ಫಿಯೆಸ್ಟಾ v/s ವೆಂಟೊ, ವೆರ್ನಾ, ಎಸ್ಎಕ್ಸ್4, ಲಿನಿಯಾ, ಮ್ಯಾಗ್ನಂ...

ಹೋಂಡಾ ಸಿಟಿ: ಫಿಯೆಸ್ಟಾಕ್ಕೆ ಪ್ರಮುಖ ಎದುರಾಳಿ ಹೋಂಡಾ ಸಿಟಿ ಎಂಬುದರಲ್ಲಿ ಸಂಶಯವಿಲ್ಲ. ಫೋಕ್ಸ್ ವ್ಯಾಗನ್ ಪ್ರಾಬಲ್ಯವನ್ನು ಕಡಿಮೆಯಾಗಿಸಿ ಮಿಂಚಿದ ಸಿಟಿಯನ್ನು ಕಡೆಗಣಿಸುವಂತ್ತಿಲ್ಲ. ಹೋಂಡಾ ಸಿಟಿ ಪರಿಷ್ಕೃತ ಶಕ್ತಿಶಾಲಿ ಐವಿಟೆಕ್ ಎಂಜಿನ್ ಹೊಂದಿದೆ. ಇದರ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ವಿನ್ಯಾಸದ ಕುರಿತು ಇಲ್ಲಿವರೆಗೆ ಯಾರೂ ಕೊಂಕು ನುಡಿದಿಲ್ಲ. ಹೋಂಡಾ ಸಿಟಿ ಡೀಸಲ್ ಕಾರಿಲ್ಲ ಎಂಬುದೇ ಒಂದು ಕೊರತೆ.
ಫೋಕ್ಸ್ ವ್ಯಾಗನ್ ವೆಂಟೊ: ವೆಂಟೊ ಕೂಡ ಫಿಯೆಸ್ಟಾಕ್ಕೆ ಎದುರಾಳಿ. ಫಿಯೆಸ್ಟಾಕ್ಕೆ ಹೋಲಿಸಿದರೆ ವೆಂಟೊ ಇನ್ನೂ ಹೆಚ್ಚು ಆಕರ್ಷಕವಾಗಿದೆ. ಹೆಚ್ಚು ಸ್ಥಳಾವಕಾಶವನ್ನೂ ಹೊಂದಿದೆ. ಆದರೆ ವೆಂಟೊಗೆ ಹೋಲಿಸಿದರೆ ಫಿಯೆಸ್ಟಾ ಡ್ರೈವ್ ಮಾಡುವುದು ನಗರದಲ್ಲಿ ಸುಲಭ. ಆದರೆ ಫಿಯೆಸ್ಟಾದ ಆಕರ್ಷಕ ಇಂಟಿರಿಯರ್ ಯುವ ಖರೀದಿದಾರರನ್ನು ಹೆಚ್ಚು ಸೆಳೆಯುವ ಸಾಧ್ಯತೆಯಿದೆ.
ಹ್ಯುಂಡೈ ಪ್ಲೂಡಿಕ್ ವೆರ್ನಾ: ಇತ್ತೀಚೆಗೆ ರಸ್ತೆಗಿಳಿದ ಫ್ಲೂಡಿಕ್ ವೆರ್ನಾ ಕೂಡ ಫಿಯೆಸ್ಟಾಕ್ಕೆ ಪೈಪೋಟಿ ನೀಡಲಿದೆ. ಆದರೆ ದರದ ವಿಷಯದಲ್ಲಿ ಹೆಚ್ಚಿನವರಿಗೆ ಫಿಯೆಸ್ಟಾ ಕಾರು ಇಷ್ಟವಾದರೂ ಆದೀತು.
ಮಾರುತಿ ಸುಜುಕಿ ಎಸ್ಎಕ್ಸ್4: ಸೆಡಾನ್ ಸೆಗ್ಮೆಂಟ್ ನಲ್ಲಿ ಮಾರುತಿ ಎಸ್ಎಕ್ಸ್4 ಹಿಡಿತ ಹೆಚ್ಚು ಬಲವಾಗಿದೆ. ಬ್ರಾಂಡ್ ಮೇಲಿನ ನಂಬಿಕೆಯಿಂದ ಹೆಚ್ಚಿನವರು ಈ ಕಾರು ಖರೀದಿಸುತ್ತಿದ್ದಾರೆ. ಹೀಗಾಗಿ ಫಿಯೆಸ್ಟಾಕ್ಕೆ ಇದು ಪ್ರಮುಖ ಪ್ರತಿಸ್ಪರ್ಧಿ.
ಫಿಯೆಟ್ ಲಿನಿಯಾ: ಫಿಯೆಟ್ ಕಂಪನಿಯ ಲಿನಿಯಾ ಕೂಡ ದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಹೀಗಾಗಿ ಪಿಯೆಟ್ ನ್ನು ಫಿಯೆಸ್ಟಾ ಕಡೆಗಣಿಸುವಂತ್ತಿಲ್ಲ.
ಷೆವರ್ಲೆ ಆಪ್ಟ್ರಾ ಮ್ಯಾಗ್ನಂ: ಷೆವರ್ಲೆ ಕಂಪನಿಯ ಈ ಕಾರು ಹಣದ ಮೌಲ್ಯಕ್ಕೆ ತಕ್ಕ ಕಾರೆಂದು ಜನಪ್ರಿಯಗೊಂಡಿದೆ. ಹೀಗಾಗಿ ಮ್ಯಾಗ್ನಂ ಕಡೆಗೂ ಫಿಯೆಸ್ಟಾ ಭಯಭೀತ ನೋಟನೋಡಬೇಕಿದೆ.
ನೋಡೋಣ. ಕೆಚ್ಚೆದೆಯಿಂದ ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿಗಳನ್ನು ಎದುರಿಸಿ ಫಿಗೊದಂತೆ ಫಿಯೆಸ್ಟಾ ಜನಪ್ರಿಯತೆ ಗಳಿಸುವುದೇ ಅಂತ..


Click it and Unblock the Notifications








