ಐಎಂ/ ಟೂಲ್ ಅಥವಾ ಡೈಮೇಕಿಂಗ್ ಅಥವಾ ಯಾವುದೇ ತರಹದ ಮೆಕಾನಿಕಲ್ ಡಿಪ್ಲೋಮ. ನೆನಪಿಡಿ ಅಭ್ಯರ್ಥಿಯು ಮೂರು ವರ್ಷದ ಫುಲ್ ಟೈಂ ಡಿಪ್ಲೋಮ ಮಾಡಿರಬೇಕು.
* ಎಸ್ಎಸ್ಎಲ್ಸಿಯಲ್ಲಿ ಶೇ. 60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.
* ಟೂಲ್ ಅಥವಾ ಡೈಮೇಕಿಂಗ್ ವಿಷಯದಲ್ಲಾದರೆ ನಾಲ್ಕು ವರ್ಷದ ಕೋರ್ಸ್ ಮಾಡಿರಬೇಕು.
* ಅಭ್ಯರ್ಥಿಗಳು ಮೂರಕ್ಕಿಂತ ಹೆಚ್ಚು ವಿಷಯದಲ್ಲಿ ಫೇಲ್ ಆಗಿರಬಾರದು. ಅಥವಾ ಪಾಸಾಗಲು ಮೂರಕ್ಕಿಂತ ಹೆಚ್ಚು ಅಟೆಂಪ್ಟ್ ತೆಗೆದುಕೊಂಡಿರಬಾರದು.
ಪ್ರವೇಶ ಪರೀಕ್ಷೆ ಮತ್ತು ಸಮಯ
ಕೆಎಲ್ಇ ಪಾಲಿಟೆಕ್ನಿಕ್, ವಿದ್ಯಾನಗರ, ಹುಬ್ಬಳ್ಳಿ-31
ಸಮಯ: ಪೂರ್ವಾಹ್ನ 9 ಗಂಟೆ
ಏನೆಲ್ಲ ತರಬೇಕು?
ಅಭ್ಯರ್ಥಿಗಳು ರಿಟನ್ ಟೆಸ್ಟ್ ಬರೆಯಲು ಬಂದಾಗ ಮರೆಯದೇ ರೆಸ್ಯೂಂ, ಪಾಸ್ ಪೋರ್ಟ್ ಗಾತ್ರದ ಒಂದು ಭಾವಚಿತ್ರ, ಹತ್ತು ಮತ್ತು ಡಿಪ್ಲೋಮಾದ ಮಾರ್ಕ್ಸ್ ಕಾರ್ಡ್(ಒರಿಜಿನಲ್ ಮತ್ತು ಜೆರಾಕ್ಸ್)
ಸಂಬಳ ಎಷ್ಟು?
ಪ್ರತಿತಿಂಗಳಿಗೆ 11,250 ರು. ಸ್ಟೈಪೆಂಡ್ ಮತ್ತು ಇತರ ಸೌಲಭ್ಯಗಳಿವೆ
ಟೊಯೊಟಾ ಕಿರ್ಲೊಸ್ಕರ್ ಘಟಕದಲ್ಲಿ ಈಗ ಇನ್ನೋವಾ, ಕೊರೊಲಾ, ಫಾರ್ಚ್ಯುನರ್ ಮತ್ತು ಎಟಿಯೋಸ್ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ. 26 ದೇಶಗಳಲ್ಲಿ 50 ಉತ್ಪಾದನಾ ಘಟಕ ಹೊಂದಿರುವ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಚಿಸಿದರೆ ನಾಡಿದ್ದು ಹುಬ್ಬಳ್ಳಿಗೆ ಹೋಗಿ ರಿಟನ್ ಟೆಸ್ಟ್ ಬರೆಯಿರಿ. ಅಥವಾ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ, ಬಂಧು ಮಿತ್ರರಿಗೆ, ಡಿಪ್ಲೊಮಾ ಆದವರಿಗೆ ಕಳುಹಿಸಲು ಮರೆಯದಿರಿ.


Click it and Unblock the Notifications








