ವ್ಯಾಸೆಕ್ಟಮಿ ಮಾಡಿಸಿಕೊಳ್ಳಿ, ಬೆಂಗಳೂರಿನಲ್ಲಿ ನ್ಯಾನೊ ಗೆಲ್ಲಿರಿ

S muniraju
ಬೆಂಗಳೂರು, ಜುಲೈ 16: ಜಗತ್ತಿನ ಅಗ್ಗದ ಕಾರು "ನ್ಯಾನೊ" ಕುಟುಂಬ ಸವಾರಿಗೆ ಮಾತ್ರವಲ್ಲದೇ ಕುಟುಂಬ ಯೋಜನೆಗೂ ಪೂರಕವಾಗಿದೆ. ಉದ್ಯಾನನಗರಿಯಲ್ಲಿ ವ್ಯಾಸೆಕ್ಟಮಿ ಮಾಡಿಸಿಕೊಳ್ಳುವ ಪುರುಷರಿಗೆ ಹೊಸ ನ್ಯಾನೊ ಕಾರು ಗೆಲ್ಲುವ ಬಂಪರ್ ಅವಕಾಶವಿದೆ.

ಮೈಕ್ರೊಸ್ಕೋಪಿಕ್ ನಾನ್ ಸರ್ಜಿಕಲ್ ವ್ಯಾಸೆಕ್ಟಮಿ(ಎನ್ಎಸ್ವಿ) ಕಾರ್ಯಕ್ರಮ ದಾಸರಹಳ್ಳಿಯಲ್ಲಿ ಜುಲೈ20ರಿಂದ 23ರವರೆಗೆ ನಡೆಯಲಿದೆ. ಇದರಲ್ಲಿ ಹೆಚ್ಚು ಜನರು ಭಾಗವಹಿಸುವಂತೆ ಪ್ರೋತ್ಸಾಹಿಸಲು ನ್ಯಾನೊ ಕಾರಿನ ಲಾಟರಿ ಇಡಲಾಗಿದೆ. ಈ ವ್ಯಾಸೆಕ್ಟಮಿ ಕಾರ್ಯಕ್ರಮದಲ್ಲಿ ಸುಮಾರು 300 ಪುರುಷರು ಭಾಗವಹಿಸುವ ನಿರೀಕ್ಷೆಯಿದೆ.

ಅಂದಹಾಗೆ ಈ ನ್ಯಾನೊ ಕಾರಿನ ಕೊಡುಗೆ ನೀಡುತ್ತಿರುವರು ದಾಸರಹಳ್ಳಿ ಎಂಎಲ್ಎ ಎಸ್. ಮುನಿರಾಜು. ಯಲಹಂಕ ಮತ್ತು ಕೆ. ಆರ್. ಪುರಂನ ಶಾಸಕರು ಕೂಡ 5 ಬೈಕ್ ಸ್ಪಾನ್ಸರ್ ಮಾಡಿದ್ದಾರೆ. ಇವೆಲ್ಲವನ್ನು ಜುಲೈ 25ರಂದು ವಿಜೇತರಿಗೆ ನೀಡಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.

"ಇಂತಹ ಸಂತಾನಹರಣ ಚಿಕಿತ್ಸೆಯನ್ನು ಪುರುಷರು ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ನಮ್ಮ ಉದ್ದೇಶ. ಈ ಕಾರ್ಯಕ್ರಮವು ಹೆಚ್ಚು ಜನರನ್ನು ಸೆಳೆಯಲು ಯಶಸ್ವಿಯಾದರೆ ಇಂತಹ ಮುಂದಿನ ಕಾರ್ಯಕ್ರಮದಲ್ಲಿ ಇನ್ನಷ್ಟು ಕಾರುಗಳನ್ನು ಬಹುಮಾನವಾಗಿ ನೀಡಲಿದ್ದೇನೆ" ಎಂದು ಮುನಿರಾಜು ಅಶ್ವಾಸನೆ ನೀಡಿದ್ದಾರೆ.

ಸಂತಾನಹರಣ ಚಿಕಿತ್ಸೆ ಮಾಡಿಕೊಂಡರೆ ಪುರುಷರಿಗೆ 1,100 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದರೆ 2010ರಲ್ಲಿ ನಡೆಸಿದ 697 ಸ್ಟೆರಿಲೈಜೇಷನ್ ಚಿಕಿತ್ಸೆಯಲ್ಲಿ ಕೇವಲ ಶೇ. 2ರಷ್ಟು ಪುರುಷರು ಭಾಗವಹಿಸಿದ್ದಾರೆ. ಈ ನ್ಯಾನೊ ಲಾಟರಿಗೆ ಕಡಿಮೆ ಆದಾಯ ಹೊಂದಿರುವ ವರ್ಗವನ್ನು ಪ್ರಮುಖ ಟಾರ್ಗೆಟ್ ಮಾಡಿಕೊಳ್ಳಲಾಗಿದೆ.

More from DriveSpark

Article Published On: Saturday, July 16, 2011, 17:28 [IST]
English summary
Men from the Bangalore city who opt for a “keyhole” vasectomy now stand a chance to win the key to a brand new Nano car. Dasarahalli constituency MLA S. Muniraju sponsored the car for a lucky draw for males who participate in a microscopic non-surgical vasectomy (NSV) programme on July 20-23.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+